Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫುಟ್ಬಾಲ್ ನಂತೆ ಕ್ರಿಕೆಟ್ ಗೂ ಬರಲಿದೆ ರೆಡ್ ಕಾರ್ಡ್ ನಿಯಮ

ದುಬೈ, ಮಾರ್ಚ್ 9: ಕ್ರಿಕೆಟ್ ನಿಯಮಗಳನ್ನು ರೂಪಿಸುವ ಅಧಿಕೃತ ಸಂಸ್ಥೆಯಾದ ಮೆರಿಲಿಬೊನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಇದೀಗ, ಕ್ರಿಕೆಟ್ ನಲ್ಲಿಯೂ ರೆಡ್ ಕಾರ್ಡ್ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿದೆ.

ಈಗಾಗಲೇ ಫುಟ್ಬಾಲ್ ನಲ್ಲಿಈ ನಿಯಮ ಪ್ರಮುಖ ಪಾತ್ರ ವಹಿಸುತ್ತಿದ್ದು ಅದೇ ನಿಯಮವು ಕ್ರಿಕೆಟ್ ಗೆ ತಕ್ಕಂತೆ ಕೆಲವಾರು ಮಾರ್ಪಾಟುಗಳೊಂದಿಗೆ ಕ್ರಿಕೆಟ್ ನಲ್ಲಿ ಸೇರ್ಪಡೆಗೊಳ್ಳಲಿದೆ. ಈ ನಿಯಮ ಇದೇ ವರ್ಷ ಅಕ್ಟೋಬರ್ 7ರಿಂದ ಜಾರಿಗೆ ಬರಲಿದೆ.

ಅಂದಹಾಗೆ, ರೆಡ್ ಕಾರ್ಡ್ ನಿಯಮಗಳನ್ನು ಕ್ರಿಕೆಟ್ ನಲ್ಲಿ ಅಳವಡಿಸುವ ಪ್ರಸ್ತಾವನೆ 2016ರ ಡಿಸೆಂಬರ್ ನಲ್ಲೇ ಸಲ್ಲಿಸಲಾಗಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಹಾಗೂ ಎಂಸಿಸಿಗೆ ಸೇರಿದ ಸುಮಾರು 12 ಅಧಿಕಾರಿಗಳನ್ನುಳ್ಳ ತಂಡ ಕಳೆದ ಡಿಸೆಂಬರ್ ನಲ್ಲಿ ಸಭೆ ಸೇರಿ ಕ್ರಿಕೆಟ್ ನಲ್ಲಿ ರೆಡ್ ಕಾರ್ಡ್ ನಿಯಮ ಅಳವಡಿಸುವ ಕುರಿತಂತೆ ಚರ್ಚಿಸಿ ತೀರ್ಮಾನ ಕೈಗೊಂಡಿತ್ತು. ಈಗ ಅದು ಅಧಿಕೃತವಾಗಿ ಜಾರಿಯಾಗಿದೆ.[ಮುತ್ತಯ್ಯ ದಾಖಲೆಯನ್ನು ಮುರಿದ ರವಿಚಂದ್ರನ್ ಅಶ್ವಿನ್]

ಇದಲ್ಲದೆ, ಆಟಗಾರರಿಗೆ ಕಡಿವಾಣ ಹಾಕುವ ಕೆಲವಾರು ನಿಯಮಗಳಿಗೂ ಎಂಸಿಸಿ ಒಪ್ಪಿಗೆ ನೀಡಿದೆ. ಅವುಗಳ ಪಟ್ಟಿ ಇಂತಿದೆ...

ನಾಲ್ಕು ಲೆವೆಲ್ ಗಳಲ್ಲಿ ತಪ್ಪುಗಳ ವಿಂಗಡಣೆ

ನಾಲ್ಕು ಲೆವೆಲ್ ಗಳಲ್ಲಿ ತಪ್ಪುಗಳ ವಿಂಗಡಣೆ

ರೆಡ್ ಕಾರ್ಡ್ ನಿಯಮ ಹೇಗೆ ಅನ್ವಯವಾಗಲಿದೆ ಎಂಬುದಕ್ಕೂ ನಿರ್ದಿಷ್ಟವಾದ ಸಲಹೆಗಳನ್ನು ಎಂಸಿಸಿ ನೀಡಿದೆ. ಆಟಗಾರರು ಸಾಮಾನ್ಯವಾಗಿ ಎಸಗುವ ತಪ್ಪುಗಳನ್ನು ಲೆವೆಲ್ 1, ಲೆವೆಲ್ 2, ಲೆವೆಲ್ 3 ಹಾಗೂ ಲೆವೆಲ್ 4 ಗಳೆಂದು ವಿಭಾಗಿಸಲಾಗಿದ್ದು, ಈ ಎರಡೂ ಲೆವೆಲ್ ಗಳಿಗೆ ಬೇರೆ ಬೇರೆ ರೀತಿಯ ಶಿಕ್ಷೆಯ ಪ್ರಮಾಣವನ್ನು ನಿಗದಿಗೊಳಿಸಲಾಗಿದೆ.[ಆತ್ಮೀಯ ಗೆಳೆಯನ ಕೊನೆಯಾಸೆ ತೀರಿಸಿದ ಕ್ರಿಕೆಟ್ ದಿಗ್ಗಜ]

ಒಮ್ಮೆ ಮಾತ್ರ ಎಚ್ಚರಿಕೆ ಸಿಗುತ್ತೆ

ಒಮ್ಮೆ ಮಾತ್ರ ಎಚ್ಚರಿಕೆ ಸಿಗುತ್ತೆ

- ಅಂಪೈರ್ ಗಳ ನಿರ್ಧಾರಕ್ಕೆ ಅಸಮ್ಮತಿ ಸೂಚಿಸುವುದು
- ಅತಿ ಹೆಚ್ಚು ಬಾರಿ ಅಪೀಲು ಸಲ್ಲಿಸುವುದು.
ಶಿಕ್ಷೆಯ ಪ್ರಮಾಣ: ಮೊದಲು ಎಚ್ಚರಿಕೆ ನೀಡಬೇಕು. ಇದೇ ವರ್ತನೆ ಆಟಗಾರನಿಂದ ಪುನಾವರ್ತನೆಯಾದರೆ, ತಂಡದ ಐದು ರನ್ ಗಳ ಕಡಿತ ಮಾಡಬಹುದು.[ಚಿತ್ರ ಸಂಪುಟ: ಕ್ರಿಕೆಟ್ ರಂಗದ ಸಾಧಕರಿಗೆ ಪ್ರಶಸ್ತಿಯ ಗೌರವ]

ಶಾರೀರಿಕ ಹಲ್ಲೆ ಸಲ್ಲದು

ಶಾರೀರಿಕ ಹಲ್ಲೆ ಸಲ್ಲದು

- ಯಾವುದೇ ಆಟಗಾರನ ಮೇಲೆ ಶಾರೀರಿಕವಾಗಿ ಹಲ್ಲೆ ಮಾಡುವುದು
- ಉದ್ದೇಶ ಪೂರ್ವಕವಾಗಿ ಇತರ ಆಟಗಾರರ ಮೇಲೆ ಆಕ್ಷೇಪಾರ್ಹವಾಗಿ ಚೆಂಡು ಎಸೆಯುವುದು
ಶಿಕ್ಷೆಯ ಪ್ರಮಾಣ: ಐದು ರನ್ ಗಳ ಕಡಿತ

ಬೆದರಿಕೆ ಹಾಕಿದ್ರೆ ಅಷ್ಟೇ ಕತೆ

ಬೆದರಿಕೆ ಹಾಕಿದ್ರೆ ಅಷ್ಟೇ ಕತೆ

- ಅಂಪೈರ್ ಗೆ ಬೆದರಿಕೆ ಹಾಕುವುದು
- ಯಾವುದೇ ಆಟಗಾರನನ್ನು ಹೀನಾಯವಾಗಿ ಬಯ್ಯುವುದು, ಹಲ್ಲೆ ಮಾಡುವುದು, ಬೆದರಿಕೆ ಹಾಕುವುದು ಇತ್ಯಾದಿ
ಶಿಕ್ಷೆಯ ಪ್ರಮಾಣ: ತಂಡಕ್ಕೆ ಐದು ರನ್ ಗಳ ಕಡಿತ ಹಾಗೂ ಆಟಗಾರನ ಕೆಲವು ಓವರ್ ಗಳವರೆಗಿನ ನಿಷೇಧ

ಗಲಭೆ ಮಾಡಿದರೆ ಸಸ್ಪೆಂಡ್

ಗಲಭೆ ಮಾಡಿದರೆ ಸಸ್ಪೆಂಡ್

- ಮೈದಾನದಲ್ಲಿ ಗಲಭೆ ಮಾಡುವಂಥ ಯಾವುದೇ ನಡೆ
- ಅಂಪೈರ್ ಗಳಿಗೆ ಜೀವ ಬೆದರಿಕೆ ಹಾಕುವುದು
ಶಿಕ್ಷೆಯ ಪ್ರಮಾಣ: ತಕ್ಷಣವೇ ಜಾರಿಗೆ ಬರುವಂತೆ ಆಟಗಾರನ ಮೇಲೆ ನಿಷೇಧ.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+