ಸ್ಟಾರ್ ಸ್ಪೋರ್ಟ್ಸ್ ಕ್ರಿಕೆಟ್ ಲೈವ್ ತೊರೆದ ಜನಪ್ರಿಯ ನಿರೂಪಕಿ ರೀನಾ

ಸ್ಟಾರ್ ಸಮೂಹ ಸಂಸ್ಥೆಯ ಕ್ರೀಡಾ ವಾಹಿನಿ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಕನ್ನಡ ಭಾಷೆಯಲ್ಲಿ ಸಂಪೂರ್ಣವಾಗಿ ಆರಂಭಿಸಿ ಎರಡು ವರ್ಷವಾಗುತ್ತಾ ಬಂದಿದೆ. ಹಿಂದಿ, ತಮಿಳು ಭಾಷೆಯಲ್ಲಿ ಮಾತ್ರ ಇದ್ದ ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲೂ ಲಭ್ಯವಾದ ಬಳಿಕ ಕರ್ನಾಟಕ ಮೂಲೆ ಮೂಲೆ ತಲುಪಿದೆ. ಈ ಸ್ಟಾರ್ ಸ್ಪೋರ್ಟ್ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಬೈಜುಸ್ ಕ್ರಿಕೆಟ್ ಲೈವ್ ಪ್ರಸ್ತುತ ಪಡಿಸುತ್ತಿದ್ದ ನಿರೂಪಕಿ ರೀನಾ ಡಿಸೋಜಾ ಕೂಡಾ ವಾಹಿನಿ ಜೊತೆ ಜನಪ್ರಿಯತೆಯನ್ನು ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕಾಮೆಂಟರಿ ಮಾತ್ರವಲ್ಲದೆ, ಕ್ರಿಕೆಟ್ ವಿಶ್ಲೇಷಣೆ, ಹರಟೆ ಎಲ್ಲವನ್ನು ಈ ವಾಹಿನಿ ಸಾಧ್ಯವಾಗಿಸಿದೆ. ಇಂಥ ಮನರಂಜನೆ ಪ್ಲಸ್ ಕ್ರಿಕೆಟ್ ಹರಟೆ ಕಾರ್ಯಕ್ರಮವನ್ನು ರೀನಾ ನಡೆಸಿಕೊಡುತ್ತಿದ್ದರು. ವೆಂಕಟೇಶ್ ಪ್ರಸಾದ್, ಭರತ್ ಚಿಪ್ಲಿ, ವಿನಯ್ ಕುಮಾರ್ ಸೇರಿದಂತೆ ಹಲವಾರು ಮಾಜಿ ಹಾಲಿ ಕ್ರಿಕೆಟರ್ ಗಳು, ಕ್ರಿಕೆಟ್ ಮಧ್ಯದಲ್ಲಿ ಮನರಂಜನಾ ಕ್ಷೇತ್ರದ ಸೆಲೆಬ್ರಿಟಿಗಳ ಸಂದರ್ಶನವನ್ನು ಹೊಂದಿದ್ದ ಈ ಜನಪ್ರಿಯ ಕಾರ್ಯಕ್ರಮವನ್ನು ತೊರೆಯುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಇನ್ಮುಂದೆ ಈ ಕಾರ್ಯಕ್ರಮವನ್ನು ಮಧು ಹಾಗೂ ಕಿರಣ್ ಮುಂದುವರೆಸುತ್ತಿದ್ದಾರೆ. ಅವರಿಗೆ ಹಾಗೂ ವಾಹಿನಿ ಬೆಂಬಲ ನೀಡುತ್ತಿರಿ, ಎಲ್ಲರಿಗೂ ಧನ್ಯವಾದಗಳು ಎಂದು ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ. ರೀನಾ ಅವರು ಸ್ಟಾರ್ ಸ್ಪೋರ್ಟ್ ವಾಹಿನಿ ತೊರೆದಿದ್ದಾರಾ? ಅಥವಾ ಕ್ರಿಕೆಟ್ ಕಾರ್ಯಕ್ರಮವನ್ನು ಮಾತ್ರ ತೊರೆದಿದ್ದಾರಾ? ಎಂಬ ಗೊಂದಲದಲ್ಲಿ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ನಿಮಗಾಗಿ ನಿಮ್ಮ ಕನ್ನಡ ಮಾತು ಕೇಳಲು ನಾವು ವಾಹಿನಿ ನೋಡುತ್ತಿದ್ದೆವು ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications