Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Gambhir vs sreesanth: 'ನೀನು ಫಿಕ್ಸರ್‌' ಮೈದಾನದಲ್ಲಿ ನಡೆದ ಸಂಗತಿ ತಿಳಿಸಿದ ಶ್ರೀಶಾಂತ್

ಕ್ರಿಕೆಟ್ ಅಂಗಳದಲ್ಲಿ ಮಾತಿನ ಚಕಮಕಿ ಕಾಮನ್‌.. ಇನ್ನು ಸ್ಲೆಡ್ಜಿಂಗ್‌ನ್ನು ಸಹ ಅಂಗಳದಲ್ಲಿ ಕಾಣಬಹುದು. ಆದರೆ, ಇದು ಒಂದು ಹಂತಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಕ್ರಿಕೆಟ್‌ಗೆ ಗುಡ್‌ಬಾಯ್ ಹೇಳಿದ ಮೇಲೂ ಇಂತಹ ಪ್ರಸಂಗ ಕಾಣಿಸಿಕೊಳ್ಳುವುದು ವಿರಳ.

ಕ್ರಿಕೆಟ್‌ನಿಂದ ನಿವೃತ್ತರಾದ ಸ್ಟಾರ್‌ಗಳ ನಡುವೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಆಡಲಾಗುತ್ತಿದೆ. ಈ ಟೂರ್ನಿಯಲ್ಲಿ ಬುಧವಾರ ರಾತ್ರಿ ಗುಜರಾತ್ ಜೈಂಟ್ಸ್ ಮತ್ತು ಇಂಡಿಯಾ ಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಶ್ರೀಶಾಂತ್ ಗುಜರಾತ್ ಪರ ಆಡಿದರೆ, ಗೌತಮ್ ಗಂಭೀರ್ ಇಂಡಿಯಾ ಕ್ಯಾಪಿಟಲ್ಸ್ ಪರ ಬ್ಯಾಟಿಂಗ್ ಮಾಡುತ್ತಿದ್ದರು.

ಗೌತಮ್ ಗಂಭೀರ್, ಶ್ರೀಶಾಂತ್ ಅವರ ಕೆಲವು ಎಸೆತಗಳಲ್ಲಿ ಕೆಲವು ಉತ್ತಮ ಸಿಕ್ಸರ್‌ಗಳು ಮತ್ತು ಬೌಂಡರಿಗಳನ್ನು ಬಾರಿಸಿದರು. ಇದಾದ ಬಳಿಕ ಆಗಿನ ಕಾಲದ ಅಗ್ರೆಸಿವ್ ಕ್ರಿಕೆಟಿಗರ ನಡುವೆ ಮಾತಿನ ಚಕಮಕಿ ಪ್ರಾರಂಭವಾಯಿತು.

ಪಂದ್ಯದ ವೇಳೆ ಮಾತಿನ ಚಕಮಕಿ ವಿಕೋಪ ಪಡೆಯಿತು. ಈ ಇಬ್ಬರು ಮಾಜಿ ಭಾರತೀಯ ಕ್ರಿಕೆಟಿಗರು ಪರಸ್ಪರ ಕೆಸರು ಎರೆಚಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆ ಶುರುವಾಗಿದೆ.

Reesanth on what Gautam Gambhir said in Legends League

ಗುರುವಾರ ಬೆಳಿಗ್ಗೆ, ಶ್ರೀಶಾಂತ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಲೈವ್ ವೀಡಿಯೊವನ್ನು ಪೋಸ್ಟ್‌ ಮಾಡಿದ್ದಾರೆ, ಇದರಲ್ಲಿ ಅವರು ಪಂದ್ಯದ ಸಮಯದಲ್ಲಿ ಗೌತಮ್ ಗಂಭೀರ್ ಜೊತೆಗಿನ ಜಗಳದ ಬಗ್ಗೆ ಮಾಹಿತಿ ನೀಡಿದ್ದಾರೆ. ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಗಂಭೀರ್ ತನ್ನನ್ನು ಪದೇ ಪದೇ ನಿಂದಿಸಿದರು. ಮತ್ತು ನನ್ನ ವಿರುದ್ಧ ನಿಂದನೀಯ ಪದಗಳನ್ನು ಬಳಸಿದರು. ಮತ್ತು ತನ್ನನ್ನು ಫಿಕ್ಸರ್ ಎಂದು ಕರೆಯುವ ಮೂಲಕ ಅವಮಾನಿಸಿದರು ಎಂದು ಶ್ರೀಶಾಂತ್ ಹೇಳಿದ್ದಾರೆ.

"ಪ್ರತಿ ಚಾನೆಲ್‌ಗೆ ಹೋಗಿ ಅದನ್ನು ಮತ್ತೆ ಮತ್ತೆ ಹೇಳುವ ಬದಲು, ನಾನು ಲೈವ್‌ಗೆ ಬಂದು ಎಲ್ಲವನ್ನೂ ಒಂದೇ ಬಾರಿಗೆ ಸ್ಪಷ್ಟಪಡಿಸುವುದು ಉತ್ತಮ. ನಾನು ಒಬ್ಬ ಸಾಮಾನ್ಯ ವ್ಯಕ್ತಿ. ನನ್ನ ಕುಟುಂಬ ಮತ್ತು ನನ್ನ ಅಭಿಮಾನಿಗಳ ಬೆಂಬಲದೊಂದಿಗೆ ನಾನು ನನ್ನ ಹೋರಾಟವನ್ನು ಏಕಾಂಗಿಯಾಗಿ ಎದುರಿಸುತ್ತೇನೆ" ಎಂದು ಶ್ರೀಶಾಂತ್ ಹೇಳಿದ್ದಾರೆ.

"ಪಿಚ್‌ನ ಮಧ್ಯದಲ್ಲಿ, ಗಂಭೀರ್ ನನ್ನನ್ನು ಫಿಕ್ಸರ್.. ಫಿಕ್ಸರ್.. ಫಿಕ್ಸರ್.. ಎಂದು ನಿಂದನೀಯ ಭಾಷೆ ಬಳಸಿದರು. ಪದೇ ಪದೇ ಅಂಗಳದಲ್ಲಿ ಫಿಕ್ಸರ್ ಎಂದು ಕರೆಯುತ್ತಿದ್ದರು. ನಾನು ಸುಮ್ಮನೆ ಇದ್ದೇ. ನಗುತ್ತಾ ನೀನು ಏನು ಹೇಳುತ್ತಿರುವೆ ಎಂದು ಕೇಳಿದ್ದೆ. ನಾನು ಯಾವತ್ತೂ ಯಾವುದೇ ತಪ್ಪು ಪದವನ್ನಾಗಲಿ, ಅಸಹ್ಯವಾದ ಪದವನ್ನಾಗಲಿ ಬಳಸಿಲ್ಲ. ನಾನು ಅಲ್ಲಿಂದ ದೂರ ಹೋದಾಗಲೂ ಅಂಪೈರ್ ತಡೆಯುತ್ತಿದ್ದಾಗಲೂ ಅವರು ಅಂಪೈರ್‌ಗೂ ಈ ಮಾತುಗಳನ್ನೆ ಹೇಳಿದರು" ಎಂದು ತಿಳಿಸಿದ್ದಾರೆ.

ಗಂಭೀರ್ ಈ ರೀತಿಯ ವರ್ತನೆಯನ್ನು ನನ್ನೊಂದಿಗೆ ಮಾತ್ರ ಮಾಡುತ್ತಿಲ್ಲ, ಆದರೆ ಅನೇಕ ಜನರೊಂದಿಗೆ ಇದೇ ರೀತಿ ನಡೆದುಕೊಂಡಿದ್ದಾರೆ. ಅವರು ಹೀಗೆ ಏಕೆ ಮಾಡುತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ. ವಿಕೆಟ್ ಪತನದ ವಿರಾಮದ ವೇಳೆಯೂ ಅವರು ನನಗೆ ನಿಂದಿಸುತ್ತಲೇ ಇದ್ದರು ಎಂದು ತಿಳಿಸಿದ್ದಾರೆ.

Story first published: Thursday, December 7, 2023, 16:52 [IST]
Other articles published on Dec 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+