ಐಪಿಎಲ್ ಇತಿಹಾಸದ ಬೆಸ್ಟ್ ಜೊತೆಯಾಟಗಳು: ಆರ್‌ಸಿಬಿ ಜೋಡಿಗೆ ಅಗ್ರ ಸ್ಥಾನ
ಶ್ರೀಮಂತ ಲೀಗ್ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಲೀಗ್‌ನಲ್ಲಿ ಅಬ್ಬರಿಸಲು ಆಟಗಾರರು ತಯಾರಿ ನಡೆಸಿದ್ದಾರೆ. ಮಾರ್ಚ್ 28 ರಂದು 19ನೇ ಆವೃತ್ತಿಯ ಐಪಿಎಲ್ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಲಿವೆ.
ಐಪಿಎಲ್‌ನಲ್ಲಿ ಬ್ಯಾಟರ್‌ಗಳು ಆರ್ಭಟ ಜೋರಾಗಿರುತ್ತದೆ. ಹೊಡಿ ಬಡಿ ಆಟದ ಸ್ಟಾರ್ ಆಟಗಾರರು ಮೈದಾನದಲ್ಲಿ ಎದುರಾಳಿ ಬೌಲರ್‌ಗಳ ನಿದ್ದೆ ಗೆಡಿಸಿದ್ದಾರೆ. ದೊಡ್ಡ ಇನಿಂಗ್ಸ್ ಕಟ್ಟಿ ಸ್ಟಾರ್ ಪ್ಲೇಯರ್ ಮಿಂಚಿದ್ದಾರೆ. ಈ ವೇಳೆ ತಮ್ಮ ಜೊತೆಗಿರುವ ಆಟಗಾರರನ್ನು ಸಹ ಚೆನ್ನಾಗಿ ಆಡುವಂತೆ ಪ್ರೇರೆಪಿಸಿದ್ದಾರೆ. ಐಪಿಎಲ್ ಇತಿಹಾಸದ ಬೆಸ್ಟ್ ಜೊತೆಯಾಟಗಳ ಬಗ್ಗೆ ಮಾಹಿತಿ ಇಲ್ಲಿದೆ. ಈ ಪಟ್ಟಿಯಲ್ಲಿ ಆರ್‌ಸಿಬಿ ಜೋಡಿಗೆ ಅಗ್ರ ಸ್ಥಾನ.

ಐಪಿಎಲ್ ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ಹಾಕಿದಾಗ ಅತಿ ಹೆಚ್ಚು ಜೊತೆಯಾಟಗಳನ್ನು ನೀಡಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರಿಗೂ ಸ್ಥಾನ. ಮೇ 14, 2016 ಆರ್‌ಸಿಬಿ ಹಾಗೂ ಗುಜರಾತ್ ಲಯನ್ಸ್ ನಡುವಣ ಪಂದ್ಯ ಬೆಂಗಳೂರಿನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ವಿರಾಟ್ ಹಾಗೂ ಎಬಿಡಿ ಎರಡನೇ ವಿಕೆಟ್‌ಗೆ 229 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಇದು ಐಪಿಎಲ್ ಇತಿಹಾಸದ ಬೆಸ್ಟ್ ಪಾಲುದಾರಿಕೆ ಆಗಿದೆ.
ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್
ಎದುರಾಳಿ ಬೌಲರ್‌ಗಳ ನಿದ್ದೆ ಹಾಳು ಮಾಡುತ್ತಿದ್ದ ಬ್ಯಾಟಿಂಗ್ ಜೋಡಿಯಲ್ಲಿ ಆರ್‌ಸಿಬಿ ತಂಡದ ಸ್ಫೋಟಕ ಬ್ಯಾಟರ್ ಎಬಿಡಿ ವಿಲಿಯರ್ಸ್ ಹಾಗೂ ವಿರಾಟ್ ಅವರಿಗೆ ಸ್ಥಾನ. ಎಬಿಡಿ ತಮ್ಮ ಬಿಗ್ ಹಿಟ್ ಮೂಲಕ ರನ್ ವೇಗಕ್ಕೆ ಚುರುಕು ಮುಟ್ಟಿಸಿದರೆ, ವಿರಾಟ್ ಸ್ಕಿಲ್ ಮೂಲಕ ಎದುರಾಳಿಗಳನ್ನು ಕಾಡುವ ಬ್ಯಾಟರ್. ಈ ಜೋಡಿಯ ಹೆಸರಿನಲ್ಲಿಯೇ ಎರಡನೇ ಉತ್ತಮ ಜೊತೆಯಾಟದ ದಾಖಲೆ ಇದೆ. ಮೇ 10, 2015 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆ ಅಂಗಳದಲ್ಲಿ ಈ ಜೋಡಿ 215 ರನ್‌ಗಳ ಭರ್ಜರಿ ಜೊತೆಯಾಟವನ್ನು ನೀಡಿ ತಂಡಕ್ಕೆ ನೆರವಾಗಿತ್ತು.

ಕೆಎಲ್ ರಾಹುಲ್, ಕ್ವಿಂಟನ್ ಡಿಕಾಕ್
ಲಕ್ನೋ ಸೂಪರ್ ಜೈಂಟ್ಸ್ ಪರ ಆಡುವಾಗ ಕೆಎಲ್ ರಾಹುಲ್ ಹಾಗೂ ಎಡಗೈ ಬ್ಯಾಟರ್ ಕ್ವಿಂಟನ್ ಡಿಕಾಕ್ ಅವರು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 210 ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ನೀಡಿತ್ತು. ಇದು ಐಪಿಎಲ್ ಇತಿಹಾಸದ ಮೂರನೇ ಬೆಸ್ಟ್ ಜೊತೆಯಾಟವಾಗಿದೆ.
ಗಿಲ್, ಸಾಯಿ
ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಯುವ ಜೋಡಿ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಇದೆ. ಈ ಜೊಡಿ ಮೇ 10, 2024 ರಂದು ಗುಜರಾತ್ ಪರ ಕಣಕ್ಕೆ ಇಳಿದ ಜೊಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್‌ಗಳನ್ನು ದಂಡಿಸಿತ್ತು. ಈ ಜೊಡಿ 210 ರನ್‌ಗಳ ಜೊತೆಯಾಟವನ್ನು ನೀಡಿ ದಾಖಲೆ ನಿರ್ಮಿಸಿದೆ.
ಶಾನ್ ಮಾರ್ಷ್, ಆಡಮ್ ಗಿಲ್‌ಕ್ರಿಸ್ಟ್
ಮೇ 17, 2011 ರಂದು ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಶಾನ್ ಮಾರ್ಷ್ ಮತ್ತು ಆಡಮ್ ಗಿಲ್‌ಕ್ರಿಸ್ಟ್ ಜೋಡಿ ಕಣಕ್ಕೆ ಇಳಿಯುತ್ತದೆ. ಈ ಜೋಡಿ ಆರ್‌ಸಿಬಿ ವಿರುದ್ಧ ಎರಡನೇ ವಿಕೆಟ್‌ಗೆ 206 ರನ್‌ಗಳನ್ನು ಸೇರಿಸಿದೆ. ಇದು ಸಹ ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದೆ.
ಈ ಐಪಿಎಲ್‌ನಲ್ಲಿ ಯಾವ ಜೋಡಿ ಈ ದಾಖಲೆಯ ಪಟ್ಟಿಗೆ ತಮ್ಮ ಹೆಸರು ಸೇರಿಸಲಿದೆ ಎಂಬ ಪ್ರಶ್ನೆ ಮೂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications