Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ-ಅನುಷ್ಕಾರ ಮಗು ಗಂಡೋ, ಹೆಣ್ಣೋ?: ಪಂಡಿತ್ ಜಗನ್ನಾಥ್ ಭವಿಷ್ಯ

Renowned Astrologer Pandit Jagannath predicts the gender of Virat Kohli and Anushka Sharma’s baby

ಬೆಂಗಳೂರು: ಆಗಸ್ಟ್ 27ರಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಜನವರಿ ವೇಳೆಗೆ ತಾವಿಬ್ಬರೂ ಅಪ್ಪ-ಅಮ್ಮ ಅನ್ನಿಸಿಕೊಳ್ಳಲಿದ್ದೇವೆ ಎಂದು ಕೊಹ್ಲಿ-ಅನುಷ್ಕಾ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದರು. ಖುಷಿಯ ಸಂಗತಿ ಹಂಚಿಕೊಂಡ ವಿರಾಟ್-ಅನುಷ್ಕಾ ದಂಪತಿಗೆ ಸೆಲೆಬ್ರಿಟಿಗಳಿಂದ, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು.

ತಾವು ಅಪ್ಪ-ಅಮ್ಮನಾಗಲಿರುವ ವಿಚಾರವನ್ನು ವಿರುಷ್ಕಾ ಬಹಿರಂಗಪಡಿಸುತ್ತಲೇ ಅಭಿಮಾನಿಗಳು ಒಂದಿಷ್ಟು ಮಂದಿ ಜನವರಿಯಲ್ಲಿ ಜೂನಿಯರ್ ಕೊಹ್ಲಿ ಬರಲಿದ್ದಾನೆ ಎಂದಿದ್ದರು. ಇನ್ನೂ ಕೆಲವರು ಪುಟಾಣಿ ಅನುಷ್ಕಾ ಬರಲಿ ಎಂದು ಹಾರೈಸಿದ್ದರು.

ಹಾಗಾದರೆ ಕೊಹ್ಲಿ ದಂಪತಿಗೆ ಹುಟ್ಟಲಿರುವ ಮಗು ಹೆಣ್ಣಾ, ಗಂಡಾ? ಭವಿಷ್ಯಕಾರ ಪಂಡಿತ್ ಜಗನ್ನಾಥ್ ಅವರು ಕೊಹ್ಲಿಗೆ ಹುಟ್ಟಲಿರುವ ಮಗು ಹೆಣ್ಣೋ-ಗಂಡೋ ಎಂಬ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ದುಬೈನಲ್ಲಿ ವಿರಾಟ್-ಅನುಷ್ಕಾ

ದುಬೈನಲ್ಲಿ ವಿರಾಟ್-ಅನುಷ್ಕಾ

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ ಸಜ್ಜಾಗಿರುವ ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ ಮತ್ತವರ ಪತ್ನಿ ಅನುಷ್ಕಾ ಶರ್ಮಾ ಸದ್ಯ ದುಬೈನಲ್ಲಿದ್ದಾರೆ. ಸೆಪ್ಟೆಂಬರ್ 19ರಿಂದ ಐಪಿಎಲ್ 2020ರ ಆವೃತ್ತಿಯ ಪಂದ್ಯಗಳು ದುಬೈ, ಅಬುಧಾಬಿ ಮತ್ತು ಶಾರ್ಜಾ ತಾಣಗಳಲ್ಲಿ ನಡೆಯಲಿವೆ. ಅಂದ್ಹಾಗೆ, ವಿರಾಟ್-ಅನುಷ್ಕಾ ಅಪ್ಪ ಅಮ್ಮನಾಗುತ್ತಿರುವ ಖುಷಿಯನ್ನು ಆರ್‌ಸಿಬಿ ಆಟಗಾರರು ಯುಎಇಯಲ್ಲಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದರು.

ಯಾರೀ ಪಂಡಿತ್ ಜಗನ್ನಾತ್?

ಯಾರೀ ಪಂಡಿತ್ ಜಗನ್ನಾತ್?

ವಿರಾಟ್ ಕೊಹ್ಲಿಗೆ ಹುಟ್ಟಲಿರುವ ಮಗು ಹೆಣ್ಣೋ-ಗಂಡೋ ಎಂದು ಭವಿಷ್ಯ ನುಡಿದಿರುವ ಪಂಡಿತ್ ಜಗನ್ನಾಥ್ ಬೆಂಗಳೂರಿನವರು. ಬೆಂಗಳೂರಿನಲ್ಲಿ ಜನಪ್ರಿಯ ಜ್ಯೋತಿಷಿ, ಪ್ರೊಫೆಸಿಯರ್ ಮತ್ತು ಲೋಕೋಪಕಾರಿ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಸುಮಾರು 25 ವರ್ಷಗಳಿಂದಲೂ ಜಗನ್ನಾತ್ ಭವಿಷ್ಯ ಹೇಳುತ್ತಿದ್ದಾರೆ.

ಭವಿಷ್ಯ ನುಡಿದ ಗುರೂಜಿ

ಭವಿಷ್ಯ ನುಡಿದ ಗುರೂಜಿ

'ವಿರಾಟ್-ಅನುಷ್ಕಾ ದಂಪತಿಗೆ ಹುಟ್ಟಲಿರುವ ಮಗು ಅದು ಹೆಣ್ಣಾಗಲೀ ಗಂಡಾಗಲೀ ಎರಡೂ ದೇವರ ಉಡುಗೊರೆ. ವಾಸ್ತವವಾಗಿ, ಹುಡುಗಿಯರು ವಿವಿಧ ಕ್ಷೇತ್ರಗಳಲ್ಲಿ ಹುಡುಗರನ್ನು ಮೀರಿಸುತ್ತಿದ್ದಾರೆ. ವಿರಾಟ್ ಮತ್ತು ಅನುಷ್ಕಾರ ಮುಖ ಓದಿದರೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಹೆಚ್ಚಿದೆ,' ಎಂದು ಏಷ್ಯಾನೆಟ್ ನ್ಯೂಸ್ ಜೊತೆ ಮಾತನಾಡಿದ ಗುರೂಜಿ ಹೇಳಿದ್ದಾರೆ.

2017ರಲ್ಲಿ ಅನುಷ್ಕಾ-ವಿರಾಟ್ ಮದುವೆ

2017ರಲ್ಲಿ ಅನುಷ್ಕಾ-ವಿರಾಟ್ ಮದುವೆ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2017ರ ಡಿಸೆಂಬರ್ 11ರಂದು ಸತಿಪತಿಗಳಾಗಿದ್ದರು. ಕೊಹ್ಲಿ-ಅನುಷ್ಕಾ ದಂಪತಿಗೆ ಹುಟ್ಟುವ ಮಗು ಗಂಡಾಗಲೀ ಹೆಣ್ಣಾಗಲೀ ಒಟ್ಟಿನಲ್ಲಿ ಆರೋಗ್ಯವಾಗಿರಲಿ. ವಿಶ್ವದಗಲ ಇರುವ ಕೋಟ್ಯಾಂತರ ಅಭಿಮಾನಿಗಳ ಹರಕೆ, ಹಾರೈಕೆ ಆ ಮಗುವನ್ನು ಕಾಯಲಿ ಎಂಬುದಷ್ಟೇ ನಮ್ಮ ಹಾರೈಕೆ.

Story first published: Friday, September 4, 2020, 23:27 [IST]
Other articles published on Sep 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+