Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗಂಭೀರ್‌ ಬಾಯ್ಸ್‌ ವಿರುದ್ಧ BCCI ಗರಂ; ಪ್ರವಾಸದ ಬಳಿಕ ರಿವ್ಯೂವ್‌ ಮೀಟಿಂಗ್

ಇಂಗ್ಲೆಂಡ್‌ ಹಾಗೂ ಐರ್ಲೆಂಡ್‌ನಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿದೆ. ಸೂರ್ಯಕುಮಾರ್ ಯಾದವ್ ಅವರಿಂದ ನಾಯಕತ್ವ ಕಸಿದುಕೊಂಡು ಶ್ರೇಯಸ್‌ ಅಯ್ಯರ್‌ ಅವರಿಗೆ ಬಿಸಿಸಿಐ ಆಯ್ಕೆ ಸಮಿತಿ ಚುಕ್ಕಾಣಿ ನೀಡಿತ್ತು. ಆದರೆ ಶ್ರೇಯಸ್ ಅಯ್ಯರ್ ಪಡೆ ಹೀನಾಯ ಪ್ರದರ್ಶನ ನೀಡಿದೆ. ಈ ಬೆನ್ನಲ್ಲೆ ಬಿಸಿಸಿಐ ಕಠಿಣ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಇಂಗ್ಲೆಂಡ್‌ ಹಾಗೂ ಐರ್ಲೆಂಡ್‌ನಲ್ಲಿ ಸರಣಿ ಸೋಲಿನ ಬೆನ್ನಲ್ಲೆ ಕೋಚ್‌ ಗೌತಮ್‌ ಗಂಭೀರ್ ಹಾಗೂ ನಾಯಕ ಶ್ರೇಯಸ್‌ ಅಯ್ಯರ್ ಅವರ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಬ್ರಿಸ್ಟಲ್‌ನಲ್ಲಿ ಟೀಮ್ ಇಂಡಿಯಾ ನಾಲ್ಕನೇ ಟಿ20 ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿದ ಬಳಿಕ ಬಿಸಿಸಿಐ ಪರಾಮರ್ಶೆ ನಡೆಸಲು ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

BCCI

ಟೀಮ್ ಇಂಡಿಯಾದ ಹಾಲಿ ಕೋಚ್‌ ಗೌತಮ್‌ ಗಂಭೀರ್ ಅವರ ಅಧಿಕಾರ ಅವಧಿ 2027ರ ವರೆಗೂ ಇದ್ದರೂ ಸಹ ತಂಡ ನೀಡುತ್ತಿರುವ ಪ್ರದರ್ಶನ ಇವರ ಸ್ಥಾನಕ್ಕೂ ಕುತ್ತು ತರುವ ಸಂಭವವಿದೆ. ವರದಿಗಳ ಅನುಸಾರ ಇಂಗ್ಲೆಂಡ್ ಪ್ರವಾಸ ಮುಗಿದ ಬಳಿಕ ಬಿಸಿಸಿಐ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳ ಜೊತೆಗೆ ರಿವ್ಯೂವ್ ಮೀಟಿಂಗ್ ಮಾಡುವ ಸಾಧ್ಯತೆ ಇದೆ.

ಇಂಗ್ಲೆಂಡ್‌ ಪ್ರವಾಸದ ಬಳಿಕ ರಿವ್ಯೂವ್ ಮೀಟಿಂಗ್

ರಿವ್ಯೂವ್ ಮೀಟಿಂಗ್‌ನಲ್ಲಿ ಬಿಸಿಸಿಐ ಹಲವು ಪ್ರಶ್ನೆಗಳು ಕೇಳಬಹುದು. ಇಂಗ್ಲೆಂಡ್ ಹಾಗೂ ಐರ್ಲೆಂಡ್‌ ಪ್ರವಾಸದಲ್ಲಿ ತಂಡ ಕಂಡ ಸೋಲಿಗೆ ಬಿಸಿಸಿಐ ಕೇಳುವ ಕಠಿಣ ಸವಾಲುಗಳಿಗೆ ಟೀಮ್ ಇಂಡಿಯಾ ಆಟಗಾರರು ಉತ್ತರ ನೀಡುವ ಅನಿವಾರ್ಯತೆ ಇದೆ. ಈ ಸರಣಿ ಸೋಲುಗಳ ಬೆನ್ನಲ್ಲೆ ಬಿಸಿಸಿಐ, ಕೋಚ್‌ ಅವರಿಗೂ ಪ್ರಶ್ನೆಗಳನ್ನು ಹಾಕಲಿದೆ. ಅಲ್ಲದೆ ಟೀಮ್ ಇಂಡಿಯಾದ ನೂತನ ನಾಯಕ ಶ್ರೇಯಸ್ ಅಯ್ಯರ್ ಅವರ ರಿಪೋರ್ಟ್‌ ಕಾರ್ಡ್‌ ಕೇಳಲಿದೆ ಎಂದು ತಿಳಿದು ಬಂದಿದೆ.

ಆಟಗಾರರ ಪ್ರದರ್ಶನದ ಮೇಲೆ ಪ್ರಶ್ನೆ

ಉಪನಾಯಕ ತಿಲಕ್ ವರ್ಮಾ ಅವರ ಪ್ರದರ್ಶನದ ಮೇಲೂ ಪ್ರಶ್ನೆಗಳನ್ನು ಕೇಳುವ ಸಾಧ್ಯತೆ ಇದೆ. ಐರ್ಲೆಂಡ್‌ ವಿರುದ್ಧದ ಮೊದಲ ಪಂದ್ಯದಿಂದ ಈ ವರೆಗೆ ತಿಲಕ್ ವರ್ಮಾ ಒಂದೇ ಒಂದು ದೊಡ್ಡಿ ಇನಿಂಗ್ಸ್‌ ಕಟ್ಟಿಲ್ಲ. ಈ ವೇಳೆ ತಿಲಕ್ ಅವರ ಸ್ಟ್ರೈಕ್‌ ರೇಟ್‌ ಚರ್ಚಾ ವಿಷಯವಾಗಿದೆ. ಇಶಾನ್‌ ಕಿಶನ್‌ ಸಹ ಪ್ರಶ್ನೆಗಳನ್ನು ಎದುರಿಸುವ ಸಾಧ್ಯತೆ ಇದೆ. ಇವರು ಸಹ ಕಳೆದ ಐದು ಪಂದ್ಯಗಳಲ್ಲಿ ಒಂದೂ ಅರ್ಧಶತಕ ಬಾರಿಸಿಲ್ಲ.

ಕಳೆದ ಎರಡು ವಾರಗಳಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡುತ್ತಿದೆ. ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಐರ್ಲೆಂಡ್ ವಿರುದ್ಧ ಪಂದ್ಯ ಸೋತಿದೆ. ಅಷ್ಟೇ ಅಲ್ಲ ಸರಣಿ ಸೋಲಿನ ಕಹಿಯನ್ನು ಕಂಡಿದೆ. ಅಲ್ಲದೆ ಇಂಗ್ಲೆಂಡ್ ಪ್ರವಾಸದಲ್ಲೂ ಇನ್ನೂ ಒಂದೇ ಒಂದು ಗೆಲುವಿನ ಸಿಹಿಯನ್ನು ಕಂಡಿಲ್ಲ. 190 ರನ್‌ ಡಿಫೆಂಡ್‌ ಮಾಡಿಕೊಳ್ಳಲು ಪರದಾಟ ನಡೆಸಿದ್ದ ಟೀಮ್ ಇಂಡಿಯಾ, 202 ರನ್‌ ಸೇರಸುವಲ್ಲಿ ವಿಫಲವಾಗಿ ಪಂದ್ಯ ಕೈ ಚೆಲ್ಲಿದೆ.

Story first published: Friday, July 10, 2026, 16:16 [IST]
Other articles published on Jul 10, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+