For Quick Alerts
ALLOW NOTIFICATIONS  
For Daily Alerts
 

ಟೀಮ್ ಮ್ಯಾನೇಜ್‌ಮೆಂಟ್ ವಿರುದ್ಧ ಇಶಾನ್ ಕಿಶನ್ ಮುನಿಸಿಗೆ ಕಾರಣ ಬಹಿರಂಗ; ಈ ಕ್ರಿಕೆಟಿಗನೇ ಕಾರಣ!

ಕಳೆದ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಭಾರತ ಕ್ರಿಕೆಟ್ ತಂಡ ಮೂರು ಸ್ವರೂಪಗಳ ಸುದೀರ್ಘ ಕ್ರಿಕೆಟ್ ಆಡಿತ್ತು. ಹರಿಣ ಪಡೆ ವಿರುದ್ಧದ ಸರಣಿಗೆ ಮುಂಚಿತವಾಗಿ, ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಮಾನಸಿಕ ಆಯಾಸವನ್ನು ಉಲ್ಲೇಖಿಸಿ ಭಾರತ ತಂಡದಿಂದ ಹೊರಗುಳಿದರು.

ಭಾರತ ತಂಡದ ಮ್ಯಾನೇಜ್‌ಮೆಂಟ್ ಅವರಿಗೆ ವಿಶ್ರಾಂತಿಗೆ ಅವಕಾಶ ನೀಡಿತು ಮತ್ತು ಆದರೆ, ಎಡಗೈ ಬ್ಯಾಟರ್ ಇನ್ನೂ ಆಯ್ಕೆಗೆ ಲಭ್ಯವಾಗಿಲ್ಲ.

Reports Reveal The Reasons Why Ishan Kishan is Unhappy with the Team Management

ಇದೇ ವೇಳೆ, ಟಿ20 ಪಂದ್ಯಗಳಲ್ಲಿ ಜಿತೇಶ್ ಶರ್ಮಾ ಅವರ ಆಯ್ಕೆ ಕುರಿತು ಇಶಾನ್ ಕಿಶನ್ ಭಾರತ ತಂಡದ ಮ್ಯಾನೇಜ್‌ಮೆಂಟ್ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ. ಇದು ಅಂತಿಮವಾಗಿ ಆಡುವ 11ರ ಬಳಗದಲ್ಲಿ ತಮ್ಮ ಸ್ಥಾನವನ್ನು ಸಂಕೀರ್ಣಗೊಳಿಸಬಹುದು ಎಂಬುದು ಇಶಾನ್ ಕಿಶನ್ ಲೆಕ್ಕಾಚಾರವಾಗಿದೆ.

ಇನ್ನು, ಇಶಾನ್ ಕಿಶನ್ 2024ರ ರಣಜಿ ಟ್ರೋಫಿಯಲ್ಲಿ ಜಾರ್ಖಂಡ್ ತಂಡಕ್ಕೆ ಹಿಂದಿರುಗಿಲ್ಲ. ಕಿಶನ್ ಪ್ರಸ್ತುತ ಬರೋಡಾದ ರಿಲಯನ್ಸ್ ಸ್ಟೇಡಿಯಂನಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ ಮತ್ತು 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಹಿಂದಿರುಗುವ ಸಾಧ್ಯತೆಯಿದೆ.

Reports Reveal The Reasons Why Ishan Kishan is Unhappy with the Team Management

ಪ್ರಸ್ತುತ ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ಭಾರತ ತಂಡಕ್ಕೆ ಇನ್ನಿಂಗ್ಸ್ ಆರಂಭಿಸಲು ನೆಚ್ಚಿನ ಆಟಗಾರರಾಗಿದ್ದಾರೆ. ನಂತರದ ಕ್ರಮಂಕದಲ್ಲಿ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಕ್ರೀಸ್‌ಗೆ ಬರಲಿದ್ದಾರೆ.

ಇದು ಅಗ್ರ ಕ್ರಮಾಂಕದಲ್ಲಿ ಇಶಾನ್ ಕಿಶನ್‌ಗೆ ಯಾವುದೇ ಸ್ಥಳಾವಕಾಶವನ್ನು ನೀಡುವುದಿಲ್ಲ. ಅದೇ ಕಾರಣದಿಂದಾಗಿ, ಕೆಳ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಹೊಡೆತಗಳನ್ನು ಆಡಬಹುದು ಎಂದು ಭಾರತ ತಂಡದ ಮ್ಯಾನೇಜ್‌ಮೆಂಟ್ ಜಿತೇಶ್ ಶರ್ಮಾ ಅವರನ್ನು ಬೆಂಬಲಿಸಿತು.

RevSportz ವರದಿ ಪ್ರಕಾರ, ಇಶಾನ್ ಕಿಶನ್ ಈ ಕ್ರಮವನ್ನು ಇಷ್ಟಪಡಲಿಲ್ಲ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಭಾರತ ತಂಡದಿಂದ ಹೊರಗುಳಿಯಲು ಬಯಸಿದರು.

Reports Reveal The Reasons Why Ishan Kishan is Unhappy with the Team Management

ಸೈಡ್‌ಲೈನ್‌ನಲ್ಲಿಯೇ ಮುಂದುವರಿದ ಇಶಾನ್ ಕಿಶನ್

ಇನ್ನು ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಇದುವರೆಗೆ ತಮಗೆ ಸಿಕ್ಕಿರುವ ಸೀಮಿತ ಅವಕಾಶಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಜೂನ್ 1ರಂದು ಪ್ರಾರಂಭವಾಗಲಿರುವ ಮುಂಬರುವ 2024ರ ಐಸಿಸಿ ಟಿ20 ವಿಶ್ವಕಪ್‌ಗೆ ಜಿತೇಶ್ ಶರ್ಮಾ ತನ್ನ ಸ್ಥಾನವನ್ನು ಕಾಯ್ದಿರಿಸಲು ಆಶಿಸುತ್ತಿರುವುದರಿಂದ ಅವರ ಕೀಪಿಂಗ್ ಕೌಶಲ್ಯಗಳು ಪ್ರಮುಖವಾಗಿವೆ.

ಆದಾಗ್ಯೂ, ಟಿ20 ವಿಶ್ವಕಪ್‌ಗಾಗಿ ಯುಎಸ್ಎ ಟಿಕೆಟ್ ಪಡೆಯಲು, ಜಿತೇಶ್ ಶರ್ಮಾ ಮುಂಬರುವ 2024ರ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕಾಗಿ ಬ್ಯಾಟಿಂಗ್ ಮತ್ತು ಕೀಪಿಂಗ್‌ನಲ್ಲಿ ಅಸಾಮಾನ್ಯ ಋತುವನ್ನು ಹೊಂದಿರಬೇಕಾಗುತ್ತದೆ.

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಜಿತೇಶ್ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಅವರಂತಹ ಆಟಗಾರರು ಭಾರತ ತಂಡದಲ್ಲಿ ಸ್ಥಾನಕ್ಕಾಗಿ ಸವಾಲು ಹಾಕುವುದರಿಂದ ಜಿತೇಶ್ ಉತ್ತಮಗೊಳ್ಳಬೇಕಾಗಿದೆ.

ಈ ಮಧ್ಯೆ, ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ದಕ್ಷಿಣ ಆಫ್ರಿಕಾವನ್ನು ತೊರೆದ ಬಳಿಕ, ಇನ್ನೂ ವೃತ್ತಿಪರ ಕ್ರಿಕೆಟ್ ಆಡದ ಕಾರಣ ಇಶಾನ್ ಕಿಶನ್ ಅವರನ್ನು ಇಂಗ್ಲೆಂಡ್ ವಿರುದ್ಧದ ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಪರಿಗಣಿಸಲಾಗುವುದಿಲ್ಲ ಎಂದು ಖಚಿತಪಡಿಸಿದರು.

Story first published: Thursday, February 8, 2024, 17:04 [IST]
Other articles published on Feb 8, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+