ವೀರೇಂದ್ರ ಸೆಹ್ವಾಗ್ ಮತ್ತೆ ಬ್ಯಾಟ್ ಹಿಡಿಯುತ್ತಿದ್ದಾರೆ
ಮೈಸೂರು, ಅಕ್ಟೋಬರ್.21: ಭಾರತ ಕಂಡ ಸ್ಫೋಟಕ ಆರಂಭಿಕ ವೀರೇಂದ್ರ ಸೆಹ್ವಾಗ್ ಅವರ ಹೊಡಿ ಬಡಿ ಆಟವನ್ನು ಮತ್ತೆ ನೋಡಬಹುದು. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದರೂ ರಣಜಿ ಪಂದ್ಯಗಳನ್ನು ಆಡಲಿದ್ದಾರೆ. ಸೆಹ್ವಾಗ್ ಅಟವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಕಣ್ಣು ತುಂಬಿಕೊಳ್ಳಬಹುದು.
ಹರ್ಯಾಣದ ಪರ ವೀರೂ ಬ್ಯಾಟ್ ಹಿಡಿಯಲಿದ್ದಾರೆ. ಅಕ್ಟೋಬರ್ 22 ರಿಂದ ಕರ್ನಾಟಕದ ವಿರುದ್ಧ ಆರಂಭವಾಗಲಿರುವ ರಣಜಿ ಪಂದ್ಯದಲ್ಲಿ ಸೆಹ್ವಾಗ್ ಅಭಿಮಾನಿಗಳ ಎದುರು ಕಾಣಿಸಿಕೊಳ್ಳಲಿದ್ದಾರೆ. ದೆಹಲಿ ತಂಡದಲ್ಲಿದ್ದ ಸೆಹ್ವಾಗ್ ಈ ಬಾರಿ ಹರ್ಯಾಣದ ಪರ ಆಡುತ್ತಿದ್ದಾರೆ.[ಸೆಹ್ವಾಗ್‌ರಲ್ಲೂ ಭಯ ಹುಟ್ಟಿಸಿದ್ದ ಆ ಬೌಲರ್ ಯಾರು?]

ಅಕ್ಟೋಬರ್ 21 ರಂದು ಸೆಹ್ವಾಗ್ ಅಂತಾರಾಷ್ಟ್ರೀಯ ಬದುಕಿಗೆ ನಿವೃತ್ತಿ ಹೇಳಿದ್ದರು. ಇದೀಗ ಹರ್ಯಾಣದ ನಾಯಕರಾಗಿ ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ಕ್ರೀಡಾಂಗಣದಲ್ಲಿ ಬ್ಯಾಟ್ ಬೀಸಲಿದ್ದಾರೆ.[ನಿವೃತ್ತಿಯ ನಿಜ ಕಾರಣ ಪತ್ರದಲ್ಲಿ ಬಿಚ್ಚಿಟ್ಟ ಸೆಹ್ವಾಗ್]
ಈಗಾಗಲೇ ಹರ್ಯಾಣ ತಂಡ ಮೈಸೂರಿನಲ್ಲಿ ಬೀಡು ಬಿಟ್ಟಿದ್ದು ಹಾಲಿ ಚಾಂಪಿಯನ್ ಕರ್ನಾಟಕ್ಕೆ ಸೆಹ್ವಾಗ್ ನೇತೃತ್ವದಲ್ಲಿ ಸವಾಲು ಒಡ್ಡಲಿದೆ. ಅಕ್ಟೋಬರ್ 22 ರಿಂದ ಬೆಳಗ್ಗೆ 9.30ಕ್ಕೆ ಪಂದ್ಯ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications