ಜುಲೈ 21 ಭಾನುವಾರ, ಭಾರತ ಮಹಿಳಾ ಕ್ರಿಕೆಟ್ ತಂಡದ ವಿಕೆಟ್‌ಕೀಪರ್-ಬ್ಯಾಟರ್ ರಿಚಾ ಘೋಷ್ ಅವರು 2024ರ ಮಹಿಳಾ ಏಷ್ಯಾಕಪ್‌ನ ಎರಡನೇ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡುವ ಮೂಲಕ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ಮಾಡಿದ್ದಾರೆ.
ಯುಎಇ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ರಿಚಾ ವೇಗದ ಅರ್ಧಶತಕ ಗಳಿಸಿದರು. ಈ ಅರ್ಧಶತಕದೊಂದಿಗೆ ರಿಚಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಭಾರತದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಭಾರತದ ಪರ ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ವೇಗದ ಅರ್ಧಶತಕ ಗಳಿಸಿದ್ದರು. ಯುಎಇ ವಿರುದ್ಧ ಪಂದ್ಯದಲ್ಲಿ 12ನೇ ಓವರ್‌ನ ನಾಲ್ಕನೇ ಎಸೆತಕ್ಕೆ 4 ವಿಕೆಟ್ ಕಳೆದುಕೊಂಡು 106 ರನ್ ಗಳಿಸಿದ್ದಾಗ ರಿಚಾ ಘೋಷ್ ಭಾರತದ ಪರ ವೇಗದ ಅರ್ಧಶತಕ ದಾಖಲಿಸಿದರು.
ಇದಾದ ಬಳಿಕ ಬಿರುಸಿನ ಶೈಲಿಯಲ್ಲಿ ಬ್ಯಾಟ್ ಬೀಸಿದ ಘೋಷ್ ಕೇವಲ 26 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು. ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ ಅತಿವೇಗದ ಅರ್ಧಶತಕ ಸಿಡಿಸಿದ ಮೂರನೇ ಮಹಿಳಾ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1) 23 ಎಸೆತಗಳು - ಸ್ಮೃತಿ ಮಂಧಾನ ವಿರುದ್ಧ ಇಂಗ್ಲೆಂಡ್, 2022
2) 24 ಎಸೆತಗಳು - ಸ್ಮೃತಿ ಮಂಧಾನ ವಿರುದ್ಧ ನ್ಯೂಜಿಲೆಂಡ್, 2019
3) 25 ಎಸೆತಗಳು - ಸ್ಮೃತಿ ಮಂಧಾನ ವಿರುದ್ಧ ಇಂಗ್ಲೆಂಡ್, 2018
4) 26 ಎಸೆತಗಳು - ಶಫಾಲಿ ವರ್ಮಾ ವಿರುದ್ಧ ವೆಸ್ಟ್ ಇಂಡೀಸ್, 2019
5) 26 ಎಸೆತಗಳು - ಶಫಾಲಿ ವರ್ಮಾ ವಿರುದ್ಧ ದಕ್ಷಿಣ ಆಫ್ರಿಕಾ, 2021
6) 26 ಎಸೆತಗಳು - ರಿಚಾ ಘೋಷ್ ವಿರುದ್ಧ ಯುಎಇ, 2024
ರಿಚಾ ಘೋಷ್ ಅವರು ಯುಎಇ ವಿರುದ್ಧ 209 ಎಸೆತಗಳಲ್ಲಿ12 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 64 ರನ್ ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್‌ನಿಂದಾಗಿ ಭಾರತ ತಂಡ 201 ರನ್ ಗಳಿಸಿತು.
ಇದರೊಂದಿಗೆ ಭಾರತ ಕ್ರಿಕೆಟ್ ತಂಡ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ 200 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದೆ. ಭಾರತದ ಈ ಐತಿಹಾಸಿಕ ದಾಖಲೆಯಲ್ಲಿ ರಿಚಾ ಘೋಷ್ ಅವರ ಅರ್ಧಶತಕದ ಇನ್ನಿಂಗ್ಸ್ ಪ್ರಮುಖ ಪಾತ್ರ ವಹಿಸಿದೆ.
ಭಾರತ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿ ಯುಎಇ ತಂಡಕ್ಕೆ 202 ರನ್‌ಗಳ ಗೆಲುವಿನ ಗುರಿ ನೀಡಿತು. ಆದರೆ ಈ ಗುರಿ ಬೆನ್ನಟ್ಟಿದ ಯುಎಇ 7 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಲಷ್ಟೇ ಶಕ್ತವಾಯಿತು.