For Quick Alerts
ALLOW NOTIFICATIONS  
For Daily Alerts
 

IND vs SA: ರಿಚಾ ಘೋಷ್‌ ಅಬ್ಬರದ ಬ್ಯಾಟಿಂಗ್‌: ಭಾರತ 251 ರನ್‌ಗೆ ಆಲೌಟ್

ಭರವಸೆಯ ಆಟಗಾರ್ತಿ ರಿಷಾ ಘೋಷ್ (94 ರನ್) ಅವರ ಭರ್ಜರಿ ಆಟದ ನೆರವಿನಿಂದ ಟೀಮ್ ಇಂಡಿಯಾ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಲೀಗ್‌ ಹಂತದ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ 252 ರನ್‌ಗಳ ಗುರಿಯನ್ನು ನೀಡಿದೆ.

ಟಾಸ್‌ ಸೊತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಉತ್ತಮವಾಗಿತ್ತು. ಕಳೆದ ಎರಡು ಪಂದ್ಯಗಳಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದ ಸ್ಮೃತಿ ಮಂಧಾನ ಗುರುವಾರದ ಪಂದ್ಯದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಒಂದು ಬೌಂಡರಿ, ಒಂದು ಸಿಕ್ಸರ್‌ ಸಹಾಯದಿಂದ 23 ರನ್‌ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಮೊದಲ ವಿಕೆಟ್‌ಗೆ ಸ್ಮೃತಿ ಪ್ರತಿಕಾ ಅವರೊಂದಿಗೆ 10.2 ಓವರ್‌ಗಳಲ್ಲಿ 55 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು.

Richa Ghosh s 94 anchors Team India to a competitive 252-run target against South Africa

ಮಧ್ಯಮ ಕ್ರಮಾಂಕದಲ್ಲಿ ಹರ್ಲಿನ್ ಡಿಯೋಲ್‌ (13) ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್‌ 37 ರನ್‌ಗಳಿಂದ ಮುಂದೆ ಆಟವನ್ನು ಕೊಂಡೊಯ್ಯಲಿಲ್ಲ. ನಾಯಕಿ ಹರ್ಮನ್‌ ಪ್ರೀತ್‌ ಕೌರ್ (9), ದೀಪ್ತಿ ಶರ್ಮಾ (0) ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. ಆದರೆ ಮೊದಲ ಪಂದ್ಯದಲ್ಲಿ ಅಮನ್‌ಜೋತ್‌ ಕೌರ್‌ ಅರ್ಧಶತಕ ಬಾರಿಸಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಬಿಗ್ ಇನಿಂಗ್ಸ್ ಕಟ್ಟಲಿಲ್ಲ.

88 ರನ್‌ ಭರ್ಜರಿ ಜೊತೆಯಾಟ

ಅಮನ್‌ಜೋತ್‌ ಕೌರ್‌ ಹಾಗೂ ರಿಚಾ ಘೋಷ್‌ ಜೋಡಿ 84 ಎಸೆತಗಳಲ್ಲಿ 51 ರನ್‌ ಸೇರಿಸಿತು. 153 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರಿಚಾ ಘೋಷ್ ಹಾಗೂ ಸ್ನೇಹಾ ರಾಣಾ ಜೋಡಿ ಆಧಾರವಾಯಿತು. ಈ ಜೋಡಿ ತಂಡ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕುವಲ್ಲಿ ಶ್ರಮಿಸಿತು. ಈ ಜೋಡಿ 8ನೇ ವಿಕೆಟ್‌ಗೆ 53 ಎಸೆತಗಳಲ್ಲಿ 88 ರನ್‌ ಜೊತೆಯಾಟದ ಕಾಣಿಕೆ ನೀಡಿ ತಂಡ 250 ರನ್‌ಗಳ ಗಡಿ ದಾಟಲು ಪ್ರಮುಖ ಕಾರಣವಾಯಿತು. ಸ್ನೇಹಾ ರಾಣಾ 24 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 33 ರನ್‌ ಬಾರಿಸಿ ಔಟ್ ಆದರು.

ರಿಚಾ ಅಬ್ಬರ

ನಿಜಕ್ಕೂ ದಕ್ಷಿಣ ಆಫ್ರಿಕಾ ತಂಡದ ಬೌಲರ್‌ಗಳಿಗೆ ರಿಚಾ ಘೋಷ್‌ ಬಹುವಾಗಿ ಕಾಡಿದರು. ಇವರು ತಮ್ಮ ನೈಜ್ಯ ಆಟವನ್ನು ಆಡಿ 11 ಬೌಂಡರಿ, 4 ಸಿಕ್ಸರ್ ಸಹಾಯದಿಂದ 94 ರನ್‌ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಅಂತಿಮವಾಗಿ ಟೀಮ್ ಇಂಡಿಯಾ 49.5 ಓವರ್‌ಗಳಲ್ಲಿ 251 ರನ್‌ಗಳಿಗೆ ಆಲೌಟ್ ಆಯಿತು.

ಮಾರಿಜಾನ್ನೆ ಕಪ್, ನಾಡಿನ್ ಡಿ ಕ್ಲರ್ಕ್, ನಾನ್ಕುಲುಲೆಕೊ ಮ್ಲಾಬಾ ದಕ್ಷಿಣ ಆಫ್ರಿಕಾದ ಪರ ತಲಾ 2 ವಿಕೆಟ್‌ಗಳನ್ನು ಪಡೆದರು.

Story first published: Thursday, October 9, 2025, 19:40 [IST]
Other articles published on Oct 9, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+