For Quick Alerts
ALLOW NOTIFICATIONS  
For Daily Alerts
 

Richa Ghosh: ದಕ್ಷಿಣ ಆಫ್ರಿಕಾ ವಿರುದ್ಧ ಸೋತರೂ ಮಿಂಚಿದ ರಿಚಾ: ಹಲವು ದಾಖಲೆ ನಿರ್ಮಾಣ

ಮಹಿಳಾ ಏಕದಿನ ವಿಶ್ವ ಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ 3 ವಿಕೆಟ್‌ಗಳಿಂದ ಆತಿಥೇಯ ಭಾರತವನ್ನು ಸೋಲಿಸಿ ಅಬ್ಬರಿಸಿತು. ಡೆತ್ ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ನಾಡಿನ್ ಡಿ ಕ್ಲರ್ಕ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಜಯದಲ್ಲಿ ಮಿಂಚಿದರು. ಟೀಮ್ ಇಂಡಿಯಾ ಈ ಸೋಲಿನ ಮೂಲಕ ಈ ಟೂರ್ನಿಯಲ್ಲಿ ಮೊದಲ ಸೋಲು ಕಂಡಿದೆ. ದಕ್ಷಿಣ ಆಫ್ರಿಕಾ ಸತತ 2ನೇ ಗೆಲುವಿನ ನಗೆ ಬೀರಿದೆ. ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಸೋತರೂ ವಿಕೆಟ್‌ ಕೀಪರ್ ಬ್ಯಾಟರ್ ರಿಚಾ ಘೋಷ್ ಎಲ್ಲರ ಚಿತ್ತವನ್ನು ಕದ್ದರು.

ರಿಚಾ ಘೋಷ್‌ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಡಿದ ಧಾಟಿಯನ್ನು ಅಭಿಮಾನಿಗಳು ಬಹು ದಿನ ನೆನಪಿನಲ್ಲಿ ಇಡುವಂತೆ ಮಾಡಿತು. ಈ ಪಂದ್ಯದಲ್ಲಿ ರಿಚಾ ಕ್ಲಾಸಿಕ್‌ ಬ್ಯಾಟಿಂಗ್‌ಗೆ ದಕ್ಷಿಣ ಆಫ್ರಿಕಾದ ಬೌಲರ್‌ಗಳ ಬಳಿ ಉತ್ತರವೇ ಇರಲಿಲ್ಲ. 190 ರನ್‌ ಅಥವಾ 200 ರನ್‌ಗಳನ್ನು ಟೀಮ್ ಇಂಡಿಯಾ ಕಲೆ ಹಾಕಿದರೆ ಸಾಕಪ್ಪ ಎಂಬ ಲೆಕ್ಕಾಚಾರ ನಡೆದಿತ್ತು. ಈ ವೇಳೆ ರಿಚಾ ಘೋಷ್ ಆಡಿದ ಆಟ ನೆರೆದ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿತು. ಈ ಸೊಗಸಾದ ಇನಿಂಗ್ಸ್‌ ಮೂಲಕ 22 ವರ್ಷದ ರಿಚಾ ಹಲವು ದಾಖಲೆಗಳನ್ನು ಬರೆದಿದ್ದಾರೆ.

Richa Ghosh s Fiery Knock in Vain as South Africa Beat India by 3 Wickets in Women s WC

ರಿಚಾ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 77 ಎಸೆತಗಳನ್ನು ಎದುರಿಸಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 94 ರನ್ ಗಳಿಸಿದರು. ಈ ಮೂಲಕ ಭಾರತ 250 ರನ್‌ಗಳ ಗಡಿಯನ್ನು ದಾಟಲು ನೆರವಾದರು. ಈ ಅಬ್ಬರದ ಇನಿಂಗ್ಸ್‌ ಮೂಲಕ ರಿಚಾ ಏಕದಿನ ವೃತ್ತಿ ಜೀವನದಲ್ಲಿ 1 ಸಾವಿರ ರನ್‌ಗಳನ್ನು ಪೂರೈಸಿದ ಸಾಧನೆಯನ್ನು ಮಾಡಿದರು. ಅಲ್ಲದೆ ದಾಖಲೆಯನ್ನು ಸಹ ಬರೆದರು.ರಿಚಾ ಈಗ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 8 ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಈ ಪಂದ್ಯದಲ್ಲಿ ರಿಚಾ ಮತ್ತು ಸ್ನೇಹ್ ರಾಣಾ ನಡುವಿನ ಎಂಟನೇ ವಿಕೆಟ್‌ಗೆ 88 ರನ್‌ಗಳ ಜೊತೆಯಾಟ ನೀಡಿದರು. ಈ ಮೂಲಕ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ಸೇರಿಸಿದ ಪಟ್ಟಿಯಲ್ಲಿ ಜಂಟಿ ಮೂರನೇ ಸ್ಥಾನ ಪಡೆದಿದ್ದಾರೆ.

ಲ್ಯಾನಿಂಗ್, ಅಲಿಸಾ ಸಾಧನೆ ಹಿಂದಿಕ್ಕಿದ ರಿಚಾ

ಏಕದಿನ ಫಾರ್ಮೆಟ್‌ನಲ್ಲಿ ವೇಗವಾಗಿ 1000 ರನ್‌ ಪೂರೈಸಿದ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ರಿಚಾ 1,010 ಎಸೆತಗಳಲ್ಲಿ ಸಾವಿರ ರನ್‌ ಪೂರೈಸಿದರು. ಏಕದಿನ ಕ್ರಿಕೆಟ್‌ನಲ್ಲಿ ಇವರು ಮೆಗ್ ಲ್ಯಾನಿಂಗ್ ಮತ್ತು ಅಲಿಸಾ ಹೀಲಿಯನ್ನು ದಾಖಲೆಯನ್ನು ಹಿಂದಿಕ್ಕಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 1 ಸಾವಿರ ರನ್ ಕಲೆ ಹಾಕಿದ ಕೀರ್ತಿ ಆಸ್ಟ್ರೇಲಿಯಾದ ಆಟಗಾರ್ತಿ ಆಶ್ಲೀ ಗಾರ್ಡ್ನರ್ ಹೆಸರಿನಲ್ಲಿದೆ. ಇವರು ಕೇವಲ 917 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.

Story first published: Friday, October 10, 2025, 8:51 [IST]
Other articles published on Oct 10, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+