ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಈ ಮೆಗಾ ಟೂರ್ನಿಗೂ ಮುನ್ನ ಹಲವು ತಂಡಗಳು ಸರಣಿಗಳನ್ನು ಆಡಿ ತಯಾರಿ ನಡೆಸಿವೆ. ಈ ವೇಳೆ ಆಸ್ಟ್ರೇಲಿಯಾ ಸಹ ಪಾಕಿಸ್ತಾನ ಪ್ರವಾಸವನ್ನು ಮಾಡಿತ್ತು. ಈ ಪ್ರವಾಸದಲ್ಲಿ ಆಡಿದ ಮೂರು ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಆಘಾತ ಅನುಭವಿಸಿದೆ. ಟಿ20 ವಿಶ್ವಕಪ್‌ಗೂ ಮುನ್ನ ಈ ಸೋಲು ನಿಶ್ವಿತವಾಗಿ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾದ ಆತ್ಮವಿಶ್ವಾಸಕ್ಕೆ ಕೊಡಲಿ ಪೆಟ್ಟು ನೀಡಲಿದೆ.
ಟಿ20 ಕ್ರಿಕೆಟ್‌ನಲ್ಲಿ ಎರಡನೇ ಶ್ರೇಯಾಂಕಿತ ತಂಡವಾಗಿರುವ ಆಸ್ಟ್ರೇಲಿಯಾ, ಪಾಕ್ ವಿರುದ್ಧ ನಿರಾಸೆ ಅನುಭವಿಸಿದೆ. ಇದು ಮಹಾ ಯುದ್ಧಕ್ಕೂ ಮುನ್ನ ನಡೆದ ಶಸ್ತ್ರಾಭ್ಯಾಸದಲ್ಲಿ ಹಿನ್ನಡೆ ಆದಂತೆ ಕಾಣುತ್ತಿದೆ. ಕೊನೆಯ ಟಿ20 ಪಂದ್ಯದಲ್ಲಂತೂ ಆಸೀಸ್ 96 ರನ್‌ಗಳಿಗೆ ಆಲೌಟ್ ಆಗಿ ಮುಖಭಂಗ ಅನುಭವಿಸಿದೆ. ಪಾಕ್‌ನಲ್ಲಿ ಆಸೀಸ್ ಕಂಡ ಬ್ಯಾಕ್ ಟು ಬ್ಯಾಕ್ ಸೋಲಿನ ಹೊರತಾಗಿಯೂ ದಿಗ್ಗಜ ಆಸ್ಟ್ರೇಲಿಯಾ ಆಟಗಾರ ರಿಕ್ಕಿ ಪಾಂಟಿಂಗ್ ತಮ್ಮ ತಂಡದ ಬೆನ್ನಿಗೆ ನಿಂತಿದ್ದಾರೆ. ಅಲ್ಲದೆ ತಂಡ ಸೆಮಿಫೈನಲ್ ಹಂತವನ್ನು ಪ್ರವೇಶಿಸಲಿದೆ ಎಂದು ಭವಿಷ್ಯ ಸಹ ನುಡಿದ್ದಾರೆ.

ಆಸ್ಟ್ರೇಲಿಯಾ ತಂಡವನ್ನು ನೋಡಿದರೆ, ಇದು ಸಮತೋಲಿತ ತಂಡದಂತೆ ಕಾಣುತ್ತದೆ. ಬೇರೆ ತಂಡಗಳಂತೆ ನಮ್ಮ ತಂಡಕ್ಕೂ ಉತ್ತಮ ಅವಕಾಶ ಇದೆ ಎಂದು ರಿಕ್ಕಿ ಪಾಂಟಿಂಗ್ ತಿಳಿಸಿದ್ದಾರೆ.
ಭಾರತ ಸಹ ಈ ಟೂರ್ನಿಯ ಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದು. ಆ ತಂಡವನ್ನು ನೋಡುವುದು ಕಷ್ಟ. ನಮ್ಮ ತಂಡ ಸೆಮಿಫೈನಲ್ ಹಂತ ತಲುಪಬಹುದು ಎಂಬ ವಿಶ್ವಾಸವಿದೆ ಎಂದು ರಿಕ್ಕಿ ಪಾಂಟಿಂಗ್ ತಿಳಿಸಿದ್ದಾರೆ.

ಆಸ್ಟ್ರೇಲಿಯಾಕ್ಕೆ ಗಾಯ ಬಹುವಾಗಿ ಕಾಡುತ್ತಿದೆ. ವಿಶ್ವಕಪ್ ಸಮಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಗಾಯಕ್ಕೆ ತುತ್ತಾಗಿರುವುದು ಪೆಟ್ಟು ಬಿದ್ದಿದೆ. ಆಸೀಸ್ ತಂಡದಲ್ಲಿ ಯುವ ಆಟಗಾರ ಕೂಪರ್ ಕಾನೋಲಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಆಸ್ಟ್ರೇಲಿಯಾ ಟಿ20 ವಿಶ್ವಕಪ್‌ನಲ್ಲಿ ತನ್ನ ಅಭಿಯಾನ ನ್ನು ಫೆಬ್ರವರಿ 11 ರಿಂದ ಆರಂಭಿಸಲಿದೆ. ಆಸೀಸ್ ತನ್ನ ಎಲ್ಲ ಗುಂಪು ಹಂತದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.
ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕಾನ್ನೋಲಿ, ಟಿಮ್ ಡೇವಿಡ್, ಬೆನ್ ದ್ವಾರ್ಶುಯಿಸ್, ಕ್ಯಾಮರೂನ್ ಗ್ರೀನ್, ನಥಾನ್ ಎಲ್ಲಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಟ್ ಕುಹ್ನೆಮನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಟ್ ರೆನ್ಶಾ, ಮಾರ್ಕಸ್ ಸ್ಟೋಯಿನಿಸ್, ಆಡಮ್ ಜಂಪಾ ಮತ್ತು ಮೀಸಲು ಆಟಗಾರನಾಗಿ ಸೀನ್ ಅಬಾಟ್.