Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ ಮಾಹಿ ಅಪಾಯಕಾರಿ ಎಂದ ಪಾಂಟಿಂಗ್: ನಿವೃತ್ತಿ ಬಗ್ಗೆ ಹೇಳಿದ್ದೇನು?

ಐಪಿಎಲ್‌ ಆರಂಭವಾಗಿದೆ. ಈ ಮೆಗಾ ಲೀಗ್‌ನಲ್ಲಿ ಸ್ಟಾರ್ ಆಟಗಾರರು ತಮ್ಮ ಸ್ಥಿರ ಪ್ರದರ್ಶನ ಮುಂದುವರೆಸಿದ್ದಾರೆ. ಆದರೆ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್‌ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಪಂಜಾಬ್ ಕಿಂಗ್ಸ್ ತಂಡದ ಕೋಚ್‌ ರಿಕಿ ಪಾಂಟಿಂಗ್ ಮಾತನಾಡಿದ್ದಾರೆ. ಧೋನಿ ಈಗಲೂ ಒಬ್ಬ ಪ್ರತಿಭಾನ್ವಿತ ವಿಕೆಟ್‌ ಕೀಪರ್. ಅವರ ಸ್ಕಿಲ್‌ಗಳು ಈಗಲೂ ಅನುಕರಣೀಯ. ಆದರೆ ಈ ಬಾರಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಮಾಹಿ ಮುಂಬರುವ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎಂದು ಪಾಂಟಿಂಗ್ ಹೇಳಿದ್ದಾರೆ.

ಕಳೆದ 17 ಆವೃತ್ತಿಗಳಲ್ಲಿ ಧೋನಿ ತಮ್ಮ ಕ್ಲಾಸಿಕ್ ಬ್ಯಾಟಿಂಗ್‌ನಿಂದಲೇ ಸುದ್ದಿಯಲ್ಲಿದ್ದಾರೆ. ಹೀಗಾಗಿ ಇವರ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅವರು ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸುತ್ತಿರುವುದರಿಂದ ಟೀಕೆಗೆ ಗುರಿಯಾಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಬೆಂಬಲಕ್ಕೆ ಈಗ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್ ನಿಂತಿದ್ದಾರೆ. ಅಲ್ಲದೆ ಮಾಹಿ ನಿವೃತ್ತಿಯ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.

Ricky Ponting Backs MS Dhoni Amid Batting Concerns Says IPL Retirement Depends on This Season

ಧೋನಿ ಬಗ್ಗೆ ಪಾಂಟಿಂಗ್ ಹೇಳಿದ್ದೇನು?

ಸಿಎಸ್‌ಕೆ ಈ ಹಂತಕ್ಕೆ ನಿಲ್ಲುವಲ್ಲಿ ಧೋನಿ ಅವರ ಪಾತ್ರ ದೊಡ್ಡದು. ಐಪಿಎಲ್‌ ಇತಿಹಾಸದಲ್ಲಿ ಚೆನ್ನೈ ಐದು ಬಾರಿ ಟ್ರೋಫಿ ಗೆಲ್ಲುವಲ್ಲಿ ಅವರ ಕಾಣಿಕೆ ದೊಡ್ಡದು. ಈ ವೇಳೆ ಅವರ ಸಾಧನೆಯ ಬಗ್ಗೆ ಚರ್ಚೆಗಳು ನಡೆಯುವುದಿಲ್ಲ. ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯುತ್ತವೆ. ಹಾಗೆ ನೋಡಿದರೆ ಕಳೆದ ಕೆಲವು ವರ್ಷಗಳಲ್ಲಿ ತಂಡಕ್ಕೆ ಅವರ ಕೊಡುಗೆ ಬ್ಯಾಟಿಂಗ್‌ನಲ್ಲಿ ಕಡಿಮೆ ಆಗಿದೆ. ಅವರು ಕೊನೆಯ 10 ರಿಂದ 12 ಎಸೆತಗಳು ಇರುವಂತೆ ಬ್ಯಾಟ್‌ ಮಾಡಲು ಬರುತ್ತಾರೆ. ತಮ್ಮ ಚಿಕ್ಕ ಇನಿಂಗ್ಸ್‌ನಿಂದಲೇ ಅವರು ಪಂದ್ಯದ ಮೇಲೆ ದೊಡ್ಡ ಪರಿಣಾಮ ಬೀರಲು ಪ್ರಯತ್ನಿಸುತ್ತಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಐಪಿಎಲ್‌ನಲ್ಲಿ ಧೋನಿ ಇನ್ನೂ ಅಪಾಯಕಾರಿ ಎಂದು ಪಾಂಟಿಂಗ್ ಹೇಳಿದ್ದಾರೆ.

ಧೋನಿ ನಿವೃತ್ತಿಯ ಬಗ್ಗೆಯೂ ಮಾತನಾಡಿರುವ ಪಾಂಟಿಂಗ್, "ಪ್ರಸಕ್ತ ಋತುವು ಧೋನಿಗೆ ಹೇಗೆ ಹೋಗಲಿದೆ ಎಂಬುದರ ಮೇಲೆ ನಿವೃತ್ತಿಯ ನಿರ್ಧಾರ ಅವಲಂಬಿತವಾಗಿದೆ. ಮಾಹಿ ತಮ್ಮ ಬ್ಯಾಟಿಂಗ್‌ನಿಂದ ತಂಡಕ್ಕೆ ನೆರವಾಗುವಲ್ಲಿ ಸಫಲರಾದರೆ, ಅವರ ಆಟ ಮುಂದುವರೆಯುತ್ತದೆ. ಇನ್ನು ಈ ಋತುವಿನಲ್ಲಿ ಧೋನಿ ಬ್ಯಾಟಿಂಗ್ ಚಮತ್ಕಾರ ಮಾಡದೇ ಇದ್ದಲ್ಲಿ ಧೋನಿ ಈ ಬಗ್ಗೆ ಯೋಚಿಸಬೇಕು. ಅವರು ಐಪಿಎಲ್‌ನಲ್ಲಿ ಯಾವಾಗಲು ಪರಿಣಾಮಕಾರಿ ಎಂದು ಪಾಂಟಿಂಗ್ ತಿಳಿಸಿದ್ದಾರೆ.

Ricky Ponting Backs MS Dhoni Amid Batting Concerns Says IPL Retirement Depends on This Season

ನಿಶ್ಚಿತವಾಗಿ ಮಾಹಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡ್ತಾ ಇರಬಹುದು. ಆದರೆ ಅವರು ಈ ವಯಸ್ಸಿನಲ್ಲಿ ವಿಕೆಟ್‌ ಕೀಪಿಂಗ್‌ನ್ನು ಅಮೋಘವಾಗಿ ಮಾಡುತ್ತಿದ್ದಾರೆ. ಧೋನಿ ವಿಕೆಟ್‌ ಕೀಪರ್‌ ಆಗಿ ತಂಡಕ್ಕೆ ನೂರಕ್ಕೆ ನೂರರಷ್ಟು ಸೇವೆಯನ್ನು ನೀಡುತ್ತಿದ್ದಾರೆ. ಧೋನಿ ಸ್ಟಂಪಿಂಗ್ ಅವಕಾಶವನ್ನು ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ಧೋನಿ ತಿಳಿಸಿದ್ದಾರೆ.

Story first published: Monday, April 7, 2025, 15:28 [IST]
Other articles published on Apr 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+