ಆತನಿರುವ ಭಾರತ ತಂಡ ಎಂದರೆ ನನಗೆ ಭಯ: ಆಸಿಸ್ ದಿಗ್ಗಜ ಪಾಂಟಿಂಗ್ ಹೇಳಿದ್ದು ಯಾರ ಬಗ್ಗೆ?

ಭಾರತ ತಂಡದಲ್ಲಿ ಇತ್ತಿಚೆಗೆ ಸಾಕಷ್ಟು ಯುವ ಪ್ರತಿಭೆಗಳು ಅವಕಾಶ ಪಡೆಯುತ್ತಿದ್ದು ಬಹುತೇಕ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಭಾರತ ತಂಡದ ಬೆಂಚ್ ಸ್ಟ್ರೆಂತ್ ಬಗ್ಗೆ ಸಾಕಷ್ಟು ಸಕಾರಾತ್ಮಕ ಮಾತುಗಳು ಕೇಳಿ ಬರುತ್ತಿದೆ. ಆದರೆ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ಭಾರತದ ಈ ಅನುಭವಿ ಆಟಗಾರ ತಂಡದಲ್ಲಿದ್ದರೆ ಮಾತ್ರ ತನಗೆ ಆ ತಂಡದ ಮೇಲೆ ಭಯ ಹೆಚ್ಚಾಗುತ್ತದೆ ಎಂದಿದ್ದಾರೆ.
ರಿಕಿ ಪಾಂಟಿಂಗ್ ಹೇಳಿದ ಆ ಆಟಗಾರ ಬೇರೆ ಯಾರೂ ಅಲ್ಲ ಮಾಜಿ ನಾಯಕ ವಿರಾಟ್ ಕೊಹ್ಲಿ. ಪ್ರಸ್ತುತ ಫಾರ್ಮ್ ವೈಫಲ್ಯದಿಂದ ಬಳಲುತ್ತಿರುವ ವಿರಾಟ್ ಕೊಹ್ಲಿಗೆ ಬೆಂಬಲವಾಗಿ ಮ್ಯಾನೇಜ್‌ಮೆಂಟ್ ನಿಲ್ಲಬೇಕಿದೆ ಎಂದಿದ್ದಾರೆ. ಕಳಪೆ ಪಾರ್ಮ್‌ನಿಂದಾಗಿ ವಿರಾಟ್ ಕೊಹ್ಲಿ ಮುಂಬರುವ ಟಿ20 ವಿಶ್ವಕಪ್‌ನ ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಪ್ರಶ್ನೆಗಳು ಮೂಡಿದೆ. ಆದರೆ ಪಾಂಟಿಂಗ್ ಅನುಭವು ಕೊಹ್ಲಿಗೆ ಈ ತಂಡದಲ್ಲಿ ಅವಕಾಶ ನೀಡಬೇಕು ಎಂದಿದ್ದಾರೆ.

ಎದುರಾಳಿಗಳು ಭಯಪಡುವ ಆಟಗಾರ ಆತ
ಐಸಿಸಿ ರಿವ್ಯೂ ಕಾರ್ಯಕ್ರಮದಲ್ಲಿ ಮಾತನಾಡಿದ ಆಸಿಸ್ ಮಾಜಿ ನಾಯಕ ಇನ್ನು ಕೂಡ ವಿರಾಟ್ ಕೊಹ್ಲಿ ತಂಡದಲ್ಲಿ ಹಾಗೂ ಎದುರಾಳಿಯ ಮೇಲೆ ದೊಡ್ಡ ಪರಿಣಾಮವನ್ನುಂಟು ಮಾಡಬಲ್ಲ ಆಟಗಾರ ಎಂದಿದ್ದಾರೆ. ಆತ ಇರುವ ತಂಡವನ್ನು ಎದುರಿಸಲು ಎದುರಾಳಿ ತಂಡಗಳು ಭಯಪಡುತ್ತವೆ ಎಂದಿದ್ದಾರೆ ರಿಕಿ ಪಾಂಟಿಂಗ್.

ಕೊಹ್ಲಿಗೆ ಇದು ಸಂಕಷ್ಟದ ಸಮಯ
"ನಾನೇನಾದರೂ ಎದುರಾಳಿ ತಂಡದ ನಾಯಕ ಅಥವಾ ಆಟಗಾರನಾಗಿದ್ದರೆ ವಿರಾಟ್ ಕೊಹ್ಲಿ ಇರುವ ಭಾರತ ತಂಡವನ್ನು ಎದುರಿಸಲು ಭಯಪಡುತ್ತೇನೆ. ಆತನನ್ನು ತಂಡದಲ್ಲಿ ಹೊಂದಿಲ್ಲದ ಆಟಗಾರ ನಾನಾಗಿದ್ದೇನೆ. ಆತ ಈಗ ಕೆಲ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂಬುದು ತಿಳಿದಿದೆ. ಇದು ಆತನಿಗೆ ಕಷ್ಟದ ಸಮಯವಾಗಿದೆ" ಎಂದಿದ್ದಾರೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್. ಇನ್ನು ಇದೇ ಸಂದರ್ಭದಲ್ಲಿ ಅವರು ಕೊಹ್ಲಿಯನ್ನು ಭಾರತ ತಂಡ ಕೈಬಿಟ್ಟರೆ ಕೊಹ್ಲಿಗೆ ಮತ್ತೆ ತಂಡಕ್ಕೆ ಮರಳಲು ದಾರಿ ಕಠಿಣವಾಗಲಿದೆ ಎಂದಿದ್ದಾರೆ.

ಆತನಿಗೆ ಸಮಯ ನೀಡಬೇಕು
"ನಾನು ಭಾರತೀಯನಾಗಿದ್ದರೆ ಆತನನ್ನು ಹುರಿದುಂಬಿಸುತ್ತಿದ್ದೆ. ಯಾಕೆಂದರೆ ಆತನ ಸಕಾರಾತ್ಮಕ ಅಂಶ ನನಗೆ ತಿಳಿದಿದೆ. ಆತನಲ್ಲಿ ಮತ್ತಷ್ಟು ಆತ್ಮವಿಶ್ವಾಸ ತುಂಬುವಲ್ಲಿ ಯಶಸ್ವಿಯಾದರೆ ಆತ ಸಾಧ್ಯವಾದಷ್ಟು ಉತ್ತಮ ಆಟವನ್ನು ಪ್ರದರ್ಶಿಸಿದರೆ ಅದು ಹಿಂದೆಂದಿಗಿಂತಲೂ ಅತ್ಯುತ್ತಮ ಪ್ರದರ್ಶನವಾಗಿರುತ್ತದೆ. ಹಾಗಾಗಿ ನಾನೇನಾದರೂ ನಾಯಕ ಅಥವಾ ಕೋಚ್ ಆಗಿದ್ದರೆ ಆತನಿಗೆ ಸಾಧ್ಯವಾದಷ್ಟು ಕಾರ್ಯಗಳು ಸುಲಭವಾಗುವಂತೆ ಮಾಡುವ ಪ್ರಯತ್ನ ನಡೆಸುತ್ತಿದ್ದೆ. ಜೊತೆಗೆ ಒಂದು ಉತ್ತಮ ಇನ್ನಿಂಗ್ಸ್‌ನಲ್ಲಿ ಮಿಂಚಲು ಸಮಯ ನೀಡಿ ಕಾಯುತ್ತಿದ್ದೆ" ಎಂದಿದ್ದಾರೆ ರಿಕಿ ಪಾಂಟಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications