Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬುಷ್‌ಫೈರ್ ಬ್ಯಾಷ್‌ಗೆ ಆಸೀಸ್, ವಿಂಡೀಸ್ ದಿಗ್ಗಜರ ಭರ್ಜರಿ ತಯಾರಿ: ವೀಡಿಯೋ

Ricky Ponting, Brian Lara bring out cuts, pulls & flicks at nets

ಸಿಡ್ನಿ, ಫೆಬ್ರವರಿ 6: ಬುಷ್‌ಫೈರ್‌ ಬ್ಯಾಷ್‌ ಪಂದ್ಯಕ್ಕೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಮತ್ತು ವೆಸ್ಟ್ ಇಂಡೀಸ್ ದಂತಕತೆ ಬ್ರಿಯಾನ್ ಲಾರಾ ತರಬೇತಿ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಟಿಂಗ್‌ ಈ ವೀಡಿಯೋವನ್ನು ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಫೆಬ್ರವರಿ 6ರಂದು ಟ್ವಿಟರ್ ವೀಡಿಯೋ ಹಂಚಿಕೊಂಡಿರುವ ಪಾಂಟಿಂಗ್, 'ಭಾನುವಾರ (ಫೆಬ್ರವರಿ 9) ಒಂದು ವೇಳೆ ನಾನು ಮೂರನೇ ಕ್ರಮಾಂಕದಲ್ಲಿ ಬಂದರೆ, ನನ್ನ ತಂಡದಲ್ಲಿರುವ ಈತ ಬಹುಶಃ ನಾಲ್ಕನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬರುತ್ತಾರೆ,' ಎಂದು ಸಾಲು ಬರೆದುಕೊಂಡಿದ್ದಾರೆ.

ಗುರುವಾರ (ಫೆ.6) ರಿಕಿ ಒಟ್ಟಿಗೆ ಎರಡು ವೀಡಿಯೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಮೊದಲ ವೀಡಿಯೋದಲ್ಲಿ ಪಾಟಿಂಗ್ ಬ್ಯಾಟಿಂಗ್ ತರಬೇತಿ ನಡೆಸುತ್ತಿರುವ ದೃಶ್ಯವಿದ್ದರೆ, ಮತ್ತೊಂದು ವೀಡಿಯೋದಲ್ಲಿ ಪಾಟಿಂಗ್ ಮತ್ತು ಲಾರಾ ಇಬ್ಬರೂ ಬ್ಯಾಟಿಂಗ್ ಮಾಡುತ್ತಿರುವ ದೃಶ್ಯವಿದೆ.

ಲಾಸ್ ಏಂಜಲ್ಸ್‌ನಲ್ಲಿ 2015ರಲ್ಲಿ ನಡೆದಿದ್ದ ಆಲ್ ಸ್ಟಾರ್ಸ್ ಸೀರೀಸ್‌ನಲ್ಲಿ ವಾರ್ನರ್ಸ್ ವಾರಿಯರ್ಸ್ ಪರ ಕಡೇಯ ಸಾರಿ ಪಾಂಟಿಂಗ್ ಆಡಿದ್ದರು. ಅಂದು 25 ಎಸೆತಗಳಿಗೆ ಅಜೇಯ 43 ರನ್ ಬಾರಿಸಿದ್ದರು. ಸಚಿನ್ ವಾರಿಯರ್ಸ್ XI ವಿರುದ್ಧದ ಅಂದಿನ ಆ ಪಂದ್ಯದಲ್ಲಿ ಪಾಂಟಿಂಗ್ ತಂಡ ಗೆದ್ದಿತ್ತು. ಅಂದ್ಹಾಗೆ ಬುಷ್‌ಫೈರ್ ಕ್ರಿಕೆಟ್ ಬ್ಯಾಷ್ ಭಾನುವಾರ (ಫೆ.9) ರಿಕಿ ಪಾಂಟಿಂಗ್ XI ಮತ್ತು ಆ್ಯಡಂ ಗಿಲ್‌ಕ್ರಿಸ್ಟ್‌ XI ಮಧ್ಯೆ ನಡೆಯಲಿದೆ.

Story first published: Thursday, February 6, 2020, 15:47 [IST]
Other articles published on Feb 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+