For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಗೌತಮ್‌ ಗಂಭೀರ್ ಸ್ಥಾನವನ್ನು ತುಂಬುತ್ತಾರಾ ರಿಕಿ ಪಾಂಟಿಂಗ್?

ಇಂಡಿಯನ್ ಪ್ರೀಮಿಯರ್ ಲೀಗ್‌ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೋಚ್‌ ಆಗಿದ್ದ ರಿಕಿ ಪಾಂಟಿಂಗ್ ಈಗ ಆ ತಂಡವನ್ನು ತೊರೆದಿದ್ದಾರೆ. ಈಗ ಪಾಂಟಿಂಗ್‌ ಮುಂದಿನ ನಡೆ ಏನು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಇವರ ಮುಂದಾಳತ್ವದಲ್ಲಿ ಡೆಲ್ಲಿ ತಂಡ 2021ರಲ್ಲಿ ಐಪಿಎಲ್‌ ಫೈನಲ್‌ಗೆ ತಲುಪಿ ಇತಿಹಾಸ ನಿರ್ಮಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ತಂಡದ ಪ್ರದರ್ಶನ ಸ್ಥಿರವಾಗಿರಲಿಲ್ಲ. ರಿಕಿ ಪಾಂಟಿಂಗ್‌ ಮೇಲೆ ಹಲವು ಫ್ರಾಂಚೈಸಿಗಳು ಕಣ್ಣು ನೆಟ್ಟಿದ್ದಾರೆ.

ಎರಡು ಬಾರಿ ಆಸ್ಟ್ರೇಲಿಯಾ ತಂಡಕ್ಕೆ ವಿಶ್ವಕಪ್‌ ಮುಕುಟ ತೊಡಿಸಿರುವ ಆಸೀಸ್‌ ದಿಗ್ಗಜ ಪ್ಲೇಯರ್ ರಿಕಿ ಪಾಂಟಿಂಗ್, ಕೋಚ್‌ ಆಗಿಯೂ ಕಮಾಲ್‌ ಮಾಡಿದ್ದಾರೆ. ಈ ಬಾರಿ ಐಪಿಎಲ್‌ ಮೆಗಾ ಹರಾಜು ನಡೆಯಲಿದ್ದು, ಈ ಹಾರಜಿಗೂ ಮುನ್ನ ಪಾಂಟಿಂಗ್ ಬೇರೆ ತಂಡ ಸೇರಿಕೊಳ್ಳಬಹುದು. ಎಲ್ಲವೂ ಅಂದುಕೊಂಡಂತೆ ಆದರೆ ಪಾಂಟಿಂಗ್‌ ಹಾಲಿ ಚಾಂಪಿಯನ್‌ ಕೋಲ್ಕತ್ತಾ ನೈಟ್‌ ರೈಡರ್ಸ್ ತಂಡವನ್ನು ಸೇರಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Ricky Ponting Eyes New IPL Franchise After Parting Ways with Delhi Capitals Linked to KKR

ಪಾಟಿಂಗ್ ಹೇಳಿದ್ದೇನು?

ಇತ್ತೀಚಿಗೆ ಸ್ಕೈ ಸ್ಪೋಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ರಿಕಿ ಪಾಂಟಿಂಗ್, 'ಮುಂದಿನ ಕೆಲವು ದಿನಗಳಲ್ಲಿ ವಿಪುಲ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದ್ದಾರೆ. ಡೆಲ್ಲಿ ಇಂದ ಹೊರ ಬರುತ್ತಿದ್ದಂತೆ ತಮ್ಮ ಮುಂದೆ ಸಾಕಷ್ಟು ಅವಕಾಶಗಳು ಇರುವುದಾಗಿ ಪಾಟಿಂಗ್ ಹೇಳಿಕೆ ನೀಡಿದ್ದಾರೆ. ಪಾಟಿಂಗ್‌ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಏಳು ವರ್ಷ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.

ಕೆಕೆಆರ್‌ ತಂಡಕ್ಕೆ ಚಾಂಪಿಯನ್‌ ಮುಕುಟ ತೊಡಿಸಿರುವ ಕೋಚ್‌ ಗೌತಮ್‌ ಗಂಭೀರ್‌, ಈಗ ಟೀಮ್ ಇಂಡಿಯಾದ ಕೋಚ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಊಹಾಪೋಹಗಳ ಪ್ರಕಾರ ರಿಕಿ ಪಾಂಟಿಂಗ್ ಅಥವಾ ಶ್ರೀಲಂಕಾದ ದಿಗ್ಗಜ ಆಟಗಾರ ಕುಮಾರ್ ಸಂಗಾಕ್ಕರ ಕೆಕೆಆರ್‌ ತಂಡದ ಮುಂದಿನ ಕೋಚ್‌ ಆಗಬಹುದು ಎಂದು ತಿಳಿದು ಬಂದಿದೆ.

Ricky Ponting Eyes New IPL Franchise After Parting Ways with Delhi Capitals Linked to KKR

ಐಪಿಎಲ್‌ ಬಗ್ಗೆ ರಿಕಿ ಹೇಳಿದ್ದೇನು?

ಐಪಿಎಲ್‌ನಲ್ಲಿ ಕೋಚ್‌ ಕಾರ್ಯವನ್ನು ನಾನು ಆನಂದಿಸುತ್ತೇನೆ. ಪ್ರತಿ ವರ್ಷವೂ ಈ ಕಾರ್ಯದಲ್ಲಿ ತೊಡಗಿ ಕೊಳ್ಳುವುದು ಉತ್ಸಾಹ ತುಂಬುತ್ತದೆ. ಐಪಿಎಲ್‌ನಲ್ಲಿ ಡೆಲ್ಲಿ ಹಾಗೂ ಮುಂಬೈ ತಂಡದ ಪರ ಕೋಚ್‌ ಆಗಿ ಕೆಲಸ ಮಾಡಿದ್ದು ಖುಷಿಯ ವಿಚಾರ ಎಂದು ಐಸಿಸಿ ರಿವಿವ್ಯೂ ಪ್ರೋಡಕಾಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇನ್ನು ಏಳು ವರ್ಷ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದು ಖುಷಿಯ ವಿಚಾರ ಎಂದು ತಿಳಿಸಿದ್ದಾರೆ.

ರಿಕಿ ಪಾಂಟಿಂಗ್ ಅಧಿಕಾರಾವಧಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಒಂದೇ ಒಂದು ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗದ ಕಾರಣ, ಅವರು ಆ ಫ್ರಾಂಚೈಸಿಯಿಂದ ದೂರವಾಗಬೇಕಾಯಿತು. ಅವರು ಬೇರೆ ತಂಡವನ್ನು ಸೇರಲು ಸಿದ್ಧರಾಗಿದ್ದಾರೆ. ನಾನು ಡೆಲ್ಲಿ ಕ್ಯಾಪಿಟಲ್ಸ್‌ನೊಂದಿಗಿನ ನನ್ನ ಒಪ್ಪಂದವನ್ನು ಸಹ ಮುಗಿಸಿದ್ದೇನೆ, ಆದ್ದರಿಂದ ಮುಂದಿನ ಕೆಲವು ವಾರಗಳಲ್ಲಿ ಐಪಿಎಲ್‌ನಲ್ಲಿ ಇತರ ಕೆಲವು ಅವಕಾಶಗಳು ಬರಬಹುದು. ನಾನು ಎದುರು ನೋಡುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.

Story first published: Saturday, September 14, 2024, 7:31 [IST]
Other articles published on Sep 14, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+