ಪಂಜಾಬ್ ಕಿಂಗ್ಸ್‌ಗೆ ರಿಕಿ ಪಾಂಟಿಂಗ್ ಕೋಚ್; ಅವರ ಮುಂದಿರುವ ಸವಾಲುಗಳೇನು?
ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಈ ವರ್ಷದ ಆರಂಭದಲ್ಲಿ ಕೋಚ್ ರಿಕಿ ಪಾಂಟಿಂಗ್ ಹೊರ ಬಂದಿದ್ದರು. ಅಲ್ಲದೆ ಬೇರೆ ತಂಡ ಸೇರುವುದಾಗಿ ಗುಸುಗುಸು ಆರಂಭವಾಗಿತ್ತು. ಏಳು ವರ್ಷಗಳಲ್ಲಿ ಡೆಲ್ಲಿ ತಂಡ ಒಮ್ಮೆಯೂ ಚಾಂಪಿಯನ್ ಪಟ್ಟವನ್ನು ಅಲಂಕರಿಸದ ಹಿನ್ನೆಲೆ ಬೇಸತ್ತು, ತಂಡವನ್ನು ರಿಕಿ ತ್ಯಜಿಸಿದ್ದರು. ಈಗ ವಿಶ್ವಕಪ್ ವಿಜೇತ ನಾಯ ಪಂಜಾಬ್ ಕಿಂಗ್ಸ್ ತಂಡಕ್ಕೆ ನೂತನ ಕೋಚ್ ಆಗಿ ನೇಮಕ ಗೊಂಡಿದ್ದಾರೆ.
ಫ್ರಾಂಚೈಸಿಯು ಟ್ರೆವರ್ ಬೇಲಿಸ್ ಅವರ ಬದಲಿಗೆ ಮುಂಬರುವ ಋತುವಿಗಾಗಿ ತನ್ನ ತಂಡದ ಹೊಸ ಮುಖ್ಯ ತರಬೇತುದಾರರಾಗಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ನೇಮಿಸಿದೆ. ಪಾಂಟಿಂಗ್ ಪಂಜಾಬ್ ಕಿಂಗ್ಸ್‌ನ ಮುಖ್ಯ ಕೋಚ್ ಆಗಿದ್ದು ಅವರ ಮುಂದೆ ಸಾಲು ಸಾಲು ಸವಾಲುಗಳು ಎದುರು ನಿಂತಿವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಉತ್ತಮ ಜ್ಞಾನವಿರುವುದರಿಂದ ಅವರ ಅನುಭವವು ತಂಡಕ್ಕೆ ಬಹಳ ಮುಖ್ಯವಾಗಲಿದೆ.

ಪಾಂಟಿಂಗ್ ಹೇಳಿದ್ದೇನು?
ಈ ಹೊಸ ಜವಾಬ್ದಾರಿಯ ಬಗ್ಗೆ ಪಾಂಟಿಂಗ್, ನನಗೆ ಈ ಜವಾಬ್ದಾರಿ ನೀಡಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಹೊಸ ಸವಾಲಿನ ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೇನೆ. ನಾನು ತಂಡದ ಮ್ಯಾನೇಜ್‌ಮೆಂಟ್ ಮತ್ತು ಮಾಲೀಕರೊಂದಿಗೆ ಮಾತನಾಡಿದ್ದೇನೆ, ಇದರಲ್ಲಿ ತಂಡವನ್ನು ಮುನ್ನಡೆಸುವುದು ನಮ್ಮೆಲ್ಲರ ಗುರಿಯಾಗಿದೆ ಎಂದಿದ್ದಾರೆ.
ಹರಾಜಿನ ಮೇಲೆ ಕಣ್ಣು?
ರಿಕಿ ಪಾಂಟಿಂಗ್ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಳ್ಳುತ್ತಿದ್ದಂತೆ ಸಾಲು ಸಾಲು ಸವಾಲುಗಳು ಎದುರಾಗಿವೆ. ಇವರ ಮುಂದಿರುವ ದೊಡ್ಡ ಸವಾಲು, ರಿಟೇನ್ ಹಾಗೂ ರಿಲೀಸ್ ಆಟಗಾರರ ಪಟ್ಟಿ. ಅಳೆದು ತೂಗಿ ಈ ಪಟ್ಟಿಯನ್ನು ಸಿದ್ಧಪಡಿಸುವ ಅನಿವಾರ್ಯತೆ ಇದೆ. ಸ್ಟಾರ್ ಆಟಗಾರರು ಹಾಗೂ ಯುವ ಆಟಗಾರರು ಸದ್ಯ ತಂಡದಲ್ಲಿದ್ದು, ಅವರನ್ನು ಕೋಚ್ ಯಾವ ರೀತಿ ನಡೆಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ತಂಡದಲ್ಲಿ ಉಳಿಸಿಕೊಳ್ಳಬೇಕಾದ ಆಟಗಾರರ ಹೆಸರನ್ನು ಸೂಚಿಸುವುದು ದೊಡ್ಡ ಸವಾಲು.

ನಾಯಕನ ಹುಡುಕಾಟ
ಹರಾಜಿನಲ್ಲಿ ಯಾವ ತಂತ್ರದೊಂದಿಗೆ ರಿಕಿ ಪಾಂಟಿಂಗ್ ಅಂಗಳ ಪ್ರವೇಶಿಸುತ್ತಾರೆ ಎಂಬುದು ಕುತೂಹಲ ಮೂಡಿದೆ. ಶ್ರೀಮಂತ ಲೀಗ್‌ನ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ಬೇಕಾದ ಸಿದ್ಧತೆಗಳನ್ನು ಪಾಟಿಂಗ್ ಹರಾಜಿನ ವೇಳೆ ಮಾಡಬೇಕಿದೆ. ಇನ್ನು ಹರಾಜಿನಲ್ಲಿ ಉತ್ತಮ ನಾಯಕನ ಹುಡುಕಾಟ ನಡೆಯುವುದ ಗ್ಯಾರಂಟಿ.
ವಿದೇಶಿಗಳೇ ಬಲ
ಪಂಜಾಬ್ ಕಿಂಗ್ಸ್ ವಿದೇಶಿ ಆಟಗಾರರ ಮೇಲೆ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ. ಸ್ಯಾಮ್ ಕರ್ರನ್, ಲಿಯಾಮ್ ಲಿವಿಂಗ್ಸ್ಟನ್ ಮತ್ತು ಜಾನಿ ಬೈರ್‌ಸ್ಟೋವ್ ಅವರಂತಹ ಆಟಗಾರರು ತಂಡದಲ್ಲಿದ್ದು ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ಕೈ ಬಿಡಬೇಕು ಎಂಬುದೇ ದೊಡ್ಡ ಪ್ರಶ್ನೆ ಆಗಿದೆ. 2014 ರ ಐಪಿಎಲ್ ಋತುವಿನಲ್ಲಿ, ಜಾರ್ಜ್ ಬೈಲಿ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿತ್ತು. ಅಲ್ಲಿಂದ ಈ ವರೆಗೆ ತಂಡ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದೆ. ಈ ತಂಡವನ್ನು ಮತ್ತೆ ಟ್ರ್ಯಾಕ್‌ಗೆ ತರುವ ದೊಡ್ಡ ಜವಾಬ್ದಾರಿ ಕೋಚ್ ಮೇಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications