ತಾನು ಎದುರಿಸಿದ ಅತೀ ಕಷ್ಟಕರ ಓವರ್ ಸ್ಮರಿಸಿದ ರಿಕಿ ಪಾಂಟಿಂಗ್: ವೀಡಿಯೋ

ಸಿಡ್ನಿ, ಏಪ್ರಿಲ್ 10: ವೃತ್ತಿ ಜೀವನದಲ್ಲಿ ತಾನು ಎದುರಿಸಿದ ಅತೀ ಕಷ್ಟಕರ ಓವರ್ ಅನ್ನು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಸ್ಮರಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನ ಎಜ್‌ಬಾಸ್ಟನ್‌ನಲ್ಲಿ ನಡೆದಿದ್ದ 2005ರ ಆ್ಯಷಸ್ ಟೆಸ್ಟ್‌ನಲ್ಲಿ ತಾನು ಬಹಳ ಕಷ್ಟಕರ ಓವರ್ ಎದುರಿಸಿದ್ದೆ ಎಂದು ಪಾಂಟಿಂಗ್ ಹೇಳಿದ್ದಾರೆ. ಅಂದಿನ ಪಂದ್ಯ ನಿಜಕ್ಕೂ ಜಿದ್ದಾಜಿದ್ದಿಯಿಂದ ಕೂಡಿತ್ತು. ಆಸ್ಟ್ರೇಲಿಯಾ ಅಂದು ಕೇವಲ 2 ರನ್‌ನಿಂದ ಇಂಗ್ಲೆಂಡ್‌ಗೆ ಶರಣಾಗಿತ್ತು.
ಇಂಗ್ಲೆಂಡ್ ಕ್ರಿಕೆಟ್ ಶೇರ್ ಮಾಡಿದ್ದ ಟ್ವಿಟರ್ ವೀಡಿಯೋವನ್ನು ಹಂಚಿಕೊಂಡಿರುವ ರಿಕಿ ಪಾಂಟಿಂಗ್, 2005ರ ಆ್ಯಷಸ್ ಟೆಸ್ಟ್ ವೇಳೆ ಇಂಗ್ಲೆಂಡ್ ವೇಗಿ ಆ್ಯಂಡ್ರ್ಯೂ ಫಿಂಟಾಫ್ ಅವರ ಓವರ್ ಬಲು ಕಷ್ಟಕರವಾಗಿತ್ತು. ಆ ಓವರ್ ಒಂಥರಾ ಮ್ಯಾಜಿಕಲ್ ಓವರ್ ಆಗಿತ್ತು ಎಂದಿದ್ದಾರೆ.
ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ಆಗಸ್ಟ್ 4-7ರ ವರೆಗೆ ನಡೆದಿದ್ದ ಪಂದ್ಯವನ್ನು ಪಾಂಟಿಂಗ್ ನೆನಪಿಸಿಕೊಂಡರು.

ಕ್ಲಾಸ್ ಓವರ್ ಅದು
ಇಂಗ್ಲೆಂಡ್ ಕ್ರಿಕೆಟ್‌ನ ಟ್ವೀಟ್ ಶೇರ್ ಮಾಡಿದ್ದ ಟ್ವೀಟಿನಲ್ಲಿ, 'ನಾನು ಎದುರಿಸಿದ ಓವರ್‌ಗಳಲ್ಲಿ ಯಾವತ್ತಿಗೂ ಬೆಸ್ಟ್ ಓವರ್. 90 mph ರಿವರ್ಸ್ ಸ್ವಿಂಗ್‌ನ ಕ್ಲಾಸ್ ಓವರ್ ಅದು' ಎಂದು ಎಂದು ರಿಕಿ ಪಾಂಟಿಂಗ್ ಸಾಲುಗಳನ್ನು ಬರೆದುಕೊಂಡಿದ್ದಾರೆ.

0 ರನ್‌ಗೆ ವಿಕೆಟ್ ಪತನ
ರಿಕಿ ಪಾಂಟಿಂಗ್ ಶೇರ್ ಮಾಡಿಕೊಂಡಿರುವ ವೀಡಿಯೋ ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್‌ನದ್ದು. ಆವತ್ತು ಮೊದಲ ಇನ್ನಿಂಗ್ಸ್‌ನಲ್ಲಿ 61 ರನ್ ಗಳಿಸಿದ್ದ ನಾಯಕ ಪಾಂಟಿಂಗ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಫ್ಲಿಂಟಾಫ್‌ಗೆ 0 ರನ್‌ಗೆ ವಿಕೆಟ್ ನೀಡಿದ್ದರು.

ಇಂಗ್ಲೆಂಡ್ ಮೊದಲು ಬ್ಯಾಟಿಂಗ್
ಪಾಂಟಿಂಗ್ ಸ್ಮರಿಸಿಕೊಂಡಿರುವ ಈ ಟೆಸ್ಟ್ ವೇಳೆ, ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 407 ರನ್ ಗಳಿಸಿದರೆ, ದ್ವಿತೀಯ ಇನ್ನಿಂಗ್ಸ್‌ನಲ್ಲಿ 182 ರನ್ ಮಾಡಿತ್ತು.
ಕೇವಲ 2 ರನ್‌ನಿಂದ ಸೋಲು
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 308 ರನ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ 279 ರನ್ ಬಾರಿಸಿ ಕೇವಲ 2 ರನ್‌ನಿಂದ ಸೋತಿತ್ತು. ಫ್ಲಿಂಟಾಫ್ ಪಂದ್ಯಶ್ರೇಷ್ಠರೆನಿಸಿದ್ದರು. ಅಂದಿನ ಪಂದ್ಯದಲ್ಲಿ ಫ್ಲಿಂಟಾಫ್ 4+3 ವಿಕೆಟ್‌ಗಳನ್ನು ಮುರಿದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications