ಕಳೆದ 10 ವರ್ಷಗಳಿಂದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಕಾಯುತ್ತಿರುವ ಆಸ್ಟ್ರೇಲಿಯಾ ತಂಡ ಈ ಬಾರಿ ಸಂಪೂರ್ಣ ಸಜ್ಜಾಗಿದೆ. ನವೆಂಬರ್‌ನಲ್ಲಿ ಭಾರತ ತಂಡವು ಈ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ನಾಯಕ ರೋಹಿತ್ ಮತ್ತು ಹೊಸ ಹೆಡ್ ಕೋಚ್ ಗೌತಮ್ ಗಂಭೀರ್ ಅವರಿಗೆ ಅಗ್ನಿಪರೀಕ್ಷೆ ಎದುರಾಗಿದೆ.
ಈ ಸರಣಿಗೂ ಮುನ್ನ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಹಲವು ದಿನಗಳ ವಿರಾಮ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್‌ಗಳನ್ನು ಕಟ್ಟಿ ಹಾಕಲು ಯೋಜನೆಗಳನ್ನು ರೆಡಿ ಮಾಡುವುದರಲ್ಲಿ ಕಾಂಗೂರು ಪಡೆ ನಿರತವಾಗಿದೆ. ಇಂತಹ ಸಂದರ್ಭದಲ್ಲಿ ಟೀಮ್ ಇಂಡಿಯಾದ ಸ್ಟಾರ್ ವಿಕೆಟ್‌ಕೀಪರ್- ಬ್ಯಾಟರ್ ರಿಷಬ್ ಪಂತ್ ಅವರ ಬಗ್ಗೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತಮ್ಮ ತಂಡಕ್ಕೆ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಸ್ಕೈ ಸ್ಪೋರ್ಟ್ಸ್‌ನಲ್ಲಿ ರಿಕಿ ಪಾಂಟಿಂಗ್, ರಿಷಬ್ ಪಂತ್ ಅವರನ್ನು ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಗೆ ಹೋಲಿಸಿ ಮಾತನಾಡಿದ್ದಾರೆ. 'ನಾವೆಲ್ಲರೂ ರಿಷಬ್ ಆಡುವುದನ್ನು ನೋಡಿದ್ದೇವೆ. ಸ್ಟಂಪ್ ಮೈಕ್‌ನಲ್ಲಿ ಅವರ ಧ್ವನಿಯನ್ನು ಕೇಳಿದ್ದೇವೆ. ಅವರು ತಂಡದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ವ್ಯಕ್ತಿತ್ವದ ಆಟಗಾರ.
ಕ್ರಿಕೆಟ್ ಪ್ರೀತಿಸುವುರಿಂದ ರಿಷಬ್ ಚಾಂಪಿಯನ್ ಆಗಿದ್ದಾರೆ. ಅವರು ಕೆಲವು ರನ್ ಗಳಿಸಲು ಮತ್ತು ಮೋಜಗಾಗಿ ಆಡುವುದಿಲ್ಲ. ಅವರು ಈಗಾಗಲೇ 5 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಧೋನಿ 120 ಟೆಸ್ಟ್‌ಗಳನ್ನು ಆಡಿದ್ದು, ಕೇವಲ 6 ಶತಕಗಳನ್ನು ಹೊಂದಿದ್ದಾರೆ ಎಂದು ಹೊಗಳಿದ್ದಾರೆ.
ಪಂತ್ ವರ್ಷವಿಡೀ ಅಪಘಾತದ ಗಾಯಗಳಿಂದ ಚೇತರಿಸಿಕೊಂಡು ಇದೀಗ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಮ್ಮ ಕಮಾಲ್ ತೋರಲು ಸಿದ್ದರಾಗಿದ್ದಾರೆ. ಈ ಕುರಿತು ಪಾಂಟಿಂಗ್ ಪ್ರತಿಕ್ರಿಯಿಸಿದ್ದು, 'ಇದು ಗಮನಾರ್ಹ ಪುನರಾಗಮನವಾಗಿದೆ. ನೀವು ಈಗ ಅವರ ಕಾಲನ್ನು ನೋಡಿದರೆ, ಕಾರು ಅಪಘಾತದ ಸಮಯದಲ್ಲಿ ಅವನು ನೋಡಿದ ಕಥೆಗಳ ಬಗ್ಗೆ ಹೇಳುತ್ತದೆ. ಅವರು ಈ ವರ್ಷ ಐಪಿಎಲ್‌ನಲ್ಲಿ ಆಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಆದರೆ 12 ತಿಂಗಳ ಹಿಂದೆ, 'ನನ್ನ ಬಗ್ಗೆ ಚಿಂತಿಸಬೇಡಿ, ನಾನು ಐಪಿಎಲ್‌ಗೆ ಚೆನ್ನಾಗಿರುತ್ತೇನೆ ಎಂದು ರಿಷಬ್ ಹೇಳಿದ್ದರು.
ಐಪಿಎಲ್‌ನಲ್ಲಿ ನಾವು ರಿಷಬ್ ಪಂತ್ ಅವರನ್ನು ಪ್ರಭಾವಿ ಆಟಗಾರನಾಗಿ ಬಳಸಿದ್ದವು. ಆದರೆ ಅವರು ಪ್ರತಿ ಪಂದ್ಯದಲ್ಲೂ ವಿಕೆಟ್‌ಗಳನ್ನು ಉಳಿಸಿಕೊಂಡರು. ಅವರು ನಮ್ಮ ಪ್ರಮುಖ ರನ್ ಸ್ಕೋರರ್‌ಗಳಲ್ಲಿ ಒಬ್ಬರಾಗಿದ್ದರು.
ಟಿ20 ವಿಶ್ವಕಪ್‌ನಲ್ಲಿಯೂ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು ಎಂದು ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಎಷ್ಟು ಅಪಾಯಕಾರಿ ಆಗಬಹುದು ಎಂದು ರಿಕಿ ಪಾಂಟಿಂಗ್ ತಿಳಿಸಿದ್ದಾರೆ.