Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rinku Singh: ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ನಿಶ್ಚಿತಾರ್ಥ

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ರಿಂಕು ಸಿಂಗ್‌ ಾಗೂ ಸಂಸದೆ ಪ್ರಿಯಾ ಸರೋಜ್‌ ಅವರು ಭಾನುವಾರ (ಮೇ 8) ದಂದು ಲಕ್ನೋದ ಸೆಂಟ್ರಮ್ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಈ ಶುಭಸಮಾರಂಭಕ್ಕೆ ಕ್ರಿಕೆಟ್‌ ಹಾಗೂ ರಾಜಕೀಯ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಚಿತ್ರಗಳು ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿವೆ. ಈ ಚಿತ್ರದಲ್ಲಿ ಇಬ್ಬರು ನಿಶ್ಚಿತಾರ್ಥವನ್ನು ಮಾಡಿಕೊಂಡಿರುವ ಸಂಭ್ರಮ ಎದ್ದು ಕಾಣುತ್ತದೆ.

ರಿಂಕ ಸಿಂಗ್‌ ಅವರ ನಿಶ್ಚಿತಾರ್ಥಕ್ಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಡಿಂಪಲ್ ಯಾದವ್, ಜಯಾ ಬಚ್ಚನ್ ಮತ್ತು ಪ್ರವೀಣ್ ಕುಮಾರ್ ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ತಾರೆಯರು ಒಬ್ಬರೊನ್ನೊಬ್ಬರ ಕೈ ಹಿಡಿದುಕೊಂಡು ವೇದಿಕೆಯತ್ತ ಬಂದಿರುವ ವಿಡಿಯೋ ಕಂಡು ಬಂದಿದೆ. ಇದೇ ವಿಡಿಯೋದಲ್ಲಿ ಪ್ರಿಯಾ ತಂಡದ ತೂಫಾನಿ ಸರೋಜ್‌ ಅವರು ಕಾರ್ಯಕ್ರಮ ಅಚ್ಚು ಕಟ್ಟಾಗಿ ನೆರವೇರಲಿ ಎಂದು ವ್ಯವಸ್ಥೆ ಮಾಡುತ್ತಿದ್ದರು. ಈ ವೇಳೆ ರಿಂಕು ಅವರ ಕಾಲುಗಳಿಗೆ ನಮಸ್ಕರಿಸುವುದು ಸಹ ಕಂಡು ಬಂದಿತು.

Rinku Singh and MP Priya Saroj Get Engaged in Star-Studded Lucknow Ceremony

ರಿಂಕು ಹಾಗೂ ಪ್ರಿಯಾ ಸರೋಜ್‌ ಇಬ್ಬರೂ ವೇದಿಕೆ ಹತ್ತುತ್ತಾ ಇದ್ದಂತೆ ಕಾರ್ಯಕ್ರಮದ ಕಳೆ ಇಮ್ಮಡಿ ಆಯಿತು. ರಿಂಕು ಸಿಂಗ್ ಪ್ರಿಯಾ ಸರೋಜ್‌ ಅವರ ಕೈ ಹಿಡಿದು ಉಂಗುರವನ್ನು ತೊಡಿಸಿದರು. ಈ ವೇಳೆ ಸಂಸದೆ ಪ್ರಿಯಾ ಭಾವುಕರಾದರು. ಅವರ ಕಣ್ಣುಗಳಲ್ಲಿ ನೀರು ತುಂಬಿತು.

ಅತಿಥಿಗಳಿಗೆ ಭೂರಿ ಭೋಜನ

ರಿಂಕು ಸಿಂಗ್, ಪ್ರಿಯಾ ಸರೋಜ್‌ ಅವರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಭೂರಿ ಭೋಜನವನ್ನು ಏರ್ಪಡಿಸಲಾಗಿತ್ತು. ವೆಜಟೇರಿಯನ್‌ ಊಟದ ವ್ಯವಸ್ಥೆ ಮಾಡಲಾಗುತ್ತಿ. ಸ್ವಾಗತ ಪಾನೀಯದಲ್ಲಿ 'ಕುಹಾಡ' ಸೇರಿತ್ತು. ಸ್ಟಾರ್ಟ್‌ ಅಪ್‌ಗಳಲ್ಲಿ ವಿದೇಶಿ ಖಾದ್ಯಗಳು ಇದ್ದವು. ಇನ್ನು ಬಂಗಾಳಿ ರಸಗುಲ್ಲಾ, ಕಾಜು ಪನೀರ್ ರೋಲ್, ಪನೀರ್ ಟಿಕ್ಕಾ ಮತ್ತು ಮಟರ್ ಮಲೈ, ಮಲೈ ಕೋಫ್ತಾ, ಕಡಾಯಿ ಪನೀರ್, ಮಿಕ್ಸ್ ವೆಜ್, ಮಂಚೂರಿಯನ್, ಸ್ಪ್ರಿಂಗ್ ರೋಲ್ ಮತ್ತು ನೂಡಲ್ಸ್ ಭೂರಿ ಭೋಜನದ ರಂಗನ್ನು ಹೆಚ್ಚಿಸಿದ್ದವು.

ಪ್ರಿಯಾ ಸರೋಜ್ ಯಾರು?

ಪ್ರಿಯಾ ಸರೋಜ್‌, ಉತ್ತರ ಪ್ರದೇಶದ ಪ್ರತಿಷ್ಠಿತ ರಾಜಕೀಯ ಕುಟಂಬಕ್ಕೆ ಸೇರಿದ ಹೆಣ್ಣುಮಗಳು. ಇವರು 2024ರ ಚುನಾವಣೆಯಲ್ಲಿ ಮಚ್ಲಿ ಶಹರ್‌ನಿಂ ಸಂಸದೆಯಾದ್ರು. ಇವರು ತಮ್ಮ ಸಮೀಪದ ಪ್ರತಿ ಸ್ಪರ್ಧಿ ಬಿಪಿ ಸರೋಜ್‌ ಅವರನ್ನು 35850 ಮತಗಳಿಂದ ಸೋಲಿಸಿದರು.ಪ್ರಿಯಾ ಸರೋಜ್‌ ಅವರ ತಂದೆ ಸಹ ಮೂರು ಬಾರಿ ಸಂಸದರು.

ರಿಂಕು ಸಿಂಗ್ ಸಾಧನೆ

ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ರಿಂಕು ಸಿಂಗ್‌, ಟೀಮ್ ಇಂಡಿಯಾಕ್ಕೆ ಆಯ್ಕೆಯಾದ ಆಟಗಾರ. ಇವರು ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದಲೆ ಹೆಸರುವಾಸಿಯಾಗಿದ್ರು. ಇವರು ಸತತ ಐದು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಮುನ್ನೆಲೆಗೆ ಬಂದ್ರು. ಇಲ್ಲಿಂದ ಇವರಿಗೆ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶಗಳು ಸಿಕ್ಕವು. ಇವರನ್ನು ಭಾರತ ತಂಡದ ಭವಿಷ್ಯದ ತಾರೆ ಎಂದು ಗುರುತಿಸಲಾಗುತ್ತಿದೆ.

Story first published: Sunday, June 8, 2025, 19:39 [IST]
Other articles published on Jun 8, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+