For Quick Alerts
ALLOW NOTIFICATIONS  
For Daily Alerts
 

IND vs BAN: ಮೊದಲ ಬಾರಿಗೆ ಭಾರತ ಟೆಸ್ಟ್ ತಂಡದಲ್ಲಿ ಕಾಣಿಸಿಕೊಳ್ಳಲಿರುವ ಭಯಾನಕ ಬ್ಯಾಟರ್!

ಆಗಸ್ಟ್ 10 ಶನಿವಾರ, ಶ್ರೀಲಂಕಾ ಪ್ರವಾಸದ ನಂತರ, ಈಗ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ಟೆಸ್ಟ್ ಮತ್ತು ಟಿ20 ಅಂತರಾಷ್ಟ್ರೀಯ ಸರಣಿಗಳನ್ನು ಆಡಲು ತಯಾರಾಗುತ್ತಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಉಭಯ ದೇಶಗಳ ನಡುವಿನ ಟೆಸ್ಟ್ ಸರಣಿಯು ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 1 ರವರೆಗೆ ನಡೆಯಲಿದೆ.

ಸ್ಟಾರ್ ಆಟಗಾರರ ಕಳಪೆ ಪ್ರದರ್ಶನದಿಂದ ಶ್ರೀಲಂಕಾ ವಿರುದ್ಧ ಭಾರತ ಏಕದಿನ ಸರಣಿ ಸೋತಿದೆ. ಹೀಗಾಗಿ ಮುಂಬರುವ ಬಾಂಗ್ಲಾದೇಶ ವಿರುದ್ಧದ ತವರಿನ ಸರಣಿಗೆ ಟೀಮ್ ಇಂಡಿಯಾ ಆಟಗಾರರ ಸಂಯೋಜನೆ ಪ್ರಮುಖವಾಗಿದೆ. ಈ ಹಿನ್ನಲ್ಲೆ ಹೆಡ್ ಕೋಚ್ ಗೌತಮ್ ಗಂಭೀರ್ ತನ್ನ ತಂತ್ರಗಾರಿಕೆಯನ್ನು ಹೇಗೆ ಬಳಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Rinku Singh can make his Test cricket debut for India

ಹೀಗಾಗಿ ಟೆಸ್ಟ್ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ ಅವರ ಒತ್ತಡವನ್ನು ಕಡಿಮೆ ಮಾಡಬಲ್ಲ ಆಟಗಾರರನೊಬ್ಬ ತಂಡಕ್ಕೆ ಸೇರ್ಪಡೆಯಾಗಬಹುದು. ಟೀಮ್ ಇಂಡಿಯಾದ ಅತ್ಯಂತ ಭಯಾನಕ ಬ್ಯಾಟರ್ ಮೊದಲ ಬಾರಿಗೆ ಟೆಸ್ಟ್‌ಗೆ ಪ್ರವೇಶಿಸುವ ಸಾಧ್ಯತೆಯಿದೆ. ಈ ಸ್ಪೋಟಕ ಬ್ಯಾಟರ್ ಲೀಲಾಜಾಲವಾಗಿ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸುವುದಕ್ಕೆ ಹೆಚ್ಚು ಹೆಸರುವಾಸಿಯಾಗಿದ್ದಾರೆ.

ಟೆಸ್ಟ್ ಕ್ರಿಕೆಟ್‌ಗೆ ಅಪಾಯಕಾರಿ ಬ್ಯಾಟರ್

ಸೆಪ್ಟೆಂಬರ್ 19 ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಅಪಾಯಕಾರಿ ಬ್ಯಾಟರ್‌ ರಿಂಕು ಸಿಂಗ್ ಅವರನ್ನು ಕಣಕ್ಕಿಳಿಸಬಹುದು. ರಿಂಕು ಸಿಂಗ್ ಕೂಡ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್‌ನ ದಾಖಲೆಗಳು ರಿಂಕು ಸಿಂಗ್ ಅವರು ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡಲು ಅತ್ಯುತ್ತಮ ಬ್ಯಾಟರ್ ಎಂದು ತೋರಿಸುತ್ತವೆ. ರಿಂಕು ಸಿಂಗ್ 47 ಪ್ರಥಮ ದರ್ಜೆ ಪಂದ್ಯಗಳಲ್ಲಿ 54.70 ಸರಾಸರಿ ಮತ್ತು 71.59 ಸ್ಟ್ರೈಕ್ ರೇಟ್‌ನಲ್ಲಿ 3173 ರನ್ ಗಳಿಸಿದ್ದಾರೆ.

ಈ ವೇಳೆ ರಿಂಕು ಸಿಂಗ್ 7 ಶತಕ ಹಾಗೂ 20 ಅರ್ಧ ಶತಕ ಬಾರಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ರಿಂಕು ಸಿಂಗ್ ಅವರ ಅತ್ಯುತ್ತಮ ಸ್ಕೋರ್ ಎಂದರೆ ಔಟಾಗದೆ 163 ರನ್. ಟೆಸ್ಟ್ ಕ್ರಿಕೆಟ್‌ನಲ್ಲಿ 5ನೇ ಕ್ರಮಾಂಕದ ಬ್ಯಾಟಿಂಗ್ ಮಾಡು ರಿಂಕು ಸಿಂಗ್ ಅವರಂತಹ ಆಟಗಾರರ ಅಗತ್ಯವಿದೆ.

ಬಿರುಸಿನ ಬ್ಯಾಟಿಂಗ್

ರಿಂಕು ಸಿಂಗ್ ತಮ್ಮ ಬೀರುಸಿನ ಬ್ಯಾಟಿಂಗ್‌ ಟ್ರೈಲರ್ ಅನ್ನು ಐಪಿಎಲ್ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಡೀ ಜಗತ್ತಿಗೆ ತೋರಿಸಿದ್ದಾರೆ. ರಿಂಕು ಸಿಂಗ್ ಸ್ಪಿನ್ ಮತ್ತು ವೇಗದ ಬೌಲಿಂಗ್‌ಗೆ ಉತ್ತಮವಾಗಿ ಆಡುತ್ತಾರೆ. ರಿಂಕು ಸಿಂಗ್ ಭಾರತ ಪರ ಇದುವರೆಗೆ 23 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ರಿಂಕು 59.71 ರ ಅತ್ಯುತ್ತಮ ಸರಾಸರಿ ಮತ್ತು 174.16 ಸ್ಟ್ರೈಕ್ ರೇಟ್‌ನಲ್ಲಿ 33 ಬೌಂಡರಿಗಳು ಮತ್ತು 26 ಸಿಕ್ಸರ್‌ಗಳನ್ನು ಒಳಗೊಂಡಂತೆ 418 ರನ್ ಗಳಿಸಿದ್ದು, 2 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದಲ್ಲದೇ ಅವರು ಅಂತಾರಾಷ್ಟ್ರೀಯ ಟಿ20ಯಲ್ಲಿ 2 ವಿಕೆಟ್ ಪಡೆದಿದ್ದಾರೆ. 2 ಏಕದಿನ ಪಂದ್ಯಗಳಲ್ಲಿ 55 ರನ್ ಗಳಿಸಿದ್ದಲ್ಲದೆ, ರಿಂಕು ಸಿಂಗ್ 1 ವಿಕೆಟ್ ಉರುಳಿಸಿದ್ದಾರೆ.

ಸಂಪೂರ್ಣ ವಿಶ್ವಾಸ

ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರಿಂಕು ಸಿಂಗ್ ಅವರು ಪಾದಾರ್ಪಣೆ ಮಾಡಿದರೆ, ಅವರು ಖಂಡಿತವಾಗಿಯೂ ದೊಡ್ಡ ಮಟ್ಟದಲ್ಲಿ ಮಿಂಚಲಿದ್ದಾರೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಿಂಕು ಸಿಂಗ್ ಇತ್ತೀಚಿನ ದಿನಗಳಲ್ಲಿ ಅಪಾಯಕಾರಿ ಬ್ಯಾಟರ್‌ಗಳ ಸಾಲಿನಲ್ಲಿ ಬಂದು ನಿಂತಿದ್ದಾರೆ. ಐಪಿಎಲ್ 2023 ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಕೊನೆಯ ಓವರ್‌ನಲ್ಲಿ ಸತತ ಐದು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ರಿಂಕು ಸಿಂಗ್ ತನ್ನ ತಂಡವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿನತ್ತ ಮುನ್ನಡೆಸಿದ್ದರು.

ಈ ಇನ್ನಿಂಗ್ಸ್ ನಂತರ ರಿಂಕು ಸಿಂಗ್ ಸಾಕಷ್ಟು ಫೇಮಸ್ ಆದರು. ಭಾರತಕ್ಕೆ ಮ್ಯಾಚ್ ಫಿನಿಶರ್‌ಗಳ ಅಗತ್ಯವಿದ್ದು, ಈ ಸ್ಥಾನವನ್ನು ರಿಂಕು ಸಿಂಗ್ ತುಂಬಲು ರೆಡಿಯಾಗಿದ್ದಾರೆ.

Story first published: Saturday, August 10, 2024, 11:11 [IST]
Other articles published on Aug 10, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+