For Quick Alerts
ALLOW NOTIFICATIONS  
For Daily Alerts
 

Rinku Singh ಬ್ಯಾಟಿಂಗ್‌ಗೆ ಫ್ಯಾನ್ಸ್‌ ಫುಲ್ ಮಾರ್ಕ್ಸ್‌, ಇವರಲ್ಲಿವೆಯಾ ಸೂಪರ್ ಸ್ಟಾರ್ ಕ್ವಾಲಿಟಿ

ರಿಂಕು ಸಿಂಗ್ ತಮ್ಮ ಅದ್ಭುತ ಆಟದ ಪ್ರದರ್ಶನದ ಬಲದಿಂದ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುತ್ತಿದ್ದಾರೆ. ಈ ಎಡಗೈ ಆಟಗಾರ ಐಪಿಎಲ್‌ನಲ್ಲಿ ತಮ್ಮ ಧಮಾಕೆದಾರ್ ಆಟದ ಮೂಲಕವೇ ಎಲ್ಲರ ಚಿತ್ತ ಕದ್ದಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಿಂಕು ಸತತ ಐದು ಸಿಕ್ಸರ್‌ಗಳನ್ನು ಬಾರಿಸುವುದರಿಂದ ಹಿಡಿದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಅರ್ಧಶತಕ ಬಾರಿಸಿದ್ದಾರೆ. ಅಲ್ಲದೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ರಿಂಕು ಸಿಂಗ್ ಅವರ ಆಟವನ್ನು ಗಮನಿಸಿದ ಅಭಿಮಾನಿಗಳಿಗೆ ಇವರಿಗೆ ಮ್ಯಾಚ್‌ ಫಿನಿಶರ್ ಎಂದೇ ಕರೆಯುತ್ತಿದ್ದಾರೆ. ಇವರ ಆಟವನ್ನು ಅಭಿಮಾನಿಗಳು ಮಾಜಿ ಸ್ಟಾರ್ ಆಟಗಾರ ಯುವರಾಜ್ ಸಿಂಗ್ ಅವರ ಜೊತೆಗೆ ತಾಳೆ ಹಾಕುತ್ತಿದ್ದಾರೆ.

Rinku Singh Is a Fan Favorite for Batter, He Has Superstar Quality

ಯುವರಾಜ್ ನಂತರ ಟೀಂ ಇಂಡಿಯಾಗೆ ಅವರಂತಹ ಆಟಗಾರ ಸಿಕ್ಕಿರಲಿಲ್ಲ. ಯುವಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್‌.. ಇವರ ನಿವೃತ್ತಿಯ ಬಳಿಕ ಈ ಸ್ಥಾನವನ್ನು ಇನ್ನು ಯಾರು ಸಮರ್ಥವಾಗಿ ನಿಭಾಯಿಸಲಿಲ್ಲ. ರಿಂಕು ಸಿಂಗ್ ಅವರ ಆಟವನ್ನು ನೋಡಿದ ಅಭಿಮಾನಿಗಳು ಯುವರಾಜ್ ಸಿಂಗ್‌ ಸ್ಥಾನವನ್ನು ತುಂಬ ಬಲ್ಲ ಸ್ಟಾರ್ ಆಟಗಾರ ಸಿಕ್ಕಿದ್ದಾನೆ ಎಂದು ಭಾವಿಸುತ್ತಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ರಿಂಕು ಸಿಂಗ್ ಅವರ ಬ್ಯಾಟಿಂಗ್‌ನಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಛಾಯೆ ಕಾಣುತ್ತಿದ್ದಾರೆ.

ಭಾರತದ ದಂತಕಥೆ ಸುನಿಲ್ ಗವಾಸ್ಕರ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ರಿಂಕು ಸಿಂಗ್, ಯುವರಾಜ್ ಸಿಂಗ್ ಆಟದ ಅರ್ಧದಷ್ಟು ಆಟವನ್ನು ಆಡಿದರೆ ತಂಡಕ್ಕೆ ಅನುಕೂಲವಾಗುತ್ತದೆ. ಎಡಗೈ ಆಟಗಾರ ಸಿಕ್ಸರ್‌ ಬಾರಿಸುವ ರೀತಿಯನ್ನು ನೋಡಿದಾಗ ಯುವರಾಜ್ ಸಿಂಗ್ ಬ್ಯಾಟಿಂಗ್ ಧಾಟಿ ಕಾಣುತ್ತದೆ. ಇನ್ನು ಇವರು ಪಂದ್ಯವನ್ನು ಫಿನಿಷ್ ಮಾಡುವ ರೀತಿಯನ್ನು ಕಂಡಾಗ ಮಾಹಿ ಅವರ ಬ್ಯಾಟಿಂಗ್ ಗುಣಗಳು ಕಂಡು ಬರುತ್ತವೆ ಎಂದು ಅಭಿಮಾಣಿಗಳು ಹೇಳುತ್ತಾರೆ.

ರಿಂಕು ಸಿಂಗ್ ಅವರೇ ಹೇಳಿದಂತೆ, ಅವರು ತನ್ನನ್ನು ತಾನು ಶಾಂತವಾಗಿರಿಸಿಕೊಳ್ಳಲು ಪ್ರಯತ್ನಿಸಿರುವುದಾಗಿ ತಿಳಿಸಿದ್ದು, ವಿಷಯಗಳನ್ನು ಸರಳವಾಗಿರಿಸಿಕೊಳ್ಳುತ್ತಾನೆ ಎಂದು ತಿಳಿಸಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ಶಾಂತವಾಗಿ ಮತ್ತು ಸರಳವಾಗಿ ಆಟವನ್ನು ಇಟ್ಟುಕೊಳ್ಳುವುದು ಆಟಗಾರನ ಉತ್ತಮ ಸಾಮರ್ಥ್ಯ. ಭಾರತದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡ ತನ್ನನ್ನು ತಾನು ಶಾಂತವಾಗಿ ಮತ್ತು ಸರಳವಾಗಿಟ್ಟುಕೊಳ್ಳುವ ಸಿದ್ಧಾಂತವನ್ನು ನಂಬುತ್ತಾರೆ. ರಿಂಕು ಸಿಂಗ್ ಅವರ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ಆಗುವ ಸಾಮರ್ಥ್ಯವನ್ನು ಹೊಂದಿದ್ದಾರೆ.

Rinku Singh Is a Fan Favorite for Batter, He Has Superstar Quality

ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಅದರ ಎರಡನೇ ಪಂದ್ಯ ಮಂಗಳವಾರ (ಡಿಸೆಂಬರ್ 12) ನಡೆಯಿತು, ಇದರಲ್ಲಿ ರಿಂಕು 39 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಹಾಯದಿಂದ 68 ರನ್ ಗಳಿಸಿದರು. ಇದು ರಿಂಕು ಅವರ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಮೊದಲ ಅರ್ಧಶತಕವಾಗಿದೆ.

Story first published: Wednesday, December 13, 2023, 16:51 [IST]
Other articles published on Dec 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+