ರಿಂಕು ಸಿಂಗ್ ಕೆಕೆಆರ್ ಗೆಲುವಿನ ಹೀರೋ: ಕೊನೆಯ ಓವರ್‌ನಲ್ಲಿ ಪಂದ್ಯದ ಚಿತ್ರ ಬದಲಿಸಿದ ಸ್ಟಾರ್
ಲಕ್ನೋನ ಏಕಾನ ಮೈದಾನದಲ್ಲಿ 19ನೇ ಆವೃತ್ತಿಯ ಐಪಿಎಲ್‌ನ 38ನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳು ಕಾದಾಟ ನಡೆಸಿದವು. ಉಭಯ ತಂಡಗಳು ಅಂಕ ಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿ ಇದ್ದಿದರಿಂದ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು.
ಮಹತ್ವದ ಪಂದ್ಯದಲ್ಲಿ ಲಕ್ನೋ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಮುಂದಾಯಿತು. ಲಕ್ನೋ ತಂಡದ ನಾಯಕನ ನಿರ್ಧಾರವನ್ನು ವೇಗದ ಬೌಲರ್‌ಗಳು ಸಮರ್ಥಿಸಿಕೊಳ್ಳುವಲ್ಲಿ ಸಫಲರಾದರು. ಈ ವೇಳೆ ಎಡಗೈ ವೇಗದ ಬೌಲರ್ ಮೊಹ್ಸಿನ್ ಖಾನ್ 5 ವಿಕೆಟ್ ಕಬಳಿಸಿದರು. ಕೆಕೆಆರ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ಫಿನಿಷರ್ ರಿಂಕು ಸಿಂಗ್ ಕಮಾಲ್ ಬ್ಯಾಟಿಂಗ್ ನಡೆಸಿದರು.

ಕೆಕೆಆರ್ 18 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 112 ರನ್ ಸೇರಿಸಿತ್ತು. ಈ ವೇಳೆ ರಿಂಕು ಸಿಂಗ್ ಹಾಗೂ ಸುನಿಲ್ ನರೈನ್ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಮುಂದಿನ ಎರಡು ಓವರ್‌ಗಳ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಶಮಿ 19ನೇ ಓವರ್ ಬೌಲ್ ಮಾಡಲು ಮುಂದಾದರು. ಈ ಓವರ್‌ನಲ್ಲಿ ಕೆಕೆಆರ್ 17 ರನ್ ಸಿಡಿಸಿತು. ಇನ್ನು ಕೊನೆಯ ಓವರ್ ಬೌಲ್ ಮಾಡಲು ದಿಗ್ವೇಶ್ ರಾಠಿ ಮುಂದಾದರು.
ಗೆಲುವಿನ ಹೀರೋ
ರಿಂಕು ಸಿಂಗ್ ಈ ಓವರ್‌ನಲ್ಲಿ ತಮ್ಮ ಕ್ಷಮತೆ ತೋರಿಸಿದರು. ಇವರು ಕೊನೆಯ ಓವರ್‌ನಲ್ಲಿ ಬರೋಬ್ಬರಿ 26 ರನ್ ಸಿಡಿಸಿದರು. ರಿಂಕು ಸಿಂಗ್ ಅವರ ಅಜೇಯ 83 ರನ್‌ಗಳ ಆಟದ ಪರಿಣಾಮವೇ ಕೆಕೆಆರ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 155 ರನ್ ಸೇರಿಸಿತು. ನಿಜಕ್ಕೂ ಇದುವೇ ಪಂದ್ಯದ ಚಿತ್ರಣವನ್ನು ಬದಲಿಸಿತು. ಇನ್ನು ರಿಂಕು ಸಿಂಗ್ ಪಂದ್ಯದಲ್ಲಿ ನಾಲ್ಕು ಕ್ಯಾಚ್ ಪಡೆದರು. ಅದರಲ್ಲೂ ಏಡನ್ ಮಾರ್ಕ್ರಾಮ್ ಅವರ ಅಮೋಘ ಕ್ಯಾಚ್ ಸೇರಿದೆ. ನಿಜಕ್ಕೂ ರಿಂಕು ಸಿಂಗ್ ಕೆಕೆಆರ್ ಗೆಲುವಿನ ಹೀರೋ ಆದರು. ಈ ಗೆಲುವಿನ ಮೂಲಕ ಕೆಕೆಆರ್ ಆಡಿದ 8 ಪಂದ್ಯಗಳಲ್ಲಿ 2 ಜಯ, 5 ಸೋಲು ಕಂಡಿದ್ದು, 5 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ.
ಸಂಕ್ಷಿಪ್ತ ಸ್ಕೋರ್
ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 155 ರನ್: ಕ್ಯಾಮರೂನ್ ಗ್ರೀನ್ 34, ರಿಂಕು ಸಿಂಗ್ ಅಜೇಯ 83, ಮೊಹ್ಸಿನ್ ಖಾನ್ 23ಕ್ಕೆ 5
ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 155 ರನ್: ಏಡನ್ ಮಾರ್ಕ್ರಾಮ್ 31, ರಿಷಭ್ ಪಂತ್ 42, ಆಯುಷ್ ಬದೋನಿ 24, ವೈಭವ್ ಆರೋರಾ 24ಕ್ಕೆ 2
ಪಂದ್ಯದ ಫಲಿತಾಂಶ: ಸೂಪರ್ ಓವರ್‌ನಲ್ಲಿ ಎಲ್‌ಎಸ್‌ಜಿ 1 ರನ್‌ಗೆ 2 ವಿಕೆಟ್ ಕಳೆದುಕೊಂಡಿತು. ಕೆಕೆಆರ್ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿ ಪಂದ್ಯ ಗೆದ್ದಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications