IPL 2025: ವಿರಾಟ್ ಕೊಹ್ಲಿ ಜೊತೆ ಬ್ಯಾಟಿಂಗ್ ಮಾಡುವ ರಿಂಕು ಸಿಂಗ್ ಕನಸು ನನಸಾಗುತ್ತಾ?
ಟೀಮ್ ಇಂಡಿಯಾ ಯುವ ಸ್ಪೋಟಕ ಬ್ಯಾಟರ್ ರಿಂಕು ಸಿಂಗ್ ಪ್ರಸಕ್ತ ಯುಪಿ ಟಿ20 ಲೀಗ್‌ನಲ್ಲಿ ಆಡುತ್ತಿದ್ದಾರೆ. ರಿಂಕು ತನ್ನ ನಿರಂತರ ಅತ್ಯುತ್ತಮ ಪ್ರದರ್ಶನದಿಂದ ಎಲ್ಲರ ಮನ ಗೆದ್ದಿದ್ದಾರೆ.
2024ರ ಟಿ20 ವಿಶ್ವಕಪ್‌ನ ಭಾರತ ತಂಡದಲ್ಲಿ ರಿಂಕು ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೂ ಅವರು ನಿರಾಶೆಗೊಳ್ಳದೆ ಜಿಂಬಾಬ್ವೆ ಮತ್ತು ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಟಿ20 ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇತ್ತೀಚೆಗೆ ಮುಂದಿನ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ತನ್ನನ್ನು ಉಳಿಸಿಕೊಳ್ಳದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)ನಲ್ಲಿ ವಿರಾಟ್ ಕೊಹ್ಲಿ ಅವರೊಂದಿಗೆ ಆಡಲು ಬಯಸುತ್ತೇನೆ ಎಂದು ರಿಂಕು ಹೇಳಿದ್ದರು. ಇದೀಗ ಮತ್ತೊಮ್ಮೆ ರಿಂಕು ಸಿಂಗ್ ಆರ್‌ಸಿಬಿ ಸೇರುವ ಬಯಕೆ ವ್ಯಕ್ತಪಡಿಸಿದ್ದಾರೆ.
ವಿರಾಟ್ ಜೊತೆ ಬ್ಯಾಟಿಂಗ್ ಮಾಡುವ ಕನಸು
ಐಪಿಎಲ್ 2024ರಲ್ಲಿ ವಿರಾಟ್ ಕೊಹ್ಲಿ ಬಳಿ ರಿಂಕು ಸಿಂಗ್ ಬ್ಯಾಟ್ ಕೇಳುವ ವಿಡಿಯೋ ಸಖತ್ ವೈರಲ್ ಆಗಿತ್ತು. ಈಗ ಯುಪಿ ಟಿ20 ಲೀಗ್‌ನಲ್ಲಿ ಮೀರತ್ ಮಾರ್ವಿಕ್ಸ್ ತಂಡದ ನಾಯಕರಾಗಿರುವ ರಿಂಕು ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ಜೊತೆಗೆ ಬ್ಯಾಟಿಂಗ್ ಮಾಡುವ ತಮ್ಮ ವಿಶೇಷ ಕನಸಿನ ಬಗ್ಗೆ ಮಾತನಾಡಿದ್ದಾರೆ.
"ಇಬ್ಬರು ಒಟ್ಟಿಗೆ ಸರಣಿ ಆಡಿದ್ದೇವೆ, ಆದರೆ ವಿರಾಟ್ ಭಯ್ಯಾ ಅವರೊಂದಿಗೆ ಎಂದಿಗೂ ಬ್ಯಾಟಿಂಗ್ ಮಾಡಿಲ್ಲ. ಎಲ್ಲರೂ ವಿರಾಟ್ ಮತ್ತು ರೋಹಿತ್ ಭಯ್ಯಾ ಅವರೊಂದಿಗೆ ತಂಡದಲ್ಲಿ ಆಡುವ ಕನಸು ಕಾಣುತ್ತಾರೆ" ಎಂದು ರಿಂಕು ಹೇಳಿದ್ದಾರೆ.
ಇದರ ಬೆನ್ನಲ್ಲೇ ಆರ್‌ಸಿಬಿ ಅಭಿಮಾನಿಗಳಿಂದ ರಿಂಕು ಸಿಂಗ್ ಅವರನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ಬಿಡ್ ಮಾಡಬೇಕು ಎಂಬ ಕೂಗುಗಳು ಬರುತ್ತಿವೆ. ಇದಲ್ಲದೆ, ಕೊಹ್ಲಿಯೊಂದಿಗಿನ ರಿಂಕು ಸಿಂಗ್ ಫೋಟೋಗಳು ಕೂಡ ವೈರಲ್ ಆಗುತ್ತಿವೆ.
ಆರ್‌ಸಿಬಿ ಸೇರ್ತಾರಾ ರಿಂಕು?
2018ರಲ್ಲಿ ಕೆಕೆಆರ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ರಿಂಕು ಇದುವರೆಗೆ 46 ಪಂದ್ಯಗಳನ್ನು ಆಡಿದ್ದಾರೆ. ಅವರು 30.8 ಸರಾಸರಿ ಮತ್ತು 143.3 ಸ್ಟ್ರೈಕ್ ರೇಟ್‌ನಲ್ಲಿ 893 ರನ್ ಗಳಿಸಿದ್ದಾರೆ. ಇದೀಗ ಮುಂದಿನ ವರ್ಷದ 2025ರ ಐಪಿಎಲ್‌ಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಅದಕ್ಕಾಗಿ ಎಲ್ಲ ತಂಡಗಳು ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಬೇಕಿದೆ.
ಇಂತಹ ಪರಿಸ್ಥಿತಿಯಲ್ಲಿ ಕೆಕೆಆರ್ ರಿಂಕು ಉಳಿಸಿಕೊಳ್ಳವದೇ? ಅಥವಾ ಬಿಡುಗಡೆ ಮಾಡುವುದೇ? ಎಂಬುದು ಕೂತುಹಲ ಹೆಚ್ಚಿಸಿದೆ. ಒಂದು ವೇಳೆ ಅವರು ಆರ್‌ಸಿಬಿ ಸೇರಿದರೆ ಫಿನಿಶರ್ ಸ್ಥಾನವನ್ನು ತುಂಬಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications