Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇದು ನನಗೆ ಭಾವನಾತ್ಮಕ ಕ್ಷಣ: ಟೀಮ್ ಇಂಡಿಯಾಗೆ ಆಯ್ಕೆಯಾದ ಬಗ್ಗೆ ರಿಂಕು ಸಿಂಗ್ ಮಾತು

ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಪರವಾಗಿ ಬಹುತೇಕ ಯುವ ಆಟಗಾರರು ಕಣಕ್ಕಿಳಿಯುತ್ತಿದ್ದಾರೆ. ಏಷ್ಯಾಕಪ್ ಹಾಗೂ ವಿಶ್ವಕಪ್ ದೃಷ್ಟಿಯಿಂದ ಟೀಮ್ ಇಂಡಿಯಾದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು ಜಸ್ಪ್ರೀತ್ ಬೂಮ್ರಾ ನೇತೃತ್ವದಲ್ಲಿ ಯುವ ಆಟಗಾರರ ಬಳಗ ತನ್ನ ಸಾಮರ್ಥ್ಯ ತೋರಿಸಲು ಸಜ್ಜಾಗಿದೆ. ಈ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಆಟಗಾರ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಸೆನ್ಸೇಶನ್ ಮೂಡಿಸಿದ್ದ ರಿಂಕು ಸಿಂಗ್.

ರಿಂಕು ಸಿಂಗ್ ಸಾಕಷ್ಟು ನಿರೀಕ್ಷೆಯ ಬಳಿಕ ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ. ಈ ಅವಕಾಶದ ಬಗ್ಗೆ ರಿಂಕು ಸಿಂಗ್ ಮಾತನಾಡಿದ್ದು ಟೀಮ್ ಇಂಡಿಯಾದ ಜರ್ಸಿಯಲ್ಲಿ ತನ್ನ ಹೆಸರು ನೋಡುತ್ತಿರುವುದು ನನಗೆ ಅತ್ಯಂತ ಭಾವುಕವಾದ ಸಂದರ್ಭ ಎಂದಿದ್ದಾರೆ.

Rinku Singh reaction on his India selection for t20 series against Ireland

ಗುರುವಾರದಂದು ಬಿಸಿಸಿಐ ತನ್ನ ವೆಬ್‌ಸೈಟ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಜಿತೇಶ್ ಶರ್ಮಾ ರಿಂಕು ಸಿಂಗ್ ಅವರನ್ನು ಸಂದರ್ಶನ ಮಾಡಿದ್ದಾರೆ. ಇದರಲ್ಲಿ ರಿಂಕು ಸಿಂಗ್ ತನ್ನ ಭಾವನೆ ವ್ಯಕ್ತಪಡಿಸಿದ್ದಾರೆ. ಈ ಸರಣಿಯಲ್ಲಿ ತನ್ನ ಕನಸು ನನಸಾಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ ರಿಂಕು ಸಿಂಗ್.

"ಪ್ರತಿಯೊಬ್ಬ ಕ್ರಿಕೆಟಿಗನ ಕನಸು ಕೂಡ ಭಾರತ ತಂಡದ ಪರವಾಗಿ ಆಡುವುದು. ನಾನು ನನ್ನ ರೂಮ್‌ಗೆ ತೆರಳಿದಾಗ ನನ್ನ ಜರ್ಸಿ ಸಂಖ್ಯೆ 35ನ್ನು ನೋಡಿದಾಗ ನಾನು ಭಾವುಕನಾದೆ. ನಾನು ಯಾವುದಕ್ಕಾಗಿ ಕಠಿಣ ಪರಿಶ್ರಮ ಪಟ್ಟಿದ್ದೇನೆಯೋ ಅದು ನೆರವೇರಿದೆ" ಎಂದು ಈ ವಿಡಿಯೋದಲ್ಲಿ ರಿಂಕು ಸಿಂಗ್ ಹೇಳಿಕೊಂಡಿದ್ದಾರೆ. ಅಲ್ಲದೆ ರಿಂಕು ಸಿಂಗ್ ಈ ಸಂದರ್ಭದಲ್ಲಿ ತನ್ನ ಪಾಲಿಗೆ ಶಕ್ತಿಯಾಗಿ ಆಧಾರವಾಗಿ ನಿಂತುಕೊಂಡಿದ್ದಕ್ಕಾಗಿ ತಾಯಿಯನ್ನು ಸ್ಮರಿಸಿಕೊಂಡಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ತಾಯಿಯೇ ಯಾವಾಗಲೂ ಸ್ಪೂರ್ತಿ ತುಂಬುತ್ತಿದ್ದರು ಎಂಬುದಾಗಿಯೂ ಅವರು ಹೇಳಿಕೊಂಡಿದ್ದಾರೆ.

"ಈ ಸರಣಿಗೆ ತಂಡವನ್ನು ಪ್ರಕಟಿಸಿದಾಗ ನಾನು ನನ್ನ ಸ್ನೇಗಿತರ ಜೊತೆಗೆ ನೋಯ್ಡಾದಲ್ಲಿ ಅಭ್ಯಾಸ ನಡೆಸುತ್ತಿದ್ದೆ. ತಂಡ ಪ್ರಕಟಿಸಿದಾಗ ನಾನು ಬಹಳ ಸಂತೋಷಪಟ್ಟಿದ್ದು ತಾಯಿಗೆ ಕರೆಮಾಡಿ ತಿಳಿಸಿದೆ. ಭಾರತ ತಂಡಕ್ಕಾಗಿ ಆಡಲು ಅವರು ನನ್ನನ್ನು ಯಾವಾಗಲೂ ಪ್ರೇರೇಪಿಸುತ್ತಿದ್ದರು" ಎಂದು ರಿಂಕು ಸಿಂಗ್ ಹೇಳಿಕೆ ನೀಡಿದ್ದಾರೆ.

ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಮಾರ್ಕ್ ಅಡೇರ್, ರಾಸ್ ಅಡೇರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್ಕಾಮ್, ಬೆನ್ ವೈಟ್, ಕ್ರೇಗ್ ಯಂಗ್
ಭಾರತ ತಂಡ: ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.

Story first published: Thursday, August 17, 2023, 21:16 [IST]
Other articles published on Aug 17, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+