Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮನೆಯಿಂದ ಹೊರಡುವಾಗ ಭಾವುಕರಾದ ರಿಂಕು ಸಿಂಗ್‌

ಟೀಮ್ ಇಂಡಿಯಾ ಭಾನುವಾರ ಮಾರ್ಚ್‌ 1 ರಂದು ಕೋಲ್ಕತ್ತಾ ಈಡನ್ ಗಾರ್ಡನ್‌ನಲ್ಲಿ ಮಹತ್ವದ ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಭರ್ಜರಿ ತಯಾರಿ ನಡೆಸಿದೆ. ಜಿಂಬಾಬ್ವೆ ವಿರುದ್ಧದ ತಂಡದ ದಾಖಲಿಸಿರುವ ಗೆಲುವು ತಂಡ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಜಿಂಬಾಬ್ವೆ ಪಂದ್ಯದ ವೇಳೆ ಕ್ಯಾಂಪ್‌ ಬಿಟ್ಟು ತವರಿನತ್ತ ಮುಖ ಮಾಡಿದ್ದ ರಿಂಕು ಸಿಂಗ್, ಈಗ ಟೀಮ್ ಇಂಡಿಯಾ ಸೇರಿಕೊಳ್ಳಲು ರಿಂಕು ಸಿಂಗ್ ಮನೆಯಿಂದ ಹೊರಟಿದ್ದಾರೆ.

ಸೂಪರ್ 8 ಹಂತದ ಎರಡನೇ ಪಂದ್ಯ ಚೆನ್ನೈನಲ್ಲಿ ಜಿಂಬಾಬ್ವೆ ವಿರುದ್ಧ ಆಡುತ್ತಿದ್ದಾಗ ರಿಂಕು ಸಿಂಗ್ ಅವರ ತಂದೆ ಖಾಂಚಂದ್ ಸಿಂಗ್ ದೀರ್ಘಕಾಲದ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ರಿಂಕು ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅಲಿಗಢದಲ್ಲಿರುವ ತಮ್ಮ ಮನೆಗೆ ಮರಳಿದರು. ಟಿ20 ವಿಶ್ವಕಪ್‌ ತಂಡ ಸೇರಿಕೊಳ್ಳಲು ಮನೆಯಿಂದ ರಿಂಕು ಸಿಂಗ್‌ ಮನೆಯಿಂದ ಹೊರಟಾಗ ಭಾವುಕರಾದರು.

Rinku Singh

ರಿಂಕು ಸಿಂಗ್ ಅವರ ತಂದೆ ನಾಲ್ಕನೇ ಹಂತದ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ರಿಂಕು ಅವರ ಅಣ್ಣ ಸೋನು ಶನಿವಾರ ಬೆಳಿಗ್ಗೆ ತನ್ನ ತಂದೆಯ ಚಿತಾಭಸ್ಮವನ್ನು ಗಂಗಾನದಿಯಲ್ಲಿ ವಿಸರ್ಜಿಸಿದರು. ಬಳಿಕವೇ ರಿಂಕು ತಂಡ ಸೇರುವತ್ತ ಪ್ರಯಾಣ ಬೆಳೆಸಿದರು.

ಭಾವುಕರಾದ ರಿಂಕು

ಶನಿವಾರ ರಿಂಕು ಸಿಂಗ್‌ ತಮ್ಮ ಮನೆಯಿಂದ ಹೊರಡುವಾಗ ತುಂಬ ಭಾವುಕರಾದಂತೆ ಕಂಡು ಬಂದಿತು. ತಂಡ ಸೇರುಲು ಪ್ರಯಾಣ ಬೆಳಸುವುದಕ್ಕೆ ಮೊದಲು ತಮ್ಮ ಸಂಬಂಧಿಕರಲ್ಲಿ ಮನವಿಯನ್ನು ಮಾಡಿದ್ದಾರೆ. ಕುಟುಂಬಸ್ಥರು ಹಾಗೂ ಸಂಬಂಧಿಕರಲ್ಲಿ ತಮ್ಮ ತಾಯಿಯನ್ನು ನೋಡಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ಅವರು ಭಾವುಕರಾದರು. ರಿಂಕು ಅವರನ್ನು ಬಿಳ್ಕೊಡುವಾಗ ಕುಟುಂಬಸ್ಥರ ಕಣ್ಣು ಒದ್ದೆಯಾಗಿದ್ದವು. ಅಲ್ಲದೆ ರಿಂಕು ತಂದೆಯ ಮುಂದಿನ ಎಲ್ಲ ಕಾರ್ಯಗಳಿಗೆ ತಾನು ಬರುವುದಾಗಿ ಭರವಸೆ ನೀಡಿ ತಂಡ ಸೇರಿಕೊಳ್ಳಲು ಪ್ರಯಾಣ ಬೆಳೆಸಿದರು.

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸುದ್ದಿ ಸಂಸ್ಥೆ ರಿಂಕು ಸಿಂಗ್‌ ಬಗ್ಗೆ ಈ ಮೊದಲೇ ಪಿಟಿಐಗೆ ಮಾಹಿತಿ ನೀಡಿದ್ದರು. ರಿಂಕು ಶನಿವಾರ ತಂಡವನ್ನು ಸೇರುತ್ತಾರೆ ಎಂದು ತಿಳಿಸಿದ್ದರು.

ವಿಂಡೀಸ್‌ ವಿರುದ್ಧ ಮಹತ್ವದ ಪಂದ್ಯ

ಟೀಮ್ ಇಂಡಿಯಾ ಸೂಪರ್ 8 ಹಂತದ ಮಹತ್ವದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ ಹೋರಾಟ ನಡೆಸಲಿದೆ. ಈ ಬಿಗ್ ಫೈಟ್‌ಗೆ ಕೋಲ್ಕತ್ತಾದ ಈಡನ್ ಗಾರ್ಡನ್‌ ಅಂಗಳ ಸಾಕ್ಷಿಯಾಗಲಿದೆ. ಉಭಯ ತಂಡಗಳಿಗೆ ಸೆಮಿಫೈನಲ್ ಪ್ರವೇಶಿಸಲು ಈ ಪಂದ್ಯದಲ್ಲಿ ಗೆಲುವುದು ಅನಿವಾರ್ಯವಾಗಿದೆ. ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೋ ಆ ತಂಡ ಸುಲಭವಾಗಿ ಉಪಾಂತ್ಯವನ್ನು ಪ್ರವೇಶಿಸಲಿದೆ.

Story first published: Saturday, February 28, 2026, 23:48 [IST]
Other articles published on Feb 28, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+