For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್‌ಗೂ ಮುನ್ನ ರಿಂಕು ಸಿಂಗ್‌ ಸ್ಫೋಟಕ ಬ್ಯಾಟಿಂಗ್: ಎದುರಾಳಿಗೆ ಶುರುವಾಯ್ತು ನಡುಕ

ಇನ್ನೇನು ಕೆಲವೇ ದಿನಗಳಲ್ಲಿ ಯುಎಇನಲ್ಲಿ ಏಷ್ಯಾ ಕಪ್ ಟಿ20 ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಗೆ ಭಾರತ ಭರ್ಜರಿ ಸಿದ್ಧತೆ ನಡೆಸಿದೆ. ಈ ಬಿಗ್‌ ಈವೆಂಟ್‌ನಲ್ಲಿ ಯಾರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗುತ್ತದೆ ಎಂಬುದರ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಈ ಬೆನ್ನಲ್ಲೆ ಟೀಮ್ ಇಂಡಿಯಾ ಸ್ಟಾರ್‌ ಫಿನಿಷರ್ ಒಬ್ಬ ದೇಶೀಯ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ತಂಡದಲ್ಲಿ ತಮ್ಮನ್ನು ಪರಿಗಣಿಸಿ ಎಂಬಂತೆ ಬ್ಯಾಟ್ ಮಾಡಿದ್ದಾನೆ.

ಸದ್ಯ ಭಾರತದ ಆಯಾ ರಾಜ್ಯಗಳಲ್ಲಿ ಟಿ20 ಲೀಗ್ ನಡೆಯುತ್ತಿದೆ. ಹಾಗೆಯೇ ಯುಪಿಯಲ್ಲೂ ಯುಪಿಟಿ20 ಲೀಗ್ ನಡೆಯುತ್ತಿದೆ. ಈ ಲೀಗ್‌ನಲ್ಲಿ ಸ್ಟಾರ್ ಮಧ್ಯಮ ಕ್ರಮಾಂಕದ ಆಟಗಾರ ರಿಂಕು ಸಿಂಗ್‌ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾರೆ. ಇವರು ಮೀರತ್ ಮಾವೆರಿಕ್ಸ್ ತಂಡದ ಪರ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದರು. ಇವರ ಏಕಾಂಗಿ ಆಟದ ನೆರವಿನಿಂದ ಮೀರತ್ ತಂಡ ಭರ್ಜರಿ ಜಯ ದಾಖಲಿಸಿತು.

Rinku Singh s 108 in UP T20 League strengthens his case for Asia Cup squad

ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಗೋರ್ಕಪುರ್ ಲಯನ್ಸ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 167 ರನ್‌ ಸೇರಿಸಿತು. ತಂಡದ ಪರ ನಾಯಕ ಧ್ರುವ್ ಜುರೇಲ್‌ (38), ಆಕಾಶ್‌ ದೀಪ್ ನಾತ್ (23), ನಿಶಾಂತ್ ಕುಶ್ವಾ (37), ಶಿವಂ ಶರ್ಮಾ (ಅಜೇಯ 25) ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು.

ರಿಂಕು ಸಿಂಗ್ ಶತಕ

ಈ ಮೊತ್ತವನ್ನು ಹಿಂಬಾಲಿಸಿದ ಮೀರತ್ ತಂಡದ ಆರಂಭ ಕಳಪೆಯಾಗಿತ್ತು. ಈ ವೇಳೆ ತಂಡ 38 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ರಿಂಕು ಸಿಂಗ್ ಹಾಗೂ ಯುವರಾಜ್ ಸಿಂಗ್ ಐದನೇ ವಿಕೆಟ್‌ಗೆ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೊಡಿಯನ್ನು ಕಟ್ಟಿಹಾಕುವಲ್ಲಿ ಎದುರಾಳಿ ಬೌಲರ್‌ಗಳು ವಿಫಲರಾದರು. ರಿಂಕು ಸಿಂಗ್‌ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇವರು 225ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಕಲೆ ಹಾಕಿ ತಂಡಕ್ಕೆ ಜಯದ ಮಾಲೆ ತೊಡಿಸಿದರು. ಇವರು ಕೇವಲ 48 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್ ಸಹಾಯದಿಂದ ಅಜೇಯ 108 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಇನ್ನು ಯುವರಾಜ್ ಸಿಂಗ್ ಅಜೇಯ 22 ರನ್ ಬಾರಿಸಿದರು.

Rinku Singh s 108 in UP T20 League strengthens his case for Asia Cup squad

2025 ರ ಏಷ್ಯಾ ಕಪ್ ಗೂ ಮುನ್ನ ರಿಂಕು ಸಿಂಗ್ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದಾರೆ. ಅಲ್ಲದೆ ತಮ್ಮನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಿಕೊಳ್ಳುವಂತೆ ತಮ್ಮ ಬ್ಯಾಟಿಂಗ್ ಮೂಲಕ ಒತ್ತಾಯಿಸಿದ್ದಾರೆ. ರಿಂಕು ಭಾರತದ ಪರ 33 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 546 ರನ್‌ಗಳನ್ನು ಗಳಿಸಿದ್ದಾರೆ, ಇದರಲ್ಲಿ ಮೂರು ಅರ್ಧಶತಕ ಸೇರಿವೆ. ಈ ಮೂಲಕ ಏಷ್ಯಾಕಪ್‌ನಲ್ಲಿ ಭಾಗವಹಿಸುವ ಎದುರಾಳಿ ತಂಡಗಳಿಗೆ ನಡುಕ ಶುರುವಾಗಿದೆ.

Story first published: Friday, August 22, 2025, 10:22 [IST]
Other articles published on Aug 22, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+