ರಿಂಕು ಸಿಂಗ್ ಕಮಾಲ್-ಕೆಕೆಆರ್‌ಗೆ ಸೂಪರ್ ಗೆಲುವು
ಲಕ್ನೋ: ಕೊನೆಯ ಓವರ್ ವರೆಗೂ ಕುತುಹಲ ಮೂಡಿಸಿದ್ದ ಕೋಲ್ಕತ್ತಾ ನೈಡರ್ ರೈಡರ್ಸ್ (ಕೆಕೆಆರ್) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡ ಕುತೂಹಲ ಮೂಡಿಸಿತ್ತು. ಉಭಯ ತಂಡಗಳು ನಿಗದಿತ ಓವರ್‌ಗಳಲ್ಲಿ 155 ರನ್ ಸೇರಿಸಿದವು. ಹೀಗಾಗಿ ಪಂದ್ಯದ ಫಲಿತಾಂಶವನ್ನು ತಿಳಿಯಲು ಸೂಪರ್ ಓವರ್ ಮೊರೆ ಹೋಗಲಾಯಿತು.
ಕೆಕೆಆರ್ ಪರ ಸುನಿಲ್ ನರೈನ್ ಸೂಪರ್ ಓವರ್ ಬೌಲ್ ಮಾಡಲು ಮುಂದಾದರು. ಎಲ್‌ಎಸ್‌ಜಿ ಪರ ಬ್ಯಾಟಿಂಗ್ ಮಾಡಲು ನಿಕೋಲಸ್ ಪೂರನ್ ಹಾಗೂ ಏಡನ್ ಮಾರ್ಕ್ರಾಮ್ ಇನಿಂಗ್ಸ್ ಆಡಲು ಮುಂದಾದರು. ನಿಕೋಲಸ್ ಅವರಿಗೆ ಸುನಿಲ್ ನರೈನ್ ಮೊದಲ ಎಸೆತದಲ್ಲಿ ಖೆಡ್ಡಾ ತೋಡಿದರು. ಇನ್ನು ಓವರ್‌ನ ಮೂರನೇ ಎಸೆತದಲ್ಲಿ ಮಾರ್ಕ್ರಾಮ್ ಸಹ ನರೈನ್‌ಗೆ ವಿಕೆಟ್ ಒಪ್ಪಿಸಿದರು. ಸೂಪರ್ ಓವರ್ ಗೆಲ್ಲಲು ಕೆಕೆಆರ್ 2 ರನ್ ಗುರಿ ನೀಡಲಾಯಿತು. ಕೆಕೆಆರ್ ಪರ ರಿಂಕು ಸಿಂಗ್ ತಾವು ಎದುರಿಸಿ ಮೊದಲ ಎಸೆತವನ್ನು ಬೌಂಡರಿ ಬಾರಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡದ ಆರಂಭ ಕಳಪೆಯಾಗಿತ್ತು. ಕೋಲ್ಕತ್ತ ತಂಡ ಪವರ್ ಪ್ಲೇನಲ್ಲಿ ಭರವಸೆಯ ಟಿಮ್ ಸಿಫರ್ಟ್ (0), ಅಜಿಂಕ್ಯ ರಹಾನೆ (10), ಅಂಗ್‌ಕ್ರಿಷ್ ರಘುವಂಶಿ (9) ರನ್ ಕಲೆ ಹಾಕುವಲ್ಲಿ ವಿಫಲರಾದರು. ತಂಡದ ಮೊತ್ತ 27 ಆಗಿದ್ದಾಗ ಈ ಸ್ಟಾರ್ ಆಟಗಾರರು ಪೆವಿಲಿಯನ್ ಸೇರಿದ್ದರು. ರೋವ್‌ಮನ್ ಪೊವೆಲ್ (1) ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು.
ರಿಂಕು ಅಬ್ಬರ
5ನೇ ವಿಕೆಟ್‌ಗೆ ರಿಂಕು ಸಿಂಗ್ ಹಾಗೂ ಕ್ಯಾಮರೂನ್ ಗ್ರೀನ್ 28 ಎಸೆತಗಳಲ್ಲಿ 42 ರನ್ ಸೇರಿಸಿತು. ಈ ಹಂತದಲ್ಲಿ ಮೂರು ಸಿಕ್ಸರ್ ಸಹಾಯದಿಂದ 34 ರನ್ ಸಿಡಿಸಿ ಮೊಹ್ಸಿನ್ ಖಾನ್ ಅವರಿಗೆ ವಿಕೆಟ್ ಒಪ್ಪಿಸಿದರು. ಕೆಕೆಆರ್ ತಂಡದ ಪರ ಉಳಿದ ಬ್ಯಾಟರ್‌ಗಳು ಬಂದು ಹೋಗುವ ಸಂಪ್ರದಾಯ ಮುಗಿಸಿದರು. ಸ್ಟಾರ್ ಬ್ಯಾಟರ್ ರಿಂಕು ಸಿಂಗ್ 51 ಎಸೆತಗಳಲ್ಲಿ 7 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 83 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಕೆಕೆಆರ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 155 ರನ್ ಸೇರಿಸಿತು.

ಗುರಿಯನ್ನು ಬೆನ್ನಟ್ಟಿದ ಮಿಚೆಲ್ ಮಾರ್ಚ್ (2) ರನ್ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಏಡನ್ ಮಾರ್ಕ್ರಾಮ್ ಹಾಗೂ ರಿಷಭ್ ಪಂತ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 55 ಎಸೆತಗಳಲ್ಲಿ 57 ರನ್ ಸೇರಿಸಿತು. ಈ ಹಂತದಲ್ಲಿ ಮಾರ್ಕ್ರಾಮ್ 27 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 31 ರನ್ ಸಿಡಿಸಿ ಕ್ಯಾಮರೂನ್ ಗ್ರೀನ್‌ಗೆ ವಿಕೆಟ್ ಒಪ್ಪಿಸಿದರು.
ಕೊನೆಯ ಎಸೆತದಲ್ಲಿ ಶಮಿ ಸಿಕ್ಸರ್
ನಾಯಕ ರಿಷಭ್ ಪಂತ್ ಸಹ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದರು. ಈ ಹಂತದಲ್ಲಿ ರಿಷಭ್ ಪಂತ್ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ 42 ರನ್ ಬಾರಿಸಿ ಸುನಿಲ್ ನರೈನ್‌ಗೆ ವಿಕೆಟ್ ಒಪ್ಪಿಸಿದರು. ಎಲ್‌ಎಸ್‌ಜಿ ತಂಡದ ಪರ ಮಧ್ಯಮ ಕ್ರಮಾಂಕದ ಆಟಗಾರ ಹಿಮ್ಮತ್ ಸಿಂಗ್ 19 ರನ್ ಸಿಡಿಸಿದರು. ಅಂತಿಮವಾಗಿ ಎಲ್‌ಎಸ್‌ಜಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 155 ರನ್ ಸೇರಿಸಿತು. ಕೊನೆಯ ಓವರ್‌ನಲ್ಲಿ ಕಮಾಲ್ ಬ್ಯಾಟಿಂಗ್ ನಡೆಸಿದರು. ಕೊನೆಯ ಎಸೆತದಲ್ಲಿ ಎಲ್‌ಎಸ್‌ಜಿ ಗೆಲುವಿಗೆ 7 ರನ್ ಅವಶ್ಯಕತೆ ಇತ್ತು. ಆಗ ಶಮಿ ಬಿಗ್ ಹಿಟ್ ಬಾರಿಸಿ ಸ್ಕೋರ್ ಸಮನಾಗಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications