For Quick Alerts
ALLOW NOTIFICATIONS  
For Daily Alerts
 

Rinku Singh: ಸಂಸದೆ ಜೊತೆ ಸಪ್ತಪದಿ ತುಳಿಯಲು ರಿಂಕು ರೆಡಿ

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ರಿಂಕು ಸಿಂಗ್‌ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರ ಬಿದ್ದಿದೆ. ರಿಂಕು ಸಿಂಗ್‌ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿದಿದೆ ಎಂದು ವರದಿಗಳ ಪ್ರಕಾರ ತಿಳಿದು ಬಂದಿದೆ. ಅಂದಹಾಗೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೈ ಹಿಡಿಯಲಿರುವ ಆ ಚೆಲುವೆ ಯಾರ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದ ಪರ ತನ್ನ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಹೆಸರು ವಾಸಿಯಾಗಿರುವ ರಿಂಕು ಸಿಂಗ್, ಮದುವೆ ಆಗಲಿದ್ದಾರೆ. ರಿಂಕು ಹಾಗೂ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದೆ ಜೊತೆ ಸಪ್ತ ಪದಿ ತುಳಿಯಲಿದ್ದಾರೆ ಎಂದು ತಿಳಿದು ಬಂದಿದ್ದು, ಶೀಘ್ರದಲ್ಲೇ ರಿಂಕು ಮದುವೆ ಆಗಲಿದ್ದಾರೆ. ರಿಂಕು ಮದುವೆಗೆ ಮುನ್ನ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಮುಗಿದಿದೆ.

Rinku Singh Set to Marry Priya Saroja Engagement Ceremony Completed

ಆ ಚೆಲುವೆ ಯಾರು?

ಅಂದಹಾಗೆ ಸ್ಫೋಟಕ ಬ್ಯಾಟರ್‌ ರಿಂಕು ಸಿಂಗ್‌ ಅವರ ಜೀವನದಲ್ಲಿ ನವ ಚೈತ್ಯವನ್ನು ತುಂಬಿದವರೇ ಪ್ರಿಯಾ ಸರೋಜಾ. ರಿಂಕು ಸಿಂಗ್ ಅವರೊಂದಿಗೆ ಪ್ರಿಯಾ ಸರೋಜಾ ಮದುವೆ ಆಗಲಿದ್ದಾರೆ. ಈ ಸುದ್ದಿ ಸದ್ಯ ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸ್ ವಾಗಿದೆ. ಪ್ರಿಯಾ ಸರೋಜಾ ಸಮಾಜವಾದಿ ಪಕ್ಷದ ಸಂಸದೆ ಆಗಿದ್ದಾರೆ. ಇವರಿಬ್ಬರು ಕೆಲವೇ ದಿನಗಳಲ್ಲಿ ಹಸಿ ಮಣೆ ಏರಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

26 ವರ್ಷದ ಪ್ರಿಯಾ ಸರೋಜಾ ಮಚಲಿ ಶಹರ್‌ ಲೋಕಸಭಾ ಕ್ಷೇತ್ರದ ಸಂಸದೆ. ಇವರು ವೃತ್ತಿಯಲ್ಲಿ ವಕೀಲೆ. ಚಿಕ್ಕ ವಯಸ್ಸಿನಲ್ಲೇ ಸಂಸತ್‌ ಪ್ರವೇಶಿಸಿದ ಹಿರಿಮೆ ಇವರಿಗೂ ಸಲ್ಲುತ್ತದೆ. ಇವರು ರಾಜಕೀಯ ಬದುಕನ್ನು ಆರಂಭಿಸುವ ಮುನ್ನ ಸುಪ್ರೀಂ ಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡುತ್ತಿದ್ದರು. ಇವರು ಮೊದಲ ಪ್ರಯತ್ನದಲ್ಲೇ ಬಿಜೆಪಿಯ ಧುರಿಣ ಬಿಪಿ ಸರೋಜ್‌ ಅವರನ್ನು ಸೋಲಿಸಿ ಸಂಸತ್‌ಗೆ ಪ್ರವೇಶ ಪಡೆದರು.

ಪ್ರಿಯಾ ಸರೋಜ್‌ ಅವರ ತಂದೆ ತೋಫಾನಿ ಸರೋಜ್‌ ಅವರು ಮಚಲಿ ಶಹರ್‌ದಿಂದ ಮೂರು ಬಾರಿ ಸಂಸದರಾಗಿದ್ದರು. ಈಗ ತಮ್ಮ ಕ್ಷೇತ್ರವನ್ನು ಇವರು ತಮ್ಮ ಮಗಳಿಗೆ ಬಿಟ್ಟುಕೊಟ್ಟಿದ್ದಾರೆ.

ರಿಂಕು ಸಿಂಗ್‌ ಅವರು ಇತ್ತೀಚಿಗೆ ಅಲಿ ಘರ್‌ನಲ್ಲಿ ದೊಡ್ಡ ಬಂಗಲೆಯನ್ನು ಖರೀದಿಸಿದ್ದಾರೆ. ಅವರು ಇದೇ ಮನೆಯಲ್ಲಿ ಮದುವೆಯ ಬಳಿಕ ನೆಲಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ರಿಂಕು ಸಿಂಗ್‌ ಮಿಡ್ಲ್ ಕ್ಲಾಸ್‌ನಿಂದ ಬಂದು ಇಂದು ಸಾಧನೆಯ ಮೆಟ್ಟಿಲ್ಲುಗಳನ್ನು ಏರಿ ಕುಳಿತಿದ್ದಾರೆ. ರಿಂಕು ಅವರು ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದಾರೆ.

Story first published: Friday, January 17, 2025, 18:14 [IST]
Other articles published on Jan 17, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+