ಬುಧವಾರ, ಜನವರಿ 17ರಂದು ಬೆಂಗಳೂರಿನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ರೋಚಕ ಸೂಪರ್ ಓವರ್‌ನಲ್ಲಿ ಅದ್ಭುತ ಗೆಲುವು ದಾಖಲಿಸಿತು.
ಮೊದಲ ಬ್ಯಾಟಿಂಗ್ ಮಾಡಿದ ಭಾರತ ತಂಡ, ಪವರ್ ಪ್ಲೇನಲ್ಲಿ 22 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆ ಬಳಿಕ ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ಇಬ್ಬರೂ ತಮ್ಮ ಕ್ರಿಕೆಟ್ ಬುದ್ಧಿವಂತಿಕೆಯನ್ನು ಬಳಸಿ 190 ರನ್‌ಗಳ ಜೊತೆಯಾಟ ನೀಡಿದರು ಮತ್ತು ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಇದೇ ವೇಳೆ ಅಫ್ಘಾನಿಸ್ತಾನ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ತಮ್ಮ ವೀರಾವೇಶದ ನಂತರ, ರಿಂಕು ಸಿಂಗ್ ಭಾರತ ತಂಡಕ್ಕಾಗಿ 2024ರ ಟಿ20 ವಿಶ್ವಕಪ್ ಪಂದ್ಯಾವಳಿಯುಲ್ಲಿ ಆರನೇ ಕ್ರಮಾಂಕದಲ್ಲಿ ಆಡಬೇಕು ಎಂದು ಮಾಜಿ ಕ್ರಿಕೆಟಿಗ ಕೃಷ್ಣಮಚಾರಿ ಶ್ರೀಕಾಂತ್ ಹೇಳಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ರಿಂಕು ಸಿಂಗ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಭಾರತ ತಂಡಕ್ಕೆ ಅಸಾಧಾರಣ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ತಮ್ಮ ಪರಾಕ್ರಮ ಪ್ರದರ್ಶಿಸಿದರು.

ಜನವರಿ 17ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಿಂಕು ಸಿಂಗ್ ಕೇವಲ 39 ಎಸೆತಗಳಲ್ಲಿ 69 ರನ್ ಗಳಿಸಿ ಅಜೇಯರಾಗುಳಿದರು. ಅಲ್ಲದೆ ಅನಿಶ್ಚಿತ ಸ್ಥಿತಿಯಿಂದ ಭಾರತ ತಂಡವನ್ನು ಚೇತರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಶತಕ ಬಾರಿಸಿದ ನಾಯಕ ರೋಹಿತ್ ಶರ್ಮಾ ಜೊತೆಗಿನ ಜೊತೆಯಾಟವು ಒಂದು ದಾಖಲೆ ನಿರ್ಮಿಸಿತು. ಮುರಿಯದ ಐದನೇ ವಿಕೆಟ್‌ಗೆ 190 ರನ್ ಗಳಿಸಿದರು ಮತ್ತು ಟಿ20 ಪಂದ್ಯಗಳಲ್ಲಿ ಭಾರತ ತಂಡಕ್ಕೆ ಹೊಸ ಮಾನದಂಡವನ್ನು ನೀಡಿದರು.
ಈ ಜೊತೆಯಾಟವು ಭಾರತದ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿತು. ಮಾತ್ರವಲ್ಲದೆ ತಂಡವನ್ನು 20 ಓವರ್‌ಗಳಲ್ಲಿ 4 ವಿಕೆಟ್‌ಗೆ 212 ರನ್‌ಗಳಿಗೆ ಮುನ್ನಡೆಸಿತು.
ಉತ್ತರಪ್ರದೇಶ ಬ್ಯಾಟರ್‌ನ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್‌ಗಳು ಒಳಗೊಂಡಿದ್ದವು. ಡಬಲ್ ಸೂಪರ್ ಓವರ್‌ನವರೆಗೆ ವಿಸ್ತರಿಸಿದ ರೋಚಕ ಪಂದ್ಯದ ನಂತರ, ಭಾರತ ಗೆಲುವು ದಾಖಲಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿತು. ಅಂತಿಮವಾಗಿ ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಸರಣಿ ವೈಟ್‌ವಾಶ್‌ಗೆ ಕಾರಣವಾಯಿತು.
ಇದರೊಂದಿಗೆ, ರಿಂಕು ಸಿಂಗ್ ಇದೀಗ ಭಾರತ ತಂಡಕ್ಕಾಗಿ 15 ಪಂದ್ಯಗಳನ್ನು ಆಡಿದ್ದು, 89ರ ಸರಾಸರಿ ಮತ್ತು 176.24ರ ಸ್ಟ್ರೈಕ್-ರೇಟ್ ಮತ್ತು ಎರಡು ಅರ್ಧಶತಕಗಳೊಂದಿಗೆ ತಮ್ಮ ಹೆಸರನ್ನು ಭಾರತದ ಬ್ಯಾಟಿಂಗ್ ಕ್ರಮಾಂಕದಲ್ಲಿ ಅದ್ಭುತವಾಗಿರಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಕೃಷ್ಣಮಚಾರಿ ಶ್ರೀಕಾಂತ್, ವಿಶೇಷವಾಗಿ ಡೆತ್ ಓವರ್‌ಗಳಲ್ಲಿ ಅವರ ಕೆಲಸವನ್ನು ಗಮನಿಸಿದರೆ, ರಿಂಕು ಸಿಂಗ್ ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ತಂಡದ ಆರಂಭಿಕ ಸಾಲಿನಲ್ಲಿರಬೇಕು ಎಂದಿದ್ದಾರೆ.
"ರಿಂಕು ಸಿಂಗ್ ಖಂಡಿತವಾಗಿಯೂ ಭಾರತ ತಂಡದ ಆಡುವ 11ರಲ್ಲಿರಬೇಕು. ಕೊನೆಯ ಓವರ್‌ಗಳಲ್ಲಿ ಅವರು ಎದುರಾಳಿ ಬೌಲರ್‌ಗಳನ್ನು ಹೊಡೆದುರುಳಿಸುತ್ತಾರೆ. ಅವರು ಮಾತ್ರ ಅದನ್ನು ಮಾಡಲು ಸಮರ್ಥರಾಗಿದ್ದಾರೆ. ಟಿ20ಐ ಪಂದ್ಯಗಳಲ್ಲಿ ಅವರು ಅಜೇಯರಾಗಿ ಉಳಿದಿರುವ ರೀತಿಯನ್ನು ನೋಡಿ. ರಿಂಕು ಸಿಂಗ್ ಖಂಡಿತವಾಗಿಯೂ ವಿಶ್ವಕಪ್‌ನಲ್ಲಿ 6ನೇ ಕ್ರಮಾಂಕದಲ್ಲಿ ಆಡಲಿದ್ದಾರೆ," ಎಂದರು.
ಭಾರತ ತಂಡದ ಮಾಜಿ ಆಯ್ಕೆಗಾರ ಕೆ ಶ್ರೀಕಾಂತ್, ರಿಂಕು ಸಿಂಗ್ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು ಮತ್ತು ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಆನಂದಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
"ರಿಂಕು ಸಿಂಗ್, ಎಂತಹ ಅದ್ಭುತ ಆಟಗಾರ! ಮಧ್ಯಮ ಕ್ರಮಾಂಕದಲ್ಲಿ ಅವನು ತನ್ನನ್ನು ತಾನು ಆನಂದಿಸುತ್ತಿದ್ದಾನೆ. ಅವನು ಅನಾಯಾಸವಾಗಿ ಸಿಕ್ಸರ್‌ಗಳನ್ನು ಹೊಡೆಯುತ್ತಾನೆ. ಅದ್ಭುತವಾದ ಪ್ರದರ್ಶನ," ಎಂದು ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಚಾರಿ ಶ್ರೀಕಾಂತ್ ತಿಳಿಸಿದರು.