Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rinku Singh: ಏಷ್ಯಾ ಕಪ್‌ ತಂಡಕ್ಕೆ ನನ್ನನ್ನು ಪರಿಗಣಿಸಿ: ರಿಂಕು ಸಿಂಗ್ ಬಿರುಸಿನ ಬ್ಯಾಟಿಂಗ್

ಏಷ್ಯಾ ಕಪ್‌ ಸೆಪ್ಟಂಬರ್‌ 9 ರಿಂದ ಯುಎಇನಲ್ಲಿ ನಡೆಯಲಿದೆ. ಈ ಟೂರ್ನಿಗೂ ಮುನ್ನ ಟೀಮ್ ಇಂಡಿಯಾದಲ್ಲಿ ಯಾರಿಗೆಲ್ಲಾ ಸ್ಥಾನ ಲಭಿಸಬಹುದು ಎಂಬ ಚರ್ಚೆಗಳು ಆರಂಭವಾಗಿವೆ. ಈ ವೇಳೆ ತಂಡದಲ್ಲಿ ಫಿನಿಷರ್ ಸ್ಥಾನಕ್ಕಾಗಿ ಮೂವರು ಆಟಗಾರರು ಕಣ್ಣು ನೆಟ್ಟಿದ್ದಾರೆ. ಈ ಮೂವರು ಆಟಗಾರರು ತಮ್ಮದೇ ಆಟದ ಶೈಲಿಯಿಂದ ಹೆಸರುವಾಸಿಯಾದ ಆಟಗಾರರು. ಈಗ ಈ ಸ್ಥಾನದ ಮೇಲೆ ತಮ್ಮನ್ನು ಪರಿಗಣಿಸಿ ಎಂದು ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಬ್ಯಾಟ್ ಮಾಡಿದ್ದಾರೆ.

ಸದ್ಯ ದೇಶದ ಹಲವು ರಾಜ್ಯಗಳಲ್ಲಿ ಟಿ20 ಲೀಗ್‌ಗಳು ಆರಂಭವಾಗಿವೆ. ಉತ್ತರ ಪ್ರದೇಶದಲ್ಲೂ ಟಿ20 ಲೀಗ್‌ಗಳು ನಡೆಯುತ್ತಿವೆ. ಈ ವೇಳೆ ಹಲವು ಸ್ಟಾರ್ ಆಟಗಾರರು ಮೈದಾನದಲ್ಲಿ ಅಬ್ಬರ ನಡೆಸುತ್ತಿದ್ದಾರೆ. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಫಿನಿಷರ್ ಖ್ಯಾತಿಯ ರಿಂಕು ಸಿಂಗ್‌ ಆರ್ಭಟಿಸಿದ್ದಾರೆ. ಲಕ್ನೋ ಫಾಲ್ಕನ್ಸ್ ಹಾಗೂ ಮೀರತ್ ಮಾವೆರಿಕ್ಸ್ ವಿರುದ್ಧ ಕಾದಾಟ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೀರತ್ ಮಾವೆರಿಕ್ಸ್ ಅಬ್ಬರಿಸಿತು. ಸ್ಟಾರ್ ಆಟಗಾರರು ಮೀರತ್ ಮಾವೆರಿಕ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 233 ರನ್‌ ಸಿಡಿಸಿದರು.

Rinku Singh s T20 League Dominance Puts Him in Asia Cup Contention

ಮೊದಲು ಬ್ಯಾಟ್ ಮಾಡಿದ ಮೀರತ್ ತಂಡದ ಪರ ಸ್ವಸ್ತಿಕ್ ಚಿಕಾರ್‌ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 55 ರನ್‌ ಸಿಡಿಸಿದರು. ಇನ್ನು ರಿತುರಾಜ್‌ ಶರ್ಮಾ ಸಹ 5 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 74 ರನ್‌ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸ್ಟಾರ್ ಬ್ಯಾಟರ್‌ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇವರ ಆಟಕ್ಕೆ ಎದುರಾಳಿ ಬೌಲರ್‌ಗಳು ಬೆಚ್ಚಿ ಬಿದ್ದರು.

ರಿಂಕು ಆರ್ಭಟ

ಮೀರತ್ ಮಾವೆರಿಕ್ಸ್ ತಂಡದ ಸ್ಕೋರ್ 10 ಓವರ್‌ಗಳಲ್ಲಿ 73 ರನ್ ಆಗಿತ್ತು ಮತ್ತು ಅವರು ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಸಮಯದಲ್ಲಿ, ರಿಂಕು ಸ್ಪಿನ್ನರ್‌ಗಳ ವಿರುದ್ಧ ಸ್ವಲ್ಪ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿ, ವೇಗದ ಬೌಲರ್‌ಗಳ ವಿರುದ್ಧ ಮೈಚಳಿ ಬಿಟ್ಟು ಬ್ಯಾಟ್ ಮಾಡಿ ರನ್ ಕಲೆ ಹಾಕಿದರು. ಪರಿಣಾಮ ತಂಡ ದೊಡ್ಡ ಮೊತ್ತ ಕಲೆ ಹಾಕಿತು.

Rinku Singh s T20 League Dominance Puts Him in Asia Cup Contention

ರಿಂಕು ಸಿಂಗ್‌ 211ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಕಲೆ ಹಾಕಿದರು. ಇವರು 27 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್‌ ಸಹಾಯದಿಂದ 57 ರನ್‌ ಬಾರಿಸಿ ಅಬ್ಬರಿಸಿದರು. ಈ ಮೂಲಕ ತಂಡಕ್ಕೆ ಆಧಾರವಾದರು. ರಿಂಕು ಸಿಡಿಲಬ್ಬರದ ಬ್ಯಾಟಿಂಗ್ ತಂಡ ಸವಾಲಿನ ಮೊತ್ತ ಕಲೆ ಹಾಕುವಲ್ಲಿ ಕಾರಣವಾಯಿತು. ಈ ಟೂರ್ನಿಯಲ್ಲಿ ರಿಂಕು ಅಮೋಘ ಫಾರ್ಮ್ ಪ್ರದರ್ಶಿಸಿದ್ದಾರೆ. ಆಡಿದ 7 ಪಂದ್ಯಗಳಲ್ಲಿ 1 ಶತಕ ಹಾಗೂ 1 ಅರ್ಧಶತಕದ ಬಲದಿಂದ 199 ರನ್‌ ಕಲೆ ಹಾಕಿದ್ದಾರೆ. ಈ ಪಂದ್ಯದಲ್ಲಿ ಲಕ್ನೋ ಫಾಲ್ಕನ್ಸ್ 18.2 ಓವರ್‌ಗಳಲ್ಲಿ 10 ವಿಕೆಟ್‌ಗೆ 140 ರನ್‌ ಕಲೆ ಹಾಕಿದೆ.

Story first published: Wednesday, August 27, 2025, 19:55 [IST]
Other articles published on Aug 27, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+