Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್ ಲಯನ್ಸ್ ವಿರುದ್ಧದ ಭಾರತ ಎ ತಂಡಕ್ಕೆ ರಹಾನೆ, ಪಂತ್

Rishabh Pant, Ajinkya Rahane to play for India A against England Lions

ಬೆಂಗಳೂರು, ಜನವರಿ 20: ಪ್ರವಾಸಿ ಇಂಗ್ಲೆಂಡ್ ಲಯನ್ಸ್ ತಂಡದ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಅಜಿಂಕ್ಯ ರಹಾನೆ ಹಾಗೂ ರಿಷಬ್ ಪಂತ್ ಅಡಲಿದ್ದಾರೆ.

ಏಕದಿನ ಸರಣಿಯ ಆರಂಭಿಕ 3 ಪಂದ್ಯಗಳಿಗೆ ಅಜಿಂಕ್ಯ ರಹಾನೆ ಭಾರತ ಎ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಜನವರಿ 23ರಿಂದ ಏಕದಿನ ಪಂದ್ಯಗಳು ತಿರುವನಂತಪುರಂನಲ್ಲಿ ನಡೆಯಲಿವೆ.

ಕೊನೆ ಎರಡು ಪಂದ್ಯಗಳಿಗೆ ಮಹಾರಾಷ್ಟ್ರದ ಅಂಕಿತ್ ಭಾವ್ನೆಗೆ ತಂಡದ ನೇತೃತ್ವ ವಹಿಸಲಾಗಿದೆ. ಜನವರಿ 29 ಹಾಗೂ 31ರಂದು ತಿರುವನಂತಪುರಂನಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ರಿಷಬ್ ಪಂತ್ ಆಡಲಿದ್ದಾರೆ.

ಫೆಬ್ರವರಿ 3ರಿಂದ ಪ್ರವಾಸಿ ತಂಡದ ವಿರುದ್ಧ ನಡೆಯಲಿರುವ 2 ದ್ವಿದಿನ ಅಭ್ಯಾಸ ಪಂದ್ಯದಲ್ಲಿ ಜಾರ್ಖಂಡ್​ನ ಇಶಾನ್ ಕಿಶನ್ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡ ಮುನ್ನಡೆಸಲಿದ್ದಾರೆ.

ಭಾರತ ಎ ತಂಡ (ಮೊದಲ 3 ಪಂದ್ಯಗಳಿಗೆ): ಅಜಿಂಕ್ಯ ರಹಾನೆ (ನಾಯಕ), ಅನ್ಮೋಲ್​ಪ್ರೀತ್, ರಿತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಅಂಕಿತ್ ಭಾವ್ನೆ, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ಅಕ್ಷರ್ ಪಟೇಲ್, ಮಾರ್ಕಂಡೆ, ಜಯಂತ್ ಯಾದವ್, ಸಿದ್ಧಾರ್ಥ್ ಕೌಲ್, ಶಾರ್ದೂಲ್, ದೀಪಕ್ ಚಹರ್, ನವದೀಪ್ ಸೈನಿ;

(4-5ನೇ ಪಂದ್ಯಕ್ಕೆ): ಅಂಕಿತ್ ಭಾವ್ನೆ (ನಾಯಕ), ರಿತುರಾಜ್, ಅನ್ಮೋಲ್​ಪ್ರೀತ್, ರಿಕಿ ಭುಯಿ, ಸಿದ್ಧೇಶ್ ಲಾಡ್, ಹಿಮಂತ್ ಸಿಂಗ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಷರ್, ರಾಹುಲ್ ಚಹರ್, ಜಯಂತ್, ನವದೀಪ್, ಆವೇಶ್ ಖಾನ್, ದೀಪಕ್ ಚಹರ್, ಶಾರ್ದೂಲ್.

ಮಂಡಳಿ ಅಧ್ಯಕ್ಷರ ಇಲೆವೆನ್ ತಂಡ: ಇಶಾನ್ ಕಿಶನ್ (ನಾಯಕ ಮತ್ತು ವಿಕೆಟ್ ಕೀಪರ್ ), ಅಕ್ಷತ್ ರೆಡ್ಡಿ, ಶೋರೆ, ರಿಕಿ ಭುಯಿ, ಸಿದ್ಧೇಶ್ ಲಾಡ್, ರಿಂಕು, ಪ್ರಿಯಾಮ್ ಸೌರಭ್, ರಾಹುಲ್ ಚಹರ್, ಜಯಂತ್, ಅನಿಕೇತ್ ಚೌಧರಿ, ಅಂಕಿತ್, ರಾಜೇಶ್ ಮೊಹಾಂತಿ.

Story first published: Sunday, January 20, 2019, 10:50 [IST]
Other articles published on Jan 20, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+