ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಈ ಇಬ್ಬರು ಖಚಿತವಾಗಿ ಇರುತ್ತಾರೆ; ಸೌರವ್ ಗಂಗೂಲಿ
ಸದ್ಯ ನಡೆಯುತ್ತಿರುವ ಶ್ರೀಮಂತ ಟಿ20 ಕ್ರಿಕೆಟ್ ಪಂದ್ಯಾವಳಿ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಗಿದ ಒಂದು ವಾರದೊಳಗೆ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದೆ.
ಐಸಿಸಿ ಟಿ20 ವಿಶ್ವಕಪ್‌ಗೆ ತಂಡವನ್ನು ಸಲ್ಲಿಸುವ ಮೇ 1ರ ಗಡುವು ಸಮೀಪಿಸುತ್ತಿದ್ದು, ಇದೇ ವೇಳೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಭಾರತ ತಂಡದ ಆಯ್ಕೆಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಸ್ಥಾನ ಕಾಯ್ದಿರಿಸಲಿದ್ದಾರೆ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ. ಏಕೆಂದರೆ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಆತನನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಿಸಬಹುದು ಎಂದು ಅಂದಾಜಿಸಿದ್ದಾರೆ.
ಅಕ್ಷರ್ ಪಟೇಲ್ ಎಲ್ಲಾ ಐಪಿಎಲ್ ಋತುವಿನಲ್ಲಿ 7.06ರ ಎಕಾನಮಿ ದರದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ ಮತ್ತು ಇತ್ತೀಚಿಗೆ ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದು ಬಂದು ಗುಜರಾತ್ ಟೈಟನ್ಸ್ ವಿರುದ್ಧ ತಮ್ಮ ಪರಾಕ್ರಮ ತೋರಿಸಿದರು.

"ಅಕ್ಷರ್ ಪಟೇಲ್ ಖಚಿತ. ಟಿ20 ವಿಶ್ವಕಪ್‌ನಲ್ಲಿ ನನಗೆ ರಿಷಭ್ ಪಂತ್ ಮತ್ತು ಅಕ್ಷರ್ ಪಟೇಲ್ ಇಬ್ಬರೂ ಖಚಿತ. ಟಿ20 ಕ್ರಿಕೆಟ್‌ನಲ್ಲಿ ವಿಷಯಗಳು ನಡೆಯುತ್ತಿರುವ ರೀತಿಯಲ್ಲಿ, ರೋಹಿತ್ ಶರ್ಮಾ ಯಾರಾದರೂ ನಂಬರ್ 8ರಲ್ಲಿ ಬಂದು ಬ್ಯಾಟಿಂಗ್ ಮಾಡಬೇಕೆಂದು ಬಯಸುತ್ತಾರೆ".
"ಬೌಲಿಂಗ್‌ನಲ್ಲಿ 15-20 ರನ್‌ಗಳನ್ನು ನೀಡಿ ಮತ್ತು ಸ್ಪಿನ್ನರ್ ವಿರುದ್ಧ ಆಡಲು ಯಾರಾದರೂ ಬೇಕಾದಲ್ಲಿ, ಅಕ್ಷರ್ ಪಟೇಲ್ ಅದನ್ನು ಮಾಡಬಹುದು. ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಜೋಡಿಯ ಅನುಕೂಲವೆಂದರೆ ಇಬ್ಬರೂ ತುಂಬಾ ಪ್ರತಿಭಾವಂತರು," ಎಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಮುನ್ನಾದಿನದಂದು ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಹೇಳಿದರು.

ತಮ್ಮ ಆಲ್‌ರೌಂಡರ್ ಮತ್ತು ಎಡಗೈ ಬ್ಯಾಟಿಂಗ್‌ನಿಂದಾಗಿ ಅಕ್ಷರ್ ಪಟೇಲ್‌ಗೆ ಬೆಂಬಲವಾಗಿರುವ ಸೌರವ್ ಗಂಗೂಲಿ, ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.
"ನೀವು ಬಾಲ್ ಹೊಡೆಯುವ ಸಾಮರ್ಥ್ಯ ಹೊಂದಿರಬೇಕು. ಟಿ20 ಕ್ರಿಕೆಟ್‌ನಲ್ಲಿ ನೀವು ತಂತ್ರಕ್ಕಾಗಿ ಸಮಯವನ್ನು ಹೊಂದಿರಬೇಕಾಗಿಲ್ಲ. ಆದರೆ ಮೂಲಭೂತ ಅಂಶಗಳು ಇರಬೇಕು ಮತ್ತು ಅಕ್ಷರ್ ಪಟೇಲ್ ಯಾವಾಗಲೂ ಅದನ್ನು ಹೊಂದಿದ್ದಾನೆ," ಎಂದು ಸೌರವ್ ಗಂಗೂಲಿ ತಿಳಿಸಿದರು.
"ಭಾರತ ತಂಡದ ಪರ ಟೆಸ್ಟ್‌ನಲ್ಲಿ ಅಕ್ಷರ್ ಪಟೇಲ್ ಬ್ಯಾಟಿಂಗ್ ನೀವು ನೋಡಿದಾಗ, ಅವರು ಪಿಚ್‌ಗಳನ್ನು ತಿರುಗಿಸುವ ಒತ್ತಡದಲ್ಲಿ ರನ್ ಗಳಿಸುತ್ತಾರೆ. ಅವನು ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾನೆ. ಆದರೆ ಟಿ20 ಪಂದ್ಯಗಳಲ್ಲಿ ನಿಮಗೆ ಬಾರಿಸುವ ಸಾಮರ್ಥ್ಯ ಬೇಕು ಮತ್ತು ಅಕ್ಷರ್ ಪಟೇಲ್‌ನನ್ನು ಮೇಲಿನ ಕ್ರಮಾಂಕದಲ್ಲಿ ಕಳಿಸಿದಾಗ ಅದನ್ನು ಮಾಡುತ್ತಾನೆ".
"ಬ್ಯಾಟ್, ಬೌಲ್, ಫೀಲ್ಡಿಂಗ್‌ನಲ್ಲಿ ಅವನೊಬ್ಬ ಪ್ರಚಂಡ ಕ್ರಿಕೆಟಿಗ. ಅಕ್ಷರ್ ಪಟೇಲ್ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಮತ್ತು ಟಿ20 ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಮಾಡಬಹುದು. ಆತ ತುಂಬಾ ಪ್ರತಿಭಾನ್ವಿತ ಕ್ರಿಕೆಟಿಗ," ಎಂದು ಸೌರವ್ ಗಂಗೂಲಿ ಹೇಳಿದರು.
ರಿಷಭ್ ಪಂತ್ ತಮ್ಮ ಭೀಕರ ಕಾರು ಅಪಘಾತದ ಸಮಯದಲ್ಲಿ ಉಂಟಾದ ಗಾಯಗಳಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ಮೂರು ಅರ್ಧಶತಕ ಗಳಿಸಿದ್ದು, ಗುಜರಾತ್ ಟೈಟನ್ಸ್ ವಿರುದ್ಧ ತಮ್ಮ ಆಟದ ಅತ್ಯುತ್ತಮ ಪ್ರದರ್ಶನ ನೀಡಿದರು.
ರಿಷಭ್ ಪಂತ್ ಅವರು ಭಾರತ ತಂಡದಲ್ಲಿ ವಿಕೆಟ್‌ಕೀಪರ್ ಸ್ಥಾನಕ್ಕಾಗಿ ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಮತ್ತು ದಿನೇಶ್ ಕಾರ್ತಿಕ್ ಅವರೊಂದಿಗೆ ಸ್ಪರ್ಧಿಸುತ್ತಿದ್ದಾರೆ. ಆದರೆ, 26 ವರ್ಷದ ರಿಷಭ್ ಪಂತ್ ಭಾರತ ತಂಡದಲ್ಲಿ ಖಚಿತವಾಗಿ ಸ್ಥಾನ ಪಡೆಯುವ ಭರವಸೆಯನ್ನು ಸೌರವ್ ಗಂಗೂಲಿ ಹೊಂದಿದ್ದಾರೆ.
"ನಾನು ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಇಷ್ಟಪಡುತ್ತೇನೆ. ರಿಷಭ್ ಟಿ20 ವಿಶ್ವಕಪ್‌ಗೆ ಹೋಗುತ್ತಾರೆ. ಸಂಜು ಕೂಡ ಹೋಗಬಹುದು, ಅವನು ಹೋಗಬಾರದು ಎಂದು ಹೇಳುತ್ತಿಲ್ಲ. ಅವರು ಎಲ್ಲರಂತೆ ಉತ್ತಮ ಆಟಗಾರ. ವಿಕೆಟ್ ಕೀಪರ್ ಆಗಿ, ಬ್ಯಾಟರ್ ಆಗಿ, ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿ ಅತ್ಯುತ್ತಮವಾಗಿದ್ದಾರೆ. ಆಯ್ಕೆಗಾರರು ಭಾವಿಸಿದರೆ ಇಬ್ಬರೂ ಆಯ್ಕೆಯಾಗಬಹುದು," ಎಂದು ಬಿಸಿಸಿಐ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications