For Quick Alerts
ALLOW NOTIFICATIONS  
For Daily Alerts
 

Gabba Test: ಗಬ್ಬಾದಲ್ಲಿ ದಾಖಲೆಯ ಮೇಲೆ ಸಿರಾಜ್‌, ರಿಷಭ್ ಪಂತ್‌ ಕಣ್ಣು

ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್‌ ಪಂದ್ಯ ಬ್ರಿಸ್ಬೇನ್‌ ಐತಿಹಾಸಿಕ ಅಂಗಳದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಭರ್ಜರಿ ಸಿದ್ಧತೆ ನಡೆಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಇಬ್ಬರೂ ಸ್ಟಾರ್‌ ಆಟಗಾರರು ದಾಖಲೆಯನ್ನು ನಿರ್ಮಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಇಬ್ಬರು ಸ್ಟಾರ್‌ಗಳು ಈಗಾಗಲೇ ಗಬ್ಬಾದಲ್ಲಿ ಅಬ್ಬರಿಸಿದ್ದಾರೆ. ಹಾಗಿದ್ದರೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಬರೆಯಲಿರುವ ದಾಖಲೆ ಇಲ್ಲಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್‌ ಗವಾಸ್ಕರ್‌ ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ ಐದು ಪಂದ್ಯಗಳನ್ನು ಆಡಲಾಗುತ್ತದೆ. ಈಗಾಗಲೇ ಉಭಯ ತಂಡಗಳು ಸರಣಿಯಲ್ಲಿ ತಲಾ ಒಂದೊಂದು ಪಂದ್ಯ ಗೆದ್ದಿದ್ದರಿಂದ ಕುತೂಹಲ ಮೂಡಿಸಿದೆ. ಮೂರನೇ ಪಂದ್ಯ ಗಬ್ಬಾದ ಅಂಗಳದಲ್ಲಿ ಡಿಸೆಂಬರ್‌ 14 ರಿಂದ ಆರಂಭವಾಗಲಿದೆ.

Rishabh Pant and Mohammed Siraj Aim for Records in Gabba Test Against Australia

ಗಬ್ಬಾದಲ್ಲಿ ರಿಷಭ್‌ ಘರ್ಜನೆ

ಗಬ್ಬಾ ಟೆಸ್ಟ್‌ ಎಂದರೆ ನೆನಪಾಗುವುದು 2021ರಲ್ಲಿ ರಿಷಭ್‌ ಪಂತ್ ಆಡಿದ ಆ ಒಂದು ಕ್ಲಾಸಿಕ್‌ ಇನಿಂಗ್ಸ್‌. ಅಂದು ಅವರಿಗೆ ಹೆಸರನ್ನು ತಂದುಕೊಟ್ಟ ಇನಿಂಗ್ಸ್‌ ಅದು. ನಿಜಕ್ಕೂ ರಿಷಭ್ ಆ ಪಂದ್ಯದಲ್ಲಿ ಶತಕ ಬಾರಿಸುವಲ್ಲಿ ವಿಫಲರಾಗಿರಬಹುದು. ಆದರೆ ಅವರ 89 ರನ್‌ಗಳ ಇನಿಂಗ್ಸ್‌ ಯಾವುದೇ ಶತಕಕ್ಕೂ ಕಮ್ಮಿ ಏನು ಇರಲಿಲ್ಲ. ಹೀಗಾಗಿ ಟೀಮ್ ಇಂಡಿಯಾ ಅಭಿಮಾನಿಗಳಿ ಗಬ್ಬಾ ಎಂದರೆ ರಿಷಭ್ ಪಂತ್‌ ನೆನನಪು ಆಗುತ್ತದೆ.

ದಾಖಲೆಯ ಮೇಲೆ ಕಣ್ಣು

ಈ ಅಂಗಳದಲ್ಲಿ ರಿಷಭ್‌ ಪಂತ್‌ ವಿಶೇಷ್ ದಾಖಲೆಯನ್ನು ಬರೆಯುವ ಕನಸಿನಲ್ಲಿದ್ದಾರೆ. ಇವರು ಈಗಾಗಲೇ ಈ ಅಂಗಳದಲ್ಲಿ 112 ರನ್‌ ಸಿಡಿಸಿದ್ದಾರೆ. ಒಂದು ವೇಳೆ ಮೂರನೇ ಟೆಸ್ಟ್‌ನಲ್ಲಿ ಇವರು 63 ರನ್‌ ಬಾರಿಸುವಲ್ಲಿ ಯಶಸ್ವಿಯಾದರೆ 27 ವರ್ಷದ ಆಟಗಾರ, ಭಾರತದ ಪರ ಈ ಮೈದಾನದಲ್ಲಿ ಗರಿಷ್ಠ ರನ್‌ ಬಾರಿಸಿ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ಮೈದಾನದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಕೀರ್ತಿ ಎಂಎಲ್‌ ಜಯ ಸಿಂಹ್‌ ಅವರದ್ದಾಗಿದೆ. ಇವರು ಈ ಅಂಗಳದಲ್ಲಿ 175 ರನ್‌ ಸಿಡಿಸಿದ್ದಾರೆ. ಈ ದಾಖಲೆಯ ಮೇಲೆ ರಿಷಭ್‌ ಕಣ್ಣು ನೆಟ್ಟಿದ್ದಾರೆ.

ಮೂರು ವಿಕೆಟ್‌ ಪಡೆದರೆ...

ರಿಷಭ್‌ ಪಂತ್‌ ಅವರು ಅಲ್ಲದೆ ಟೀಮ್ ಇಂಡಿಯಾದ ಇನ್ನೊಬ್ಬ ಸ್ಟಾರ್ ಆಟಗಾರ ಸಹ ದಾಖಲೆಯನ್ನು ನಿರ್ಮಿಸುವ ಕನಸಿನಲ್ಲಿದ್ದಾರೆ. ಮೂರನೇ ಟೆಸ್ಟ್‌ನಲ್ಲಿ ಸಿರಾಜ್‌ ಮೂರು ವಿಕೆಟ್‌ ಪಡೆಯುವಲ್ಲಿ ಸಫಲರಾದರೆ, ಮತ್ತೊಂದು ದಾಖಲೆ ಬರೆಯಲಿದ್ದಾರೆ. ಗಬ್ಬಾ ಮೈದಾನದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎಂಬ ಹೆಗ್ಗಳಿಕೆ ಇವರದ್ದಾಗಲಿದೆ. ಇವರ ಬುಟ್ಟಿಯಲ್ಲಿ ಈಗಾಗಲೇ ಆರು ವಿಕೆಟ್‌ಗಳಿವೆ. ಇವರು ಕರ್ನಾಟಕದ ಇ.ಎಸ್‌ ಪ್ರಸನ್ನ ಅವರ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಪ್ರಸನ್ನ ಈ ಅಂಗಳದಲ್ಲಿ 8 ವಿಕೆಟ್‌ ಪಡೆದಿದ್ದಾರೆ. ಟೀಮ್ ಇಂಡಿಯಾದ ಯಾವ ಪ್ಲೇಯರ್‌ ಮೊದಲಿಗೆ ದಾಖಲೆ ಬರೆಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Story first published: Wednesday, December 11, 2024, 14:15 [IST]
Other articles published on Dec 11, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+