ಫೆಬ್ರವರಿಯಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಈ ಟೂರ್ನಿಗೆ ಪಾಕ್ ಸಕಲ ಸಿದ್ಧತೆಯನ್ನು ಮಾಡಿಕೊಂಡಿವೆ. ಇನ್ನು ಈ ಟೂರ್ನಿಯಲ್ಲಿ ಭಾಗವಹಿಸುವ 8 ತಂಡಗಳಲ್ಲಿ 6 ದೇಶಗಳು ತಮ್ಮ ತಂಡವನ್ನು ಘೋಷಿಸಿವೆ. ಭಾರತ ಇನ್ನು ಈ ಸರಣಿಗೆ ತನ್ನ ತಂಡವನ್ನು ಘೋಷಿಸಿಲ್ಲ. ಹೀಗಾಗಿ ಭಾರತ ತಂಡದ ಸಂಯೋಜನೆ ಹೇಗರಿಲಿದೆ ಎಂಬ ಬಗ್ಗೆ ಚರ್ಚೆಗಳು ನಡೆದಿವೆ. ಈ ವೇಳೆ ಎಲ್ಲರ ಚಿತ್ತ ಕದ್ದಿರುವ ಸ್ಲಾಟ್ ವಿಕೆಟ್ ಕೀಪರ್ ಬ್ಯಾಟರ್‍ನದ್ದಾಗಿದೆ. ಹಾಗಿದ್ದರೆ ಟೀಮ್ ಇಂಡಿಯಾದಲ್ಲಿ ಈ ಸ್ಥಾನಕ್ಕಾಗಿ ಎಷ್ಟು ಜನರ ಪೈಪೋಟಿ ಇದೆ ಎಂಬ ಬಗ್ಗೆ ವರದಿ ಇಲ್ಲಿದೆ.
ಟೀಮ್ ಇಂಡಿಯಾ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಈ ವೇಳೆ ಹಲವು ಸ್ಟಾರ್ ಆಟಗಾರರ ಆಟವನ್ನು ಬಿಸಿಸಿಐ ಆಯ್ಕೆ ಸಮಿತಿ ಪರಿಗಣಿಸಲಿದೆ. ಟೀಮ್ ಇಂಡಿಯಾದಲ್ಲಿ ಯಾವ ವಿಕೆಟ್ ಕೀಪರ್ ಸ್ಥಾನ ಪಡೆಯುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ. ಈ ಒಂದು ಸ್ಲಾಟ್‌ಗೆ ಮೂವರು ಆಟಗಾರರು ಪೈಪೋಟಿ ನಡೆಸಲಿದ್ದಾರೆ.

ವಿಕೆಟ್ ಕೀಪರ್ ಸ್ಥಾನಕ್ಕೆ ಎದ್ದು ಕಾಣುವ ಮೊದಲ ಆಯ್ಕೆಯ ಆಟಗಾರ ಕನ್ನಡಿಗ ಕೆಎಲ್ ರಾಹುಲ್. ಇವರು ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರ ವಿಕೆಟ್ ಕೀಪರ್ ಆಗಿ ಆಡಿ ಸೈ ಎನಿಸಿಕೊಂಡಿದ್ದಾರೆ. ಹೀಗಾಗಿ ಯುಎಇನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಇವರು ಭಾರತ ತಂಡದ ಭಾಗವಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಆದರೆ ಈಗ ಎರಡನೇ ವಿಕೆಟ್ ಕೀಪರ್ ಗಾಗಿ ಹುಡುಕಾಟ ನಡೆದಿದ್ದು, ಈ ಸ್ಥಾನಕ್ಕೆ ಇಬ್ಬರು ಆಟಗಾರರ ನಡುವೆ ಫೈಟ್ ನಡೆಯಲಿದೆ.
ಈಗಾಗಲೇ ಟೀಮ್ ಇಂಡಿಯಾ ಪರ ಟಿ20 ವಿಶ್ವಕಪ್ ಆಡಿ ಅಮೋಘ ಪ್ರದರ್ಶನ ನೀಡಿರುವ ರಿಷಭ್ ಪಂತ್ ಸಹ ಈ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ. ಇವರು ಚುಟುಕು ಫಾರ್ಮೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಇವರು ಏಕದಿನ ಕ್ರಿಕೆಟ್‌ಗೆ ಮತ್ತೆ ಕಂ ಬ್ಯಾಕ್ ಮಾಡುವ ಕನಸು ಕಾಣುತ್ತಿದ್ದಾರೆ. ಪಂತ್ ಈಗಾಗಲೇ ಭಾರತ ತಂಡದ ಪರ 31 ಏಕದಿನ ಪಂದ್ಯಗಳನ್ನು ಆಡಿದ್ದು 33.5ರ ಸರಾಸರಿಯಲ್ಲಿ 871 ರನ್ ಗಳಿಸಿದ್ದಾರೆ.

ಸಂಜು ಸ್ಯಾಮ್ಸನ್ ಸಹ ಏಕದಿನ ಕ್ರಿಕೆಟ್‌ನಲ್ಲಿ ಕಂ ಬ್ಯಾಕ್ ಮಾಡುವ ಕನಸು ಕಾಣುತ್ತಿದ್ದಾರೆ. ಇವರು ಈಗಾಗಲೇ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮುಡಿಸಿದ್ದಾರೆ. ಅಲ್ಲದೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಇವರು ಸಹ ಚಾಂಪಿಯನ್ಸ್ ಟ್ರೋಫಿ ತಂಡವನ್ನು ಸೇರುವ ಕನಸು ಕಾಣುತ್ತಿದ್ದಾರೆ. ಸಂಜು ಈಗಾಗಲೇ ಭಾರತದ ಪರ 16 ಏಕದಿನ ಪಂದ್ಯಗಳನ್ನು ಆಡಿದ್ದು 56.67 ಸರಾಸರಿಯಲ್ಲಿ 510 ರನ್ ಗಳಿಸಿದ್ದಾರೆ.
ಅಂಕಿ ಅಂಶಗಳನ್ನು ನೋಡಿದಾಗಲೂ ಸಂಜು ಪಂತ್ ಅವರಿಗಿಂತ ಮುಂದಿದ್ದು ಅವಕಾಶ ಸಿಕ್ಕಾಗಲೆಲ್ಲಾ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.