IND vs BAN 1st Test: ಪಂದ್ಯದ ಮಧ್ಯದಲ್ಲೇ RCB ವೇಗಿಗೆ ಕ್ಷಮೆ ಕೇಳಿದ ರಿಷಭ್ ಪಂತ್
ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ ಮೊದಲ ಟೆಸ್ಟ್ ಚೆನ್ನೈನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಹಲವು ವಿಶೇಷತೆಗಳು ಕಂಡು ಬಂದಿದೆ. ಈ ಮಧ್ಯೆ ಎಲ್ಲರ ಗಮನ ಸೆಳೆದಿದ್ದು ಆ ಒಂದು ದೃಶ್ಯ. ಈ ದೃಶ್ಯದಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್, ಆರ್‌ಸಿಬಿ ವೇಗಿಗೆ ಕ್ಷಮೆ ಕೇಳಿದ್ದಾರೆ.
ಭಾರತ ಹಾಗೂ ಬಾಂಗ್ಲಾ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ 376 ರನ್‌ಗಳಿಗೆ ಅಲೌಟ್ ಆಯಿತು. ಮೊದಲ ಇನಿಂಗ್ಸ್‌ನ ಆರಂಭಿಸಿದ ಬಾಂಗ್ಲಾ ಬ್ಯಾಟಿಂಗ್ ವೇಳೆ ಈ ಘಟನೆ ನಡೆದಿದೆ. ಹಾಗಿದ್ದರೆ ಪಂತ್ ಕ್ಷಮೆ ಕೇಳಿದ್ದು ಯಾರಿಗೆ ಇಲ್ಲಿದೆ ವರಿದೆ.

ರಿಷಭ್ ಪಂತ್ ಕ್ಷಮೆಯಾಚನೆ
ಜಸ್ಪ್ರಿತ್ ಬುಮ್ರಾ ಅವರ ಜೊತೆ ಮೊಹಮ್ಮದ್ ಸಿರಾಜ್ ಬೌಲಿಂಗ್ ಆರಂಭಿಸಿದರು. ಈ ವೇಳೆ ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಮೊಹಮ್ಮದ್ ಸಿರಾಜ್ ಈ ಓವರ್‌ನ ಐದನೇ ಎಸೆತವನ್ನು ಬೌಲ್ ಮಾಡಿದರು. ಜಾಕೀರ್ ಹಸನ್ ಪ್ಲೇಡ್ ಮಾಡಲು ಹೋಗಿ ಮಿಸ್ ಆದರು. ಚೆಂಡು ಪ್ಯಾಡ್‌ಗೆ ತಾಗಿತು. ಆಗ ಸಿರಾಜ್ ವಿಕೆಟ್‌ಗೆ ಬಲವಾದ ಮನವಿಯನ್ನು ಮಾಡಿದರು.
ಸಿರಾಜ್ ಮನವಿಯನ್ನು ಕಂಡು ಟೀಮ್ ಇಂಡಿಯಾ ಡಿಆರ್‌ಎಸ್ ತೆಗೆದುಕೊಳ್ಳುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ರೋಹಿತ್ ಶರ್ಮಾ, ರಿಷಭ್ ಪಂತ್ ಜೊತೆ ಚರ್ಚೆ ನಡೆಸಿದರು. ಈ ವೇಳೆ ಪಂತ್ ಲೆಗ್ ಸ್ಟಂಪ್ ಮಿಸ್ ಆಗುತ್ತಿದೆ ಎಂದು ಸನ್ನೆ ಮಾಡಿ ಸೂಚಿಸಿದರು. ಇದರ ಪರಿಣಾಮ ರೋಹಿತ್ ಡಿಆರ್‌ಎಸ್ ಪಡೆಯಲಿಲ್ಲ.

ಡಿಆರ್‌ಎಸ್ ಪಡೆಯದೇ ಎಡವಟ್ಟು
ಪಂದ್ಯ ನಡೆಯುತ್ತಿರುವಾಗಲೇ ಅದೇ ಎಸೆತವನ್ನು ಬಿಗ್ ಸ್ಕ್ರೀನ್ ನಲ್ಲಿ ತೋರಿಸಿಲಾಯಿತು. ಅಲ್ಲದೆ ಹಾಕ್ ಐ ಸಹ ಬಳಸಿ ನೋಡಲಾಯಿತು. ಚೆಂಡು ಲೆಗ್ ಸ್ಟಂಪ್ ಮೇಲೆ ಬಿದ್ದು ನೇರವಾಗಿ ಲೆಗ್ ಸ್ಟಂಪ್‌ಗೆ ಮುತ್ತಿಟ್ಟಿರುವುದು ತಂತ್ರಜ್ಞಾನದಲ್ಲಿ ಬಯಲಾಯಿತು. ಆದರೆ ಅದಾಗಲೇ ಸಮಯ ಮೀರಿ ಹೋಗಿತ್ತು.
ದೊಡ್ಡ ಪರದೆಯ ಮೇಲೆ ತಾವು ಮಾಡಿದ ತಪ್ಪನ್ನು ನೋಡಿದ ರಿಷಭ್ ಪಂಥ್, ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಅವರಲ್ಲಿ ಕ್ಷಮೆ ಕೇಳಿದರು.
ಈ ಡಿಆರ್‌ಎಸ್ ಪಡೆದಿದ್ದರೆ ಜಕೀರ್ ಹಸನ್ ಪೆವೆಲಿಯನ್ ಸೇರಬೇಕಿತ್ತು. ಆದರೆ ಇದರ ಲಭವನ್ನು ಪಡೆಯಲು ಅವರ ವಿಫಲರಾದರು. ಆಕಾಶ್ ದೀಪ್ ತೋಡಿದ ಖೆಡ್ಡಾಗೆ ಇವರು ಬಲಿಯಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications