For Quick Alerts
ALLOW NOTIFICATIONS  
For Daily Alerts
 

Rishabh Pant: ಗುರುವಿನ ಮತ್ತೊಂದು ದಾಖಲೆ ಅಳಿಸಿದ ಶಿಷ್ಯ

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಮೊದಲ ಟೆಸ್ಟ್‌ ಪಂದ್ಯ ಹೆಡಿಂಗ್ಲಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಸೋತರೂ ಅಮೋಘ ಪ್ರದರ್ಶನ ನೀಡಿದೆ. ಆರಂಭಿಕರಾದ ಯಶಸ್ವಿ ಜೈಸ್ವಾಲ್‌ ಹಾಗೂ ನಾಯಕ ಶುಭಮನ್‌ ಗಿಲ್ ಬಾರಿಸಿದ ಶತಕದ ನೆರವಿನಿಂದ ಟೀಮ್ ಇಂಡಿಯಾ ಉತ್ತಮ ಸ್ಥಿತಿಯಲ್ಲಿದೆ. ಇನ್ನು ಉಪನಾಯಕ ರಿಷಭ್‌ ಪಂತ್‌ ಬಾರಿಸಿದ ಅರ್ಧಶತಕ ತಂಡಕ್ಕೆ ಆಧಾರವಾಗಿದೆ. ಪಂತ್‌ ಅವರ ಅಜೇಯ 65 ರನ್‌ಗಳ ಇನಿಂಗ್ಸ್‌ ನೆರವಿನಿಂದ ಹಲವು ದಾಖಲೆಗಳನ್ನು ಬರೆದಿದ್ದಾರೆ.

ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 3 ವಿಕೆಟ್‌ ನಷ್ಟಕ್ಕೆ 359 ರನ್‌ ಸೇರಿಸಿತು. ಭಾರತದ ಪರ ಆರಂಭಿಕರಾದ ಯಶಸ್ವಿ ಜೈಸ್ವಾಲ್‌ (101 ರನ್), ಕೆಎಲ್ ರಾಹುಲ್ (42) ಉತ್ತಮ ಜೊತೆಯಾಟವನ್ನು ನೀಡಿದರು. ಸಾಯಿ ಸುದರ್ಶನ್‌ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ನಾಯಕ ಶುಭಮನ್‌ ಗಿಲ್‌ (ಅಜೇಯ 127) ಹಾಗೂ ರಿಷಭ್‌ ಪಂತ್‌ (ಅಜೇಯ 65) ತಂಡಕ್ಕೆ ಆಧಾರವಾದರು. ಅಲ್ಲದೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲ ದಿನದಾಟದಲ್ಲಿ ರಿಷಭ್‌ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 65 ರನ್ ಬಾರಿಸಿ ಅಬ್ಬರಿಸಿದರು.

Rishabh Pant Breaks Dhoni s Record in SENA Countries

ರಿಷಭ್ ಪಂತ್ ಈ ಅರ್ಧಶತಕದ ಬಲದಿಂದ ಹಲವು ದಾಖಲೆಗಳನ್ನು ಬರೆದಿದ್ದಾರೆ. ಸೇನಾ ರಾಷ್ಟ್ರಗಳಲ್ಲಿ ಭಾರತೀಯ ವಿಕೆಟ್‌ ಕೀಪರ್ ಆಗಿ ಅತಿ ಹೆಚ್ಚು ರನ್‌ ಬಾರಿಸಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಇವರು ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಅಳಿಸಿ ಹಾಕಿದರು. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾವನ್ನು ಸೇನಾ ರಾಷ್ಟ್ರ ಎಂದು ಕರೆಯುತ್ತಾರೆ.

ಧೋನಿ ದಾಖಲೆ ಉಡೀಸ್

ಮಹೇಂದ್ರ ಸಿಂಗ್ ಧೋನಿ ಸೇನಾ ರಾಷ್ಟ್ರದಲ್ಲಿ 1731 ರನ್‌ ಸಿಡಿಸಿದ ದಾಖಲೆಯನ್ನು ಹೊಂದಿದ್ದರು. ಈ ದಾಖಲೆಯನ್ನು ರಿಷಭ್‌ ಮುರಿದರು, ಸದ್ಯ ರಿಷಭ್‌ ಬುಟ್ಟಿಯಲ್ಲಿ 1746 ರನ್‌ಗಳು ಸೇರಿವೆ. ಇವರು ಎರಡನೇ ದಿನದಾಟದಲ್ಲೂ ಭಾರತದ ಪರ ಮೊದಲ ಇನಿಂಗ್ಸ್‌ನಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಈ ಸಂದರ್ಭದಲ್ಲಿ, ಫಾರೂಕ್ ಎಂಜಿನಿಯರ್ (1099) ಮೂರನೇ ಸ್ಥಾನದಲ್ಲಿದ್ದಾರೆ. ಸೈಯದ್ ಕಿರ್ಮಾನಿ (785) ನಾಲ್ಕನೇ ಸ್ಥಾನದಲ್ಲಿದ್ದಾರೆ ಮತ್ತು ಕಿರಣ್ ಮೋರ್ (627) ಐದನೇ ಸ್ಥಾನದಲ್ಲಿದ್ದಾರೆ.

Rishabh Pant Breaks Dhoni s Record in SENA Countries

ಸೆನಾ ದೇಶಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ವಿಕೆಟ್‌ಕೀಪರ್‌ಗಳ ಪಟ್ಟಿಯಲ್ಲಿ ಫಾರೂಕ್ ಎಂಜಿನಿಯರ್ (1099 ರನ್) ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಸೈಯದ್ ಕಿರ್ಮಾನಿ (785 ರನ್‌), ಕಿರಣ್ ಮೋರೆ (627 ರನ್‌) ಐದನೇ ಸ್ಥಾನದಲ್ಲಿದ್ದಾರೆ.

ಮತ್ತೊಂದು ಸಾಧನೆ

ಇನಿಂಗ್ಸ್‌ ಲೆಕ್ಕಾಚಾರದಲ್ಲಿ ಪಂತ್‌ ವೇಗವಾಗಿ 3000 ರನ್‌ ಕಲೆ ಹಾಕಿದ ವಿಕೆಟ್‌ ಕೀಪರ್‌ ಬ್ಯಾಟರ್‌ಗಳ ಪಟ್ಟಿಯಲ್ಲಿ ಕುಮಾರ್‌ ಸಂಗಾಕ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ಕುಮಾರ್‌ 78 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಪಂತ್‌ 3000 ರನ್ ಬಾರಿಸಲು 76 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ.

Story first published: Saturday, June 21, 2025, 10:23 [IST]
Other articles published on Jun 21, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+