Rishabh Pant: ಚೆಂಡು ಬಡೆದು ಮೈಗೆಲ್ಲಾ ಗಾಯ: ಚಿಕ್ಕ ಇನಿಂಗ್ಸ್‌ನಲ್ಲೂ ರಿಷಭ್ ದಾಖಲೆ
ಭಾರತ, ಆಸ್ಟ್ರೇಲಿಯಾ ವಿರುದ್ಧ ಐದನೇ ಟೆಸ್ಟ್ ಪಂದ್ಯದಲ್ಲಿ ತನ್ನ ಹಳೆಯ ಚಾಳಿಯನ್ನೇ ಮುಂದುವರಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಆದರೆ ಮಧ್ಯಮ ಕ್ರಮಾಂಕದ ಆಟಗಾರ ರಿಷಭ್ ಪಂತ್ ಸ್ಥಿರ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಟೀಮ್ ಇಂಡಿಯಾ ಐದನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 185 ರನ್‌ಗಳಿಗೆ ಆಲೌಟ್ ಆಯಿತು.
ಸಿಡ್ನಿಯಲ್ಲಿ ಆರಂಭವಾದ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಜಸ್ಪ್ರಿತ್ ಬುಮ್ರಾ ಟಾಸ್ ಗೆದ್ದು ಫೀಲ್ಡಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಬ್ಯಾಟರ್‌ಗಳು ವಿಫಲರಾದರು. ಪರಿಣಾಮ ಭಾರತದ ಟಾಪ್ ಆರ್ಡರ್ ಬ್ಯಾಟರ್‌ಗಳು ಬೇಗನೆ ಪೆವೆಲಿಯನ್ ಸೇರಿದರು. ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ವಿರಾಟ್ ಕೊಹ್ಲಿ, ಶುಭಮನ್ ಗಿಲ್ ನೆಲಕಚ್ಚಿ ನಿಲ್ಲುವ ಭರವಸೆ ನೀಡಿದರೂ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ.

ಕ್ಲಾಸಿಕ್ ಆಟವಾಡಿದ ಪಂತ್
ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ರಿಷಭ್ ಪಂತ್ ತಮ್ಮ ನೈಜ ಆಟದ ವಿರುದ್ಧವಾಗಿ ಬ್ಯಾಟ್ ಮಾಡಿದರು. ಇವರು ತಾಳ್ಮೆಯಿಂದ ಇನಿಂಗ್ಸ್ ಕಟ್ಟಲು ಮುಂದಾದರು. ಆದರೆ ಕೆಟ್ಟ ಎಸೆತಗಳು ಸಿಕ್ಕರೆ ದಂಡಿಸುತ್ತಾ ಸಾಗಿದರು. ಈ ವೇಳೆ ಆಸ್ಟ್ರೇಲಿಯಾ ಬೌಲರ್‌ಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ತಡಕಾಟ ನಡೆಸಿದರು. ಗಬ್ಬಾದಲ್ಲಿ ಅಂದು ಚೇತೇಶ್ವರ್ ಪೂಜಾರ ಮೈಗೆಲ್ಲಾ ಏಟು ತಿಂದು ಆಡಿದ ದೃಶ್ಯ ನೆನಪಾಗುವಂತೆ ಪಂತ್ ಬ್ಯಾಟ್ ಮಾಡಿದರು. ಇವರು ಈ ಚಿಕ್ಕ ಇನಿಂಗ್ಸ್‌ನಲ್ಲಿ ಕೆಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಒಂದು ಸಿಕ್ಸರ್ ಬಾರಿಸುತ್ತಿದಂತೆ ದಾಖಲೆ
ರಿಷಬ್ ಪಂತ್ 98 ಎಸೆತಗಳನ್ನು ಎದುರಿಸಿ 40 ರನ್ ಗಳಿಸಿದರು. ಪಂತ್ ಅವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸೇರಿವೆ. ಈ ವೇಳೆ ಚೆಂಡು ಅವರ ಕೈಗೆ ಬಡೆದು ತೊಂದರೆ ಆಯಿತು. ಬಳಿಕ ಬೌಲರ್‌ಗಳಿಗೆ ತಕ್ಕ ಉತ್ತರ ನೀಡುವಲ್ಲಿ ಸಫಲರಾದರು.

ರೋಹಿತ್ ದಾಖಲೆ ಮೀರಿದ ರಿಷಭ್
ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಟೆಸ್ಟ್ ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರಿಷಭ್ ಪಂತ್, ದಾಖಲೆ ನಿರ್ಮಿಸಿದರು. ಆಸೀಸ್ ನೆಲದಲ್ಲಿ ರೋಹಿತ್ 10 ಸಿಕ್ಸರ್ ಬಾರಿಸಿದ್ದಾರೆ. ಆದರೆ ರಿಷಭ್ ಪಂತ್ ಈ ಪಂದ್ಯದಲ್ಲಿ ಒಂದು ಸಿಕ್ಸರ್ ಬಾರಿಸುತ್ತಿದ್ದಂತೆ, ರೋಹಿತ್ ದಾಖಲೆ ಮುರಿದರು. ಕಾಂಗರೂ ನಾಡಿನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ನಿತೀಶ್ ಕುಮಾರ್ ರೆಡ್ಡಿಗೆ ಮೂರನೇ ಸ್ಥಾನ. ಇವರು ಪ್ರಸಕ್ತ ಸರಣಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಸಹ 8 ಸಿಕ್ಸರ್ ಸಿಡಿಸಿದ್ದಾರೆ. ಇನ್ನು ಟೀಮ್ ಇಂಡಿಯಾದ ದಿಗ್ಗಜ ಸಚಿನ್ ತೆಂಡೂಲ್ಕರ್ 7 ಸಿಕ್ಸರ್ ಸಿಡಿಸಿದ ಹಿರಿಮೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications