Rishabh Pant: ಗಾಯದ ನಡುವೆಯೂ ಬ್ಯಾಟ್ ಮಾಡಿ ಹಲವು ದಾಖಲೆ ಬರೆದ ರಿಷಭ್ ಪಂತ್: ಇಲ್ಲಿದೆ ಪಟ್ಟಿ
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ರಿಷಭ್ ಪಂತ್ ನಾಲ್ಕನೇ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಇಳಿಯುತ್ತಿದ್ದಂತೆ ಎಲ್ಲರ ಚಿತ್ತ ಕದ್ದರು. ಮೊದಲ ದಿನದಾಟದಲ್ಲಿ ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ರಿಷಭ್ ಪಂತ್ ಕಾಲಿಗೆ ಗಾಯ ಮಾಡಿಕೊಂಡಿದ್ದರು. ಅಲ್ಲದೆ ಕಾಲು ಊರಲು ಬಾರದೇ ಇದ್ದಾಗ ಮೈದಾನದಿಂದ ಹೊರ ನಡೆಯಬೇಕಾಯಿತು. ಇವರು ಮತ್ತೆ ಮೈದಾನಕ್ಕೆ ಇಳಿಯುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಅನುಮಾನಗಳು ಇದ್ದವು. ಆದರೆ ಪಂತ್ ಕ್ರೀಡಾ ಸ್ಪೂರ್ತಿ ಮೆರೆದು ಮತ್ತೆ ಅಂಗಳಕ್ಕೆ ಇಳಿದರು.
ಗಾಯದ ನಡುವೆ ಪಂತ್ ಬ್ಯಾಟಿಂಗ್ ಮಾಡಲು ಬಂದಾಗ ಇಡೀ ಮ್ಯಾಂಚೆಸ್ಟರ್ ಮೈದಾನವೇ ಅವರಿಗೆ ಎದ್ದು ನಿಂತು ಚಪ್ಪಾಳೆಯನ್ನು ತಟ್ಟಿತು. 37 ರನ್‌ಗಳಿ ಮೈದಾನದಿಂದ ಹೊರ ನಡೆದಿದ್ದ ಪಂತ್, ಎರಡನೇ ದಿನ ಬ್ಯಾಟಿಂಗ್ ಮಾಡಿ ಅರ್ಧಶತಕ ಬಾರಿಸಿದರು. ಇವರು 75 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 54 ರನ್ ಬಾರಿಸಿ, ಜೋಫ್ರಾ ಆರ್ಚರ್‌ಗೆ ವಿಕೆಟ್ ಒಪ್ಪಿಸಿದರು. ಪಂತ್ ಈ ಅರ್ಧಶತಕ ಇನಿಂಗ್ಸ್ ಮೂಲಕ ಹಲವು ದಾಖಲೆಗಳನ್ನು ಬರೆದರು.

ರಿಷಭ್ ಪಂತ್ ಅವರ 54 ರನ್‌ಗಳ ಈ ಇನಿಂಗ್ಸ್ ಮೂಲಕ ಇವರು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಪಂತ್ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ದಾಖಲೆಯನ್ನು ಅಳಿಸಿ ಹಾಕಿದರು. ರೋಹಿತ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ 2716 ರನ್ ಕಲೆ ಹಾಕಿದ್ದಾರೆ. ಇನ್ನು ಪಂತ್ 2731 ರನ್ ಸಿಡಿಸಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದರು.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಪರ ಗರಿಷ್ಠ ರನ್ ಸಾಧಕರ
ರಿಷಭ್ ಪಂತ್, 38 ಪಂದ್ಯ, 2731 ರನ್
ರೋಹಿತ್ ಶರ್ಮಾ, 40 ಪಂದ್ಯ, 2716 ರನ್
ವಿರಾಟ್ ಕೊಹ್ಲಿ, 46 ಪಂದ್ಯ, 2617 ರನ್
ಶುಭಮನ್ ಗಿಲ್, 36 ಪಂದ್ಯ, 2512 ರನ್
ರವೀಂದ್ರ ಜಡೇಜಾ, 43 ಪಂದ್ಯ, 2232 ರನ್

ರಿಷಭ್ ಪಂತ್ ಇದೇ ಪಂದ್ಯದಲ್ಲಿ 2 ಸಿಕ್ಸರ್ ಸಿಡಿಸಿದರು. ಈ ಮೂಲಕ ಮತ್ತೊಂದು ದಾಖಲೆ ಬರೆದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಪಂತ್ ಸಮನಾಗಿಸಿದರು. ಪಂತ್ ಹಾಗೂ ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 90 ಸಿಕ್ಸರ್ ಸಿಡಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟರ್ಸ್
ರಿಷಭ್ ಪಂತ್ 47 ಪಂದ್ಯ, 90 ಸಿಕ್ಸರ್
ವೀರೇಂದ್ರ ಸೆಹ್ವಾಗ್, 103 ಪಂದ್ಯ, 90 ಸಿಕ್ಸರ್
ರೋಹಿತ್ ಶರ್ಮಾ, 67 ಪಂದ್ಯ, 88 ಸಿಕ್ಸರ್
ಎಂಎಸ್ ಧೋನಿ, 90 ಪಂದ್ಯ, 78 ಸಿಕ್ಸರ್
ರವೀಂದ್ರ ಜಡೇಜಾ, 84 ಪಂದ್ಯ, 74 ಸಿಕ್ಸರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications