For Quick Alerts
ALLOW NOTIFICATIONS  
For Daily Alerts
 

Team India: ರೋಹಿತ್‌ನಂತೆಯೇ ಈ ಆಟಗಾರನೂ ಆರಂಭಿಕನಾದರೆ ದ್ವಿ-ತ್ರಿಶತಕ ಫಿಕ್ಸ್!

ಆಗಸ್ಟ್ 22 ಗುರುವಾರ, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ತಮ್ಮ ಆರಂಭಿಕ ಕ್ರಿಕೆಟ್ ದಿನಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. 2007ರ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ್ದರು. ಈ ಸಂದರ್ಭದಲ್ಲಿ ಕೇವಲ 3 ಬಾರಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದರು.

ಇದಾದ ನಂತರ ಮಧ್ಯಮ ಕ್ರಮಾಂಕದ ಬ್ಯಾಟರ್‌ ‌ನಿಂದ ಓಪನರ್ ಆಗಿ ರೋಹಿತ್ ಶರ್ಮಾ ಬದಲಾದರು. ಈ ಸೂತ್ರವೇ ಅವರು ವಿಶ್ವ ಕ್ರಿಕೆಟ್‌ನಲ್ಲಿ ಐತಿಹಾಸಕ ದಾಖಲೆಗಳನ್ನು ನಿರ್ಮಿಸಲು ಸಾಧ್ಯವಾಯಿತು. ಮತ್ತೊಂದೆಡೆ ಟೀಮ್ ಇಂಡಿಯಾ ಇನ್ನೂ ಅದರ ಫಲಿತಾಂಶಗಳನ್ನು ಪಡೆಯುತ್ತಿದೆ.

Rishabh Pant can score double-triple centuries if he becomes an opener in international cricket

ಇದೀಗ ಟೀಮ್ ಇಂಡಿಯಾದ ಮತ್ತೊರ್ವ ಆಟಗಾರ ಹಿಟ್‌ಮ್ಯಾನ್ ಸೂತ್ರ ಅಳವಡಿಸಿಕೊಳ್ಳುವ ಮೂಲಕ ತಾನು ಆರಂಭಿಕನಾಗಿ ದಾಖಲೆಗಳ್ನು ಸೃಷ್ಟಿಸುವ ಅವಕಾಶಗಳನ್ನು ಹೊಂದಿದ್ದಾರೆ.
ತನ್ನ ಬಿರುಸಿನ ಬ್ಯಾಟಿಂಗ್ ಮೂಲಕ ಈ ಆಟಗಾರನಿಗೆ ದ್ವಿ-ತ್ರಿಶತಕ ಹೊಡೆಯುವ ಸಾಮರ್ಥ್ಯವಿದೆ.

ಖಾಯಂ ಓಪನರ್?

ರೋಹಿತ್ ಶರ್ಮಾ ಅವರಂತೆ, ಮಧ್ಯಮ ಕ್ರಮಾಂಕದ ವಿಕೆಟ್‌ ಕೀಪರ್-ಬ್ಯಾಟರ್ ರಿಷಬ್ ಪಂತ್ ಕೂಡ ಆರಂಭಿಕರಾಗಿ ಮಿಂಚಬಹುದು. ಎಡಗೈ ಬ್ಯಾಟರ್ ಆಗಿರುವ ಅವರು ಆರಂಭಿಕನಾದರೆ ಟೀಮ್ ಇಂಡಿಯಾಕ್ಕೆ ನೆರವಾಗುತ್ತದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಬಲ ಮತ್ತು ಎಡ ಸಂಯೋಜನೆಯಲ್ಲಿ ಇನ್ನಿಂಗ್ಸ್ ಆರಂಭಿಸಬಹುದು.

ಪಂತ್ ಸ್ಪೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದು, ಆರಂಭಿಕ ಹಂತದಲ್ಲಿ ಯಾವುದೇ ಎದುರಾಳಿ ತಂಡಕ್ಕೆ ತಲೆನೋವಾಗಿ ಪರಿಣಮಿಸಬಹುದು. ಅವರು ಕೂಡ ನಾಯಕತ್ವದಲ್ಲಿ ಯಶಸ್ಸು ಕಂಡಿದ್ದಾರೆ. ಮುಂಬರುವ ದಿನಗಳಲ್ಲಿ ಅವರಿಗೆ ಏಕದಿನ ಮತ್ತು ಟಿ20 ಮಾದರಿ ಕ್ರಿಕೆಟ್‌ನಲ್ಲಿ ಆರಂಭಿಕ ಮತ್ತು ನಾಯಕನಾಗುವ ಅವಕಾಶಗಳಿವೆ.

ಧೋನಿ ನಿರ್ಧಾರ

ಮಧ್ಯಮ ಕ್ರಮಾಂಕದಿಂದ ರೋಹಿತ್ ಶರ್ಮಾ ಅವರನ್ನು ಆರಂಭಿಕನಾಗಿ ಮಾಡುವುದು ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿರ್ಧಾರವಾಗಿತ್ತು. ಅದರಂತೆ ರೋಹಿತ್ ಅವರನ್ನು ಧೋನಿ ಆರಂಭಿಕನಾಗಿ ಬದಲಾಯಿಸಿದರು. ಪರಿಣಾಮ ಅವರು ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದರು.

ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ರೋಹಿತ್ ಶರ್ಮಾ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 264 ರನ್ ಕೂಡ ಸೇರಿದೆ. ರೋಹಿತ್ ಶರ್ಮಾ ಓಪನರ್ ಆದ ನಂತರ ಅವರ ಅದೃಷ್ಟವೇ ಬದಲಾಗಿದೆ. ಕ್ರಿಕೆಟ್‌ನ ಎಲ್ಲಾ ಮಾದರಿಯಲ್ಲೂ ಯಶಸ್ಸು ಸಾಧಿಸಿದ್ದಾರೆ.

ಇದೀಗ ರಿಷಬ್ ಪಂತ್ ಕೂಡ ಓಪನರ್ ಆದರೆ, ಇತಿಹಾಸ ಸೃಷ್ಟಿಸಬಹುದು. ರಿಷಬ್ ಪಂತ್ ಏಕದಿನದಲ್ಲಿ ರೋಹಿತ್ ಶರ್ಮಾ ಅವರ 264 ರನ್‌ಗಳ ವಿಶ್ವ ದಾಖಲೆಯನ್ನು ಮುರಿಯಲು ಸಾಧ್ಯವಿಲ್ಲ. ಆದರೆ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ತ್ರಿಶತಕವನ್ನು ಬಾರಿಸಬಹುದು.

Story first published: Friday, August 23, 2024, 11:46 [IST]
Other articles published on Aug 23, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+