For Quick Alerts
ALLOW NOTIFICATIONS  
For Daily Alerts
 

ಮೈದಾನಕ್ಕೆ ಇಳಿಯುವ ಮುನ್ನವೇ ರಿಷಭ್‌ ಮುಖದಲ್ಲಿ ಮಂದಹಾಸ: ಕಾರಣವೇನು?

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ತನ್ನ ಯುವ ತಂಡದೊಂದಿಗೆ ಅಖಾಡಕ್ಕೆ ಇಳಿಯಲಿದೆ. ಈ ಸರಣಿ ಆರಂಭವಾಗುವ ಮುನ್ನವೇ ಟೀಮ್ ಇಂಡಿಯಾದ ಉಪನಾಯಕನ ಮುಖದಲ್ಲಿ ಮಂದಹಾಸ ಮೂಡುವಂತಹ ಸುದ್ದಿಯೊಂದು ಬಂದಿದೆ. ಹಾಗಿದ್ದರೆ ರಿಷಭ್‌ ಪಂತ್‌ ಖುಷಿಯಾಗಲು ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಬುಧವಾರ ನೂತನ ಐಸಿಸಿ ಶ್ರೇಯಾಂಕ ಬಿಡುಗಡೆ ಆಗಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ಫೈನಲ್‌ ಆದ ಬಳಿಕ ಹೊಸ ಶ್ರೇಯಾಂಕ ಬಿಡುಗಡೆ ಆಗಿದೆ. ಈ ಬಾರಿ ಹೆಚ್ಚಿನ ಬದಲಾವಣೆಗಳನ್ನು ಏನು ಕಂಡಿಲ್ಲ. ಆದರೆ ಈ ಶ್ರೇಯಾಂಕ ನಿಶ್ಚಿತವಾಗಿ ಹಲವು ಆಟಗಾರರ ಮುಖದಲ್ಲಿ ಮಂದಹಾಸ ಮೂಡಿಸಿರುವ ಕಾರ್ಯವನ್ನು ಮಾಡಿದೆ. ಇದರಲ್ಲಿ ಟೀಮ್ ಇಂಡಿಯಾದ ವಿಕೆಟ್‌ ಕೀಪರ್ ಬ್ಯಾಟರ್‌ ರಿಷಭ್‌ ಪಂತ್ ಸಹ ಒಬ್ಬರು. ಇವರು ಮೈದಾನಕ್ಕೆ ಇಳಿಯುವ ಮುನ್ನವೇ ಇವರಿಗೆ ಖುಷಿ ಸುದ್ದಿಯೊದು ಸಿಕ್ಕಿದೆ.

Rishabh Pant Climbs ICC Test Rankings Ahead of England Series

ಈ ಮೊದಲು 9ನೇ ಸ್ಥಾನದಲ್ಲಿದ್ದ ರಿಷಬ್ ಪಂತ್‌ ಈಗ 9ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಇವರ ಬುಟ್ಟಿಯಲ್ಲಿ ಸದ್ಯ 739 ಅಂಕಗಳನ್ನು ಹೊಂದಿದ್ದಾರೆ. ಟೀಮ್ ಇಂಡಿಯಾ ಪರ ನಂಬರ್‌ 1 ಸ್ಥಾನದಲ್ಲಿರುವ ಆಟಗಾರ ಯಶಸ್ವಿ ಜೈಸ್ವಾಲ್‌ ಇದ್ದಾರೆ. ಇವರ ಖಾತೆಯಲ್ಲಿ 847 ಅಂಕಗಳು ಇದ್ದು ಇವರು ಸದ್ಯ 4ನೇ ಶ್ರೇಯಾಂಕದಲ್ಲಿದ್ದಾರೆ. ಟೆಸ್ಟ್‌ ಶ್ರೇಯಾಂಕದಲ್ಲಿ ಈಗಲೂ ನಂಬರ್‌ ಒನ್ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಜೋ ರೂಟ್‌ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಇವರು 888 ಅಂಕಗಳನ್ನು ಹೊಂದಿದ್ದಾರೆ. ಇನ್ನು ಇಂಗ್ಲೆಂಡ್‌ ತಂಡದ ಹ್ಯಾರಿ ಬ್ರೂಕ್‌ ಎರಡನೇ ಸ್ಥಾನ, ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್‌ 3ನೇ ಸ್ಥಾನದಲ್ಲಿದ್ದಾರೆ.

ಉಳಿದಂತೆ ದಕ್ಷಿಣ ಆಫ್ರಿಕಾ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ ಎಂಬ ಪಟ್ಟವನ್ನು ತೊಡಿಸಿದ ನಾಯಕ ತೆಂಬು ಬವುಮಾ ಸಹ ಶ್ರೇಯಾಂಕದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದಾರೆ. ಇವರು ಸದ್ಯ ಆರನೇ ಸ್ಥಾನದಲ್ಲಿದ್ದಾರೆ. ಇನ್ನು ಶ್ರೀಲಂಕಾದ ಕಮಿಂದು ಮೆಂಡೀಸ್‌ ಏಳನೇ ಸ್ಥಾನ ಹೊಂದಿದ್ದಾರೆ.

Rishabh Pant Climbs ICC Test Rankings Ahead of England Series

ಬುಮ್ರಾ ಆಗ್ರ ಸ್ಥಾನ

ಟೀಮ್ ಇಂಡಿಯಾದ ಯಾರ್ಕರ್‌ ಸ್ಪಷಲಿಸ್ಟ್ ಖ್ಯಾತಿಯ ಜಸ್ಪ್ರಿತ್ ಬುಮ್ರಾ ಸದ್ಯ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲಿದ್ದಾರೆ. ಇವರು 908 ಅಂಕಗಳನ್ನು ಹೊಂದಿದ್ದಾರೆ. ಉಳಿದಂತೆ ದಕ್ಷಿಣ ಆಫ್ರಿಕಾದ ಕಗಿಸ ರಬಾ ಎರಡನೇ ಸ್ಥಾನ, ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್‌ ಮೂರನೇ ಕ್ರಮಾಂಕದಲ್ಲಿದ್ದಾರೆ. ಉಳಿದಂತೆ ಯಾವೊಬ್ಬ ಬ್ಯಾಟರ್‌ 10 ಸ್ಥಾನದೊಳಗೆ ಇಲ್ಲ. ರವೀಂದ್ರ ಜಡೇಜಾ 745 ಅಂಕಗಳೊಂದಿಗೆ 11ನೇ ಸ್ಥಾನದಲ್ಲಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಜೂನ್‌ 20 ರಂದು ಹೆಡಿಂಗ್ಲಿಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಇರಾದೆಯನ್ನು ಭಾರತ ಹೊಂದಿದೆ.

Story first published: Wednesday, June 18, 2025, 16:55 [IST]
Other articles published on Jun 18, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+