ಪಂತ್ ಮತ್ತೆ ವಿಫಲ, ಸ್ಥಾನ ಪಡೆಯಲು ಸಫಲ; ಇದು ಯಾರ ಕೃಪಾಕಟಾಕ್ಷದ ಫಲ
ವೆಸ್ಟ್ ವಿಂಡೀಸ್ ವಿರುದ್ಧದ ಟಿ20 ಸರಣಿಯನ್ನು ಟೀಮ್ ಇಂಡಿಯಾ ಗೆದ್ದುಕೊಂಡಿದೆ. ಭಾರತದ ಬ್ಯಾಟಿಂಗ್ ಪರಾಕ್ರಮದ ಮುಂದೆ ಮಂಕಾದ ಚಾಂಪಿಯನ್ನರು ಸರಣಿ ಸೋತು ಭಾರತಕ್ಕೆ ತಲೆಬಾಗಿದೆ. ಭಾರತದ ಬ್ಯಾಟಿಂಗ್ ಅಬ್ಬರ ಹೇಗಿತ್ತಂದರೆ ಬರೊಬ್ಬರಿ 240 ರನ್ ಸೂರೆಮಾಡಿತ್ತು. ಭಾರತದ ಟಾಪ್ ಆರ್ಡರ್‌ನ ಎಲ್ಲಾ ಬ್ಯಾಟ್ಸ್‌ಮನ್‌ಗಳು ವಿಂಡಿಸ್ ಬೌಲರ್‌ಗಳನ್ನು ಚಿಂದಿ ಮಾಡಿದ್ರು. ಆದರೆ ಆತನೊಬ್ಬನನ್ನು ಬಿಟ್ಟು..
ಅದು ಬೇರೆ ಯಾರೂ ಅಲ್ಲ. ಪದೇ ಪದೇ ವಿಫಲವಾದ್ರೂ ತಂಡದಲ್ಲಿ ಸ್ಥಾನ ಪಡೆಯುವ ಅದೃಷ್ಟವಂತ ರಿಷಬ್ ಪಂತ್. ಬೇರೆ ಆಯ್ಕೆಯೇ ಇಲ್ಲವೇನೋ ಅನ್ನುವಷ್ಟು ಅವಕಾಶ ಪಂತ್ ಪಾಲಿಗೆ ದೊರೆಯುತ್ತಿದೆ. ಇಷ್ಟಯ ಮಾತ್ರವಲ್ಲ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಸದಸ್ಯರು, ಮಾಜಿ ನಾಯಕರು ಕೂಡ ಪಂತ್ ಬಗ್ಗೆಯೇ ಒಲವನ್ನು ಹೊಂದಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯಂತಾ ಪ್ರಮುಖರು ರಿಷಬ್ ಪಂತ್ ಪ್ರತಿಭೆಯ ಬಗ್ಗೆ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ. ದುರಂತವೇನಂದರೆ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ರಿಷಬ್ ಮೇಲೆ ಯಾವುದೇ ನಿರೀಕ್ಷೆಯೂ ಉಳಿದಿಲ್ಲ.

ಸಂಜೂ ಸ್ಯಾಮ್ಸನ್‌ಗೆ ಮತ್ತೆ ನಿರಾಸೆ;
ತಂಡಕ್ಕೆ ಆಯ್ಕೆಯಾದರು ಆಡುವ ಬಳಗದಲ್ಲಿ ಸ್ಥಾನ ಪಡೆಯದ ಸಂಜು ಸ್ಯಾಮ್ಸನ್‌ಗೆ ಬೆಂಚ್ ಬಿಸಿಮಾಡುವುದೇ ಕಾಯಕವಾಗಿದೆ. ಮುಂದಿನ ಪಂದ್ಯದಲ್ಲಾದರೂ ಅವಕಾಶ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಪದೇ ಪದೆ ಆಗಿದ್ದು ನಿರಾಸೆಯೆ. ಒಂದಂತೂ ನಿಜ ಪಂತ್ ಸ್ಥಾನದಲ್ಲಿ ಸ್ಯಾಮ್ಸನ್ ಅಥವಾ ಇನ್ಯಾವುದೇ ಆಟಗಾರ ಇದ್ದಿದ್ದರೆ ಈ ಪ್ರಮಾಣದ ಅವಕಾಶ ದೊರೆತಿರಲಾರದು.

ವರ್ಷವಿಡೀ ಕಳಪೆ ಪ್ರದರ್ಶನ;
ಪಂತ್ 2019 ಕ್ಯಾಲೆಂಡರ್ ವರ್ಷದಲ್ಲಿ 16 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್‌ಗಿಳಿದಿದ್ದು ಬಾರಿಸಿದ ರನ್ 252. ಇದರಲ್ಲಿ ಕೇವಲ ಒಂದು ಅರ್ಧ ಶತಕ ದಾಖಲಾಗಿದೆ. ಎವರೇಜ್ 21.00. ಇದು ಚುಟುಕು ಆವೃತ್ತಿಯಲ್ಲಿ ಪಂತ್ ವೈಫಲ್ಯಕ್ಕೆ ಸಾಕ್ಷಿ. 2018ರಲ್ಲೂ ಪಂತ್ ಅಂತರಾಷ್ಟ್ರೀಯ ಟಿಟ್ವೆಂಟಿ ಪಂದ್ಯದಲ್ಲಿ ಪ್ರದರ್ಶನ ಕಳಪೆಯಾಗಿಯೇ ಇತ್ತು. 8 ಪಂದ್ಯಗಳನ್ನು ಆಡಿದ್ದ ಪಂತ್ ಬಾರಿಸಿದ್ದು ಕೇವಲ 16.28 ಸರಾಸರಿಯಲ್ಲಿ 114 ಮಾತ್ರ.
ವಿಶ್ವದಾಖಲೆಗಾಗಿ ಅಫ್ರಿದಿ, ಗೇಲ್ ಸಾಲು ಸೇರಿದ ಹಿಟ್‌ಮ್ಯಾನ್ ರೋಹಿತ್!

ನಿರ್ಣಾಯಕ ಪಂದ್ಯದಲ್ಲೂ ನಿರಾಸೆ;
ನಿನ್ನೆಯ ಪಂದ್ಯದಲ್ಲಿ ಅತ್ಯುತ್ತಮ ಆರಂಭ ಪಡೆದ ಬಳಿಕ ರಿಷಬ್ ಪಂತ್ ಮೂರನೇ ಕ್ರಮಾಂಕದಲ್ಲಿ ಆಡಲು ಕಳುಹಿಸಲಾಗಿತ್ತು. ತಂಡದ ಉತ್ತಮ ಸ್ಥಿತಿಯ ಹೊರತಾಗಿಯೂ ಪಂತ್ ಕೇವಲ ಎರಡು ಎಸೆತಗಳನ್ನು ಎದುರಿಸಿ ಸೊನ್ನೆ ಸುತ್ತಿ ಹೊರನಡೆದಿದ್ದರು. ಇದು ಅಭಿಮಾನಿಗಳ ಆಕ್ರೊಶ ಮತ್ತೆ ಹೆಚ್ಚಿಸಿದೆ. ಸರಣಿಯ ಎರಡನೇ ಪಂದ್ಯದಲ್ಲಿ ಯುವ ಆಲ್‌ರೌಂಡರ್ ಶವಂ ದುಬೆ ಗೆ ಇದೇ ರೀತಿ ಮೂರನೇ ಕ್ರಮಾಂಕದಲ್ಲಿ ಕಳುಹಿಸಲಾಗಿತ್ತು. ಈ ಅವಕಾಶವನ್ನು ದುಬೆ ಎರಡೂ ಕೈಗಳಿಂದ ಬಾಚಿ ಸ್ಪೋಟಕ ಅರ್ಧ ಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದನ್ನು ನೆನಪಿಸಿಕೊಳ್ಳಬೇಕಿದೆ.

ಪಂತ್ ಮೇಲೆ ಯಾರ ಕೃಪಾಕಟಾಕ್ಷ?
ಬ್ಯಾಟಿಂಗ್ ಮಾತ್ರವಲ್ಲ ವಿಕೆಟ್ ಕೀಪಿಂಗ್‌ನಲ್ಲೂ ತಮ್ಮ ಜಾಣ್ಮೆ ಮೆರೆಯುವಲ್ಲಿ ವಿಫಲರಾಗಿದ್ದಾರೆ. ಇಷ್ಟೆಲ್ಲಾ ಕಳಪೆ ಪ್ರದರ್ಶನದ ಬಳಿಕವೂ ಪಂತ್ ತಂಡದಲ್ಲಿ ಸ್ಥಾನಗಳಿಸುತ್ತಿರುವುದು ತಂಡದ ಮ್ಯಾನೇಜ್‌ಮೆಂಟ್‌ನ ಕೃಪಾಕಟಾಕ್ಷವೇ ಹೊರತು ಬೇರೇನೂ ಅಲ್ಲ. ಬಿಸಿಸಿಐನಲ್ಲಿ ಮುಂಬೈ ದೆಹಲಿ ಆಟಗಾರರಿಗೆ ಸಿಗುವ ಮನ್ನಣೆ ಬೇರೆ ಯಾವ ರಾಜ್ಯದ ಆಟಗಾರರಿಗೂ ಸಿಗಲಾರದು ಎಂಬ ಮಾತಿದೆ. ಅದಕ್ಕೆ ಮತ್ತೊಂದು ಸಾಕ್ಷಿಯಂತೆ ಪಂತ್ ಕಾಣಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications