ವಿಕೆಟ್ ಕೀಪಿಂಗ್‌ನಲ್ಲಿಯೂ ದಾಖಲೆ ನಿರ್ಮಿಸಿದ ರಿಷಬ್ ಪಂತ್

ನ್ಯಾಟಿಂಗ್‌ಹ್ಯಾಮ್, ಆಗಸ್ಟ್ 20: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಎದುರಿಸಿದ ಎರಡನೆಯ ಎಸೆತವನ್ನೇ ಸಿಕ್ಸರ್‌ಗೆ ಎತ್ತಿ ದಾಖಲೆಯ ಪಟ್ಟಿಯಲ್ಲಿ ತಮ್ಮ ಹೆಸರು ನಮೂದಿಸಿದ್ದ ಯುವ ಆಟಗಾರ ರಿಷಬ್ ಪಂತ್, ವಿಕೆಟ್ ಕೀಪಿಂಗ್‌ನಲ್ಲಿಯೂ ಮಹತ್ವದ ಮೈಲುಗಲ್ಲು ನಿರ್ಮಿಸಿದ್ದಾರೆ.
ತಾವಾಡಿದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಐದು ಕ್ಯಾಚ್‌ಗಳನ್ನು ಹಿಡಿದ ವಿಶ್ವದ ಮೂರನೇ ಹಾಗೂ ಭಾರತದ ಮೊದಲ ಆಟಗಾರ ಎಂದೆನಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ರಿಯಾನ್ ಟಾಬರ್ 1966ರಲ್ಲಿ ಮತ್ತು ಜಾನ್ ಮೆಕ್ಲೀನ್ 1978ರಲ್ಲಿ ಈ ಸಾಧನೆ ಮಾಡಿದ್ದರು. ಈ ಇಬ್ಬರನ್ನು ಹೊರತುಪಡಿಸಿ ಬೇರಾವ ವಿಕೆಟ್ ಕೀಪರ್ ಕೂಡ ತಮ್ಮ ಪಾದಾರ್ಪಣೆಯ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಐದು ಕ್ಯಾಚ್‌ಗಳನ್ನು ಹಿಡಿದಿರಲಿಲ್ಲ.
ಪಂತ್ ಅವರಿಗಿಂತ ಮೊದಲು ಭಾರತದ ಯಾವುದೇ ವಿಕೆಟ್ ಕೀಪರ್ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಮೂರಕ್ಕಿಂತ ಹೆಚ್ಚು ಕ್ಯಾಚ್ ಪಡೆದಿರಲಿಲ್ಲ. ಇಂಗ್ಲೆಂಡ್ ಇನ್ನಿಂಗ್ಸ್‌ನ ಮೊದಲ ಮೂರು ವಿಕೆಟ್‌ಗಳ ಪತನದಲ್ಲಿ ಪಂತ್ ಭಾಗಿಯಾಗಿದ್ದರು.
ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಔಟಾದ ಬಳಿಕ ಬ್ಯಾಟಿಂಗ್‌ಗೆ ಬಂದಿದ್ದ ಪಂತ್, ಆದಿಲ್ ರಶೀದ್ ಬೌಲಿಂಗ್‌ನಲ್ಲಿ ತಾವು ಎದುರಿಸಿದ ಎರಡನೆಯ ಎಸೆತವನ್ನೇ ಬೌಂಡರಿಯಿಂದ ಹೊರಕ್ಕೆ ಅಟ್ಟಿದ್ದರು. ಸಿಕ್ಸರ್ ಸಿಡಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ಖಾತೆ ತೆರೆದ 12ನೆಯ ಆಟಗಾರ ಎಂಬ ಕೀರ್ತಿಗೆ ಪಂತ್ ಪಾತ್ರರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications