Rishabh Pant: ಭಾರತ ತಂಡಕ್ಕೆ ಮರಳಿದ ರಿಷಭ್ ಪಂತ್ ಅವರ ಭಾವನಾತ್ಮಕ ಮಾತುಗಳು ವೈರಲ್!
ಮೇ 30 ಗುರುವಾರ, ಭೀಕರ ರಸ್ತೆ ಅಪಘಾತದಿಂದ ಸುಮಾರು 16 ತಿಂಗಳು ಕ್ರಿಕೆಟ್ ಮೈದಾನದಿಂದ ಭಾರತ ತಂಡದ ಸ್ಟಾರ್ ವಿಕೆಟ್ ಕೀಪರ್ ಮತ್ತು ಬ್ಯಾಟರ್ ರಿಷಬ್ ಪಂತ್ ಅವರು ಹೊರಗುಳಿದಿದ್ದರು. ಇದೀಗ 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರ ಪಂತ್ ಕ್ರಿಕೆಟ್ ಮೈದಾನಕ್ಕೆ ಮರಳಲಿದ್ದಾರೆ.
ಈ ಮೆಗಾ ಟೂರ್ನಿಗೂ ಮುನ್ನ ಪಂತ್ ನ್ಯೂಯಾರ್ಕ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಜೂನ್ 5 ರಂದು ನಸ್ಸೌ ಕೌಂಟಿ ಮೈದಾನದಲ್ಲಿ ಐರ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ 2024ರ ಮೊದಲ ಪಂದ್ಯದಲ್ಲಿ ರಿಷಭ್ ಆಡಲಿದ್ದಾರೆ.

ಇದಕ್ಕೂ ಮೊದಲು ಪಂತ್ ಅವರ ಟೀಮ್ ಇಂಡಿಯಾಗೆ ಮರಳಿರುವ ಬಗ್ಗೆ ಭಾವನಾತ್ಮಕ ಮಾತುಗಳನ್ನಾಡಿದ್ದಾರೆ. ಈ ವಿಡಿಯೋವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಪಂತ್ ಮುಕ್ತವಾಗಿ ಮಾತನಾಡಿದ್ದಾರೆ.
ಟೀಮ್ ಇಂಡಿಯಾ ಜೆರ್ಸಿ ಧರಿಸಿ ಮೈದಾನದಲ್ಲಿ ಆಡುವುದು ವಿಭಿನ್ನ ಅನುಭವ. ಈ ಸುಂದರ ಕ್ಷಣವನ್ನು ನಾನು ತುಂಬಾ ಮಿಸ್ ಮಾಡಿಕೊಂಡಿದ್ದೇನೆ. ಈಗ ಉತ್ತಮ ಪ್ರದರ್ಶನ ನೀಡುವ ಭರವಸೆ ನನಗಿದೆ ಎಂದು ಪಂತ್ ಹೇಳಿದ್ದಾರೆ.
ಭಾರತ ತಂಡವನ್ನು ನೋಡುತ್ತಿರುವುದು, ಸಹ ಆಟಗಾರರನ್ನು ಮತ್ತೆ ಭೇಟಿಯಾಗಿ ಸಮಯ ಕಳೆಯುತ್ತ ಅವರೊಂದಿಗೆ ಸುತ್ತಾಡುತ್ತಿರುವುದು ಮತ್ತು ಅವರೊಂದಿಗೆ ಮಾತನಾಡುತ್ತಿರುವುದು ನನಗೆ ತುಂಬಾ ಖುಷಿಯಾಗಿದೆ. ನಾವು ಕೆಲವು ದೇಶಗಳಲ್ಲಿ ಆಡಿರುವ ಅಭ್ಯಾಸವಿದೆ. ಆದರೆ ಟಿ20 ವಿಶ್ವಕಪ್‌ನಲ್ಲಿ ನಾವು ವಿಭಿನ್ನ ರೀತಿಯ ಆಟವನ್ನು ಆಡಬೇಕಾಗಿದೆ ಎಂದು ಪಂತ್ ಸಂತಸ ವ್ಯಕ್ತಪಡಿಸಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಪಂತ್ ಸ್ಫೋಟಕ ಪ್ರದರ್ಶನ
ಐಪಿಎಲ್ 2024ರ ಟೂರ್ನಿಗೆ ಮಾರ್ಚ್ 23 ರಂದು 14 ತಿಂಗಳ ನಂತರ ಕ್ರಿಕೆಟ್ ಮೈದಾನಕ್ಕೆ ಪಂತ್ ಮರಳಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕ ಪಂತ್ 446 ರನ್ ಹೊಡೆದಿದ್ದರು. ಇದೀಗ ಜೂನ್ 1 ರಂದು ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಪಂತ್ ಭಾರತದ ಜೆರ್ಸಿಯಲ್ಲಿ ಪಂತ್ ಕಾಣಿಸಿಕೊಳ್ಳಲಿದ್ದಾರೆ.
ಭಾರತ ಪರ 56 ಟಿ20 ಪಂದ್ಯಗಳಲ್ಲಿ 3 ಅರ್ಧಶತಕಗಳ ನೆರವಿನಿಂದ ಪಂತ್ 987 ರನ್ ಗಳಿಸಿದ್ದಾರೆ. ಇದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ವಿಕೆಟ್ ಕೀಪರ್ ಆಗಿ 27 ಕ್ಯಾಚ್, 2 ರನ್ ಔಟ್ ಹಾಗೂ 9 ಸ್ಟಂಪಿಂಗ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications