Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rishabh Pant: ಇಂಗ್ಲೆಂಡ್‌ ನೆಲದಲ್ಲಿ ಗುರುವಿನ ದಾಖಲೆ ಅಳಿಸುವ ಸನಿಹದಲ್ಲಿ ಪಂತ್‌

ಟೀಮ್ ಇಂಡಿಯಾ ಈಗ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದೆ. ಈ ಯುವ ತಂಡದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾದ ಅನುಭವಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರು ನಿವೃತ್ತಿ ಪಡೆದಿದ್ದರಿಂದ, ಕುತೂಹಲ ಹೆಚ್ಚಿಸಿದೆ. ಈ ವೇಳೆ ಬ್ಯಾಟಿಂಗ್ ಕ್ರಮಾಂಕದ ಜವಾಬ್ದಾರಿಯನ್ನು ನಾಯಕ ಶುಭ್‌ಮನ್‌ ಗಿಲ್‌, ಕೆಎಲ್ ರಾಹುಲ್‌, ಉಪನಾಯಕ ರಿಷಭ್ ಪಂತ್ ಹೊರಲಿದ್ದಾರೆ. ಈ ಸರಣಿಯಲ್ಲಿ ಎಲ್ಲರ ಕಣ್ಣುಗಳು ರಿಷಭ್‌ ಪಂತ್ ಅವರ ಮೇಲೆ ನೆಟ್ಟಿರಲಿವೆ.

ಸದ್ಯ ಇಂಗ್ಲೆಂಡ್‌ಗೆ ಪ್ರಕಟಿಸಲಾಗಿರುವ ತಂಡವನ್ನು ನೋಡಿದಾಗ ಅನುಭವಿ ಬ್ಯಾಟರ್‌ಗಳ ಸಂಖ್ಯೆ ಕಡಿಮೆ ಕಾಣುತ್ತದೆ. ಇನ್ನು ಇಂಗ್ಲೆಂಡ್‌ ನೆಲದಲ್ಲಿ ಅಡಿರುವ ಸಂಖ್ಯೆಯೂ ಇನ್ನು ಕಮ್ಮಿ. ಹೀಗಾಗಿ ಈ ಸರಣಿಯಲ್ಲಿ ರಿಷಭ್‌ ಪಂತ್‌ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡುವ ಅವಶ್ಯಕತೆ ಇದೆ. ಇನ್ನು ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಟೀಮ್ ಇಂಡಿಯಾದ ಕೂಲ್‌ ಕ್ಯಾಪ್ಟನ್‌ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಅಳಿಸುವ ಕನಸಿನಲ್ಲಿ ಪಂತ್‌ ಇದ್ದಾರೆ. ಇವರು ಬೌನ್ಸಿ ಟ್ರ್ಯಾಕ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಹಿರಿಮೆ ಹೊಂದಿದ್ದಾರೆ.

Rishabh Pant Eyes MS Dhoni s Unique Wicketkeeper Batting Record in England

ಜೂನ್‌ 20ರಿಂದ ಆರಂಭವಾಗಲಿರುವ ಟೆಸ್ಟ್‌ ಸರಣಿಯ ವೇಳೆ ಟೀಮ್ ಇಂಡಿಯಾ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ರಿಷಭ್‌ ಪಂತ್‌ 222 ರನ್‌ಗಳನ್ನು ಬಾರಿಸುವಲ್ಲಿ ಯಶಸ್ವಿಯಾದರೆ, ತಮ್ಮದೇ ರೋಲ್‌ ಮಾಡೆಲ್‌ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಅಳಿಸಿ ಹಾಕಬಲ್ಲರು. ಧೋನಿ ಇಂಗ್ಲೆಂಡ್‌ ನೆಲದಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ವಿದೇಶಿ ವಿಕೆಟ್‌ ಕೀಪರ್ ಬ್ಯಾಟರ್‌ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ದಾಖಲೆಯ ಕನಸಿನಲ್ಲಿ ಪಂತ್

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಇಂಗ್ಲೆಂಡ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು ರನ್‌ ಮಹಲ್ ಕಟ್ಟಿದ್ದಾರೆ. ಇಂಗ್ಲೆಂಡ್‌ನಲ್ಲಿ ಇವರು ಆಡಿದ 23 ಇನಿಂಗ್ಸ್‌ಗಳಲ್ಲಿ ಒಟ್ಟು 778 ರನ್‌ ಸಿಡಿಸಿದ್ದಾರೆ. ವಿದೇಶಿ ವಿಕೆಟ್‌ ಕೀಪರ್‌ ಇಂಗ್ಲೆಂಡ್‌ ನೆಲದಲ್ಲಿ ದಾಖಲಿಸಿದ ಗರಿಷ್ಠ ಮೊತ್ತ ಇದಾಗಿದೆ. ರಿಷಭ್ ಪಂತ್ ಈ ಸಾಧನೆಯನ್ನು ಅಳಿಸಿ ಹಾಕುವ ಸನಿಹದಲ್ಲಿದ್ದಾರೆ. ಇವರು ಇಂಗ್ಲೆಂಡ್‌ನಲ್ಲಿ 17 ಇನಿಂಗ್ಸ್‌ಗಳನ್ನು ಆಡಿದ್ದು 556 ರನ್‌ ಸಿಡಿಸಿದ್ದಾರೆ. ಪಂತ್‌ ತಮ್ಮ ನೈಜ್ಯ ಆಟವನ್ನು ಆಂಡರ್ಸನ್‌-ತೆಂಡೂಲ್ಕರ್ ಸರಣಿಯ ವೇಳೆ ಮುಂದುವರೆಸಿದರೆ, ಈ ದಾಖಲೆ ಅಳಿಸಿ ಹಾಕಬಹುದು.

Rishabh Pant Eyes MS Dhoni s Unique Wicketkeeper Batting Record in England

ಇಂಗ್ಲೆಂಡ್ ನಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ವಿದೇಶಿ ವಿಕೆಟ್ ಕೀಪರ್ಸ್‌

ಎಂಎಸ್ ಧೋನಿ, ಭಾರತ, 23 ಇನಿಂಗ್ಸ್‌, 778 ರನ್
ರಾಡ್ ಮಾರ್ಷ್, ಆಸ್ಟ್ರೇಲಿಯಾ, 35 ಇನಿಂಗ್ಸ್‌, 773 ರನ್
ಜಾನ್ ವೈಟ್, ದಕ್ಷಿಣ ಆಫ್ರಿಕಾ, 27 ಇನಿಂಗ್ಸ್‌, 684 ರನ್‌
ಇಯಾನ್ ಹೀಲಿ, ಆಸ್ಟ್ರೇಲಿಯಾ, 24 ಇನಿಂಗ್ಸ್‌, 624 ರನ್‌
ಜೆಫ್ ಡುಜಾನ್ ವೆಸ್ಟ್‌ ಇಂಡೀಸ್, 20 ಇನಿಂಗ್ಸ್‌, 604 ರನ್‌

Story first published: Saturday, June 14, 2025, 9:00 [IST]
Other articles published on Jun 14, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+