Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rishabh Pant: ಮಾಜಿ ತಂಡದ ವಿರುದ್ಧ LSG ಕ್ಯಾಪ್ಟನ್‌ ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದು ಏಕೆ?

ಮಂಗಳವಾರ ಲಕ್ನೋ ಹಾಗೂ ಡೆಲ್ಲಿ ನಡುವಣ ಪಂದ್ಯಕ್ಕೆ ಏಕಾನ ಮೈದಾನ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 159 ರನ್‌ ಸಿಡಿಸಿತು. ಈ ವೇಳೆ ಲಕ್ನೋ ತಂಡಕ್ಕೆ ಭರ್ಜರಿ ಆರಂಭ ಸಿಕ್ಕರೂ ಸಹ ಬಿಗ್‌ ಸ್ಕೋರ್‌ ಆಗಲೇ ಇಲ್ಲ. ಇದಕ್ಕೆ ಕಾರಣ ಲಕ್ನೋ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲಾರದರು. ಅಲ್ಲದೆ ದುಬಾರಿ ಆಟಗಾರ ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು.

ಟಾಸ್‌ ಸೋತರು ಮೊದಲು ಬ್ಯಾಟ್‌ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ತಂಡದ ಆರಂಭಿಕರಾದ ಐಡೇನ್‌ ಮಾರ್ಕ್ರಾಮ್‌ (52) ಹಾಗೂ ಮಿಚೆಲ್ ಮಾರ್ಷ್‌ (45) ಜೋಡಿ ಮೊದಲ ವಿಕೆಟ್‌ಗೆ 87 ರನ್‌ ಜೊತೆಯಾಟದ ಕಾಣಿಕೆ ನೀಡಿತ್ತು. ಡೆಲ್ಲಿ ಮುಖದಲ್ಲಿ 10 ಓವರ್‌ಗಳ ಬಳಿಕ ಮಂದಹಾಸ ಮೂಡಿತ್ತು. ಆದರೆ ಮುಂದೆ ಬಂದ ಸ್ಟಾರ್‌ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಸ್ಟಾರ್ ಬ್ಯಾಟರ್‌ ನಿಕೋಲಸ್‌ ಪೂರನ್‌ (9), ಅಬ್ದುಲ್‌ ಸಮದ್‌ (2), ರನ್‌ ಕಲೆ ಹಾಕುವಲ್ಲಿ ವಿಫಲರಾದರು.

Rishabh Pant Faces Fan Backlash for Batting Lower in LSG vs DC Match Sparks Fitness Concerns

ನಾಲ್ಕನೇ ಕ್ರಮಾಂಕದಲ್ಲಿ ಅಬ್ದುಲ್‌ ಏಕೆ?

ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ನಿಕೋಲಸ್‌ ಪೂರನ್‌ ಔಟ್ ಅಗುತ್ತಿದ್ದಂತೆ ಅಬ್ದುಲ್‌ ಸಮದ್‌ ಅವರಿಗೆ ಬ್ಯಾಟಿಂಗ್‌ನಲ್ಲಿ ಬಡ್ತಿ ನೀಡಲಾಯಿತು. ಈ ಕ್ರಮಾಂಕದಲ್ಲಿ ಯಾವಾಗಲೂ ರಿಷಭ್‌ ಪಂತ್ ಬ್ಯಾಟಿಂಗ್ ಬರುತ್ತಿದ್ದಾ ಇದ್ದರು. ಆದರೆ ಡೆಲ್ಲಿ ವಿರುದ್ಧ ಅಬ್ದುಲ್‌ ಸಮದ್‌ ಅವರಿಗೆ ಬಡ್ತಿ ನೀಡಲಾಯಿತು. ಇದಕ್ಕೆ ಕಾರಣ ಹಿಂದಿನ ಪಂದ್ಯದಲ್ಲಿ ಸಮದ್‌, ರಾಜಸ್ಥಾನ ವಿರುದ್ಧ ಬಿರುಸಿನ ಬ್ಯಾಟಿಂಗ್ ನಡೆಸಿದ್ದರು. ಆದರೆ ಈ ಅವಕಾಶವನ್ನು ಸಮರ್ ಅಬ್ದುಲ್ ಸಮದ್‌ ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು.

ಅಬ್ದುಲ್‌ ಸಮದ್‌ ಅವರು ಔಟ್ ಆಗುತ್ತಿದ್ದಂತೆ ಡೇವಿಡ್‌ ಮಿಲ್ಲರ್ ಬಂದ್ರು, ಬಳಿಕ ಮತ್ತೊಂದು ವಿಕೆಟ್‌ ಬೀಳ್ತಾ ಇದ್ದಂತೆ ಇಂಪ್ಯಾಕ್ಟ್ ಪ್ಲೇಯರ್‌ ಆಯುಷ್‌ ಬದೋನಿ ಬಂದ್ರು. ಆಯುಷ್‌ 36 ರನ್‌ ಬಾರಿಸಿ ತಮ್ಮ ಕೆಲಸವನ್ನು ಮುಗಿಸಿದರು.

ಪಂತ್‌ ಏಳನೇ ಕ್ರಮಾಂಕದಲ್ಲಿ ಏಕೆ?

ಈ ಆವೃತ್ತಿಯಲ್ಲಿ ರಿಷಭ್‌ ಪಂತ್‌ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಇದರಿಂದ ಅವರ ಮೇಲೆ ತಂಡ ಇಟ್ಟ ನಂಬಿಕೆಗೆ ಪೆಟ್ಟು ಬಿದ್ದಿದೆ. ಇನ್ನು ತನ್ನ ಮಾಜಿ ತಂಡದ ವಿರುದ್ಧ ರಿಷಭ್‌ ಪಂತ್‌ ಕೇವಲ ಎರಡು ಎಸೆತ ಇದ್ದಾಗ ಬ್ಯಾಟ್ ಮಾಡಲು ಬಂದಿದ್ದು ಏಕೆ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಆದರೆ ಪಂತ್‌ ಅವರ ಕೈಯಲ್ಲಿ ಬ್ಯಾಂಡೇಜ್‌ ಕಟ್ಟಿಕೊಂಡಿದ್ದು ಕಾಣಿಸಿತು. ಇವರು ನೂರಕ್ಕೆ ನೂರರಷ್ಟು ಫಿಟ್‌ ಆಗಿಲ್ವಾ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಒಂದು ವೇಳೆ ಫಿಟ್ ಆಗದೇ ಇದಲ್ಲಿ ಇಂಪ್ಯಾಕ್ಟ್‌ ಪ್ಲೇಯರ್ ಆಗಿ ಏಕೆ ಆಡಬಾರದು ಎಂದು ಅಭಿಮಾನಿಗಳು ಪ್ರಶ್ನೆ ಮಾಡ್ತಾ ಇದ್ದಾರೆ.

Story first published: Tuesday, April 22, 2025, 23:05 [IST]
Other articles published on Apr 22, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+