For Quick Alerts
ALLOW NOTIFICATIONS  
For Daily Alerts
 

IPL 2025: ಯುವ ಆಟಗಾರರಿಗೆ ಗುರುಮಂತ್ರ ನೀಡಿದ ರಿಷಭ್ ಪಂತ್

ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 18ನೇ ಆವೃತ್ತಿಗೆ ಇನ್ನೂ ಕೇವಲ 10 ದಿನಗಳ ಮಾತ್ರ ಬಾಕಿ ಉಳಿದಿವೆ. ಎಲ್ಲಾ ಆಟಗಾರರು ತಮ್ಮ ತಮ್ಮ ಫ್ರಾಂಚೈಸಿಗಳಿಗೆ ಸೇರಿಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡದ ನಾಯಕ ರಿಷಭ್ ಪಂತ್ ಯುವ ಆಟಗಾರರಿಗೆ ಒಂದು ಸಲಹೆಯನ್ನು ನೀಡಿದ್ದಾರೆ. ಐಪಿಎಲ್‌ 2025ರ ಟೂರ್ನಿಗೆ ರಿಷಭ್ ಪಂತ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದಾರೆ.

ರಿಷಭ್ ಪಂತ್ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದರು. ಅವರನ್ನು ಮೆಗಾ ಹರಾಜಿನಲ್ಲಿ ಲಕ್ನೋ ಫ್ರಾಂಚೈಸಿ 27 ಕೋಟಿ ರೂ.ಗೆ ಖರೀದಿಸಿತು. ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದಲ್ಲಿ ರಿಷಭ್ ಪಂತ್ ಇದ್ದರು. ಆದರೆ, ಅವರಿಗೆ ಒಂದೇ ಒಂದು ಪಂದ್ಯ ಆಡುವ ಅವಕಾಶ ಸಿಗಲಿಲ್ಲ. ಅವರು 2017 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.

Rishabh Pant has advice for young players ahead of IPL 2025

ಸಂದರ್ಶನವೊಂದರಲ್ಲಿ ಮಾತನಾಡಿರುವ ರಿಷಭ್ ಪಂತ್, 'ಬಾಲ್ಯದಿಂದಲೂ ನನಗೆ ಭಾರತ ಪರ ಆಡಬೇಕೆಂಬ ಒಂದೇ ಒಂದು ಕನಸಿತ್ತು. ನಾನು ಐಪಿಎಲ್‌ನಲ್ಲಿ ಆಡುವ ಬಗ್ಗೆ ಎಂದಿಗೂ ಯೋಚಿಸಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಯುವ ಆಟಗಾರರು ಐಪಿಎಲ್ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ ಅಂದುಕೊಳ್ಳುತ್ತೇನೆ. ಖಂಡಿತ, ಇದು ಒಂದು ದೊಡ್ಡ ವೇದಿಕೆ, ಆದರೆ ನಿಮ್ಮ ದೇಶಕ್ಕಾಗಿ ಆಡುವುದು ನಿಮ್ಮ ಗುರಿಯಾಗಿದ್ದರೆ, ಎಲ್ಲವೂ ಸರಿಯಾಗಿ ನಡೆಯುತ್ತದೆ. ಅದರಲ್ಲಿ ಐಪಿಎಲ್ ಕೂಡ ಸೇರಿದೆ ಎಂದು ಯುವ ಆಟಗಾರರಿಗೆ ಗುರುಮಂತ್ರ ನೀಡಿದ್ದಾರೆ.

ಒಂದು ದಿನ ನಾನು ಭಾರತ ಪರ ಆಡುತ್ತೇನೆ ಎಂದು ನಾನು ಯಾವಾಗಲೂ ಭಾವಿಸಿದ್ದೆ. ದೇವರ ಆಶೀರ್ವಾದದಿಂದ ನನಗೆ 18ನೇ ವಯಸ್ಸಿನಲ್ಲಿ ಈ ಅವಕಾಶ ಸಿಕ್ಕಿತು. ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದು ಪಂತ್ ಹೇಳಿದ್ದಾರೆ.

ಪಂತ್ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಅವರ ಟ್ರೇಡ್‌ಮಾರ್ಕ್ ಶಾಟ್ ಒಂದು ಕೈಯಿಂದ ಸಿಕ್ಸ್ ಹೊಡೆಯುವುದು. ಹೀಗೆ ಮಾಡುವಾಗ ಬ್ಯಾಟ್ ಆಗಾಗ್ಗೆ ಅವರ ಕೈಯಿಂದ ಜಾರಿಹೋಗುತ್ತದೆ. ಇದು ಏಕೆ ನಡೆಯುತ್ತದೆ ಎಂಬುದರ ಬಗ್ಗೆ ಪಂತ್ ವಿವರಿಸಿದ್ದಾರೆ. 'ನನ್ನ ಕೈಯ ಕೆಳಗಿನ ಹಿಡಿತ ಸಡಿಲವಾಗಿರುವುದರಿಂದ ಇದು ಹೆಚ್ಚಾಗಿ ನಡೆಯುತ್ತದೆ. ನಾನು ಸ್ವಲ್ಪ ಸಹಾಯ ಮಾಡಲು ಮಾತ್ರ ನನ್ನ ಕೆಳಗಿನ ಕೈಯನ್ನು ಬಳಸುತ್ತೇನೆ, ಆದರೆ ಕೆಲವೊಮ್ಮೆ ಅದು ಮೇಲುಗೈ ಸಾಧಿಸುತ್ತದೆ. ಅದಕ್ಕಾಗಿಯೇ ಸಿಕ್ಸರ್ ಬಾರಿಸುವಾಗ ನಾನು ನನ್ನ ಮೇಲಿನ ಕೈ ಹಿಡಿತವನ್ನು ಬಿಗಿಯಾಗಿ ಇಟ್ಟುಕೊಳ್ಳುತ್ತೇನೆ ಎಂದಿದ್ದಾರೆ.

ಬಾಲ್ಯದಲ್ಲಿ ಜಿಮ್ನಾಸ್ಟಿಕ್ಸ್‌ನಲ್ಲಿ ತೊಡಗಿಸಿಕೊಂಡಿದ್ದರಿಂದ ಕ್ರಿಕೆಟಿಗನಾಗಿ ತನಗೆ ಪ್ರಯೋಜನವಾಯಿತು ಎಂದು ಪಂತ್ ತಿಳಿಸಿದ್ದಾರೆ. 'ನಾನು ಬಾಲ್ಯದಲ್ಲಿ ಜಿಮ್ನಾಸ್ಟಿಕ್ಸ್ ಮಾಡುತ್ತಿದ್ದೆ. ನನ್ನ ಜಿಮ್ನಾಸ್ಟಿಕ್ಸ್ ತರಬೇತುದಾರ ಯಾವಾಗಲೂ ಇದು ಜೀವನದಲ್ಲಿ ತುಂಬಾ ಉಪಯುಕ್ತವಾಗುತ್ತದೆ ಎಂದು ಹೇಳುತ್ತಿದ್ದರು. ನಮ್ಮ ಭಾರತ ತಂಡದ ತರಬೇತುದಾರ ಬಸು ಸರ್ ಒಮ್ಮೆ ನಿಮ್ಮ ಜಿಮ್ನಾಸ್ಟಿಕ್ಸ್ ತರಬೇತುದಾರರಿಗೆ ಧನ್ಯವಾದ ಹೇಳಲು ಹೇಳಿದ್ದರು. ಏಕೆಂದರೆ ಅವರು ಬಾಲ್ಯದಲ್ಲಿ ನಿಮಗೆ ಕಲಿಸಿದ ವಿಷಯಗಳು ಇಂದಿಗೂ ನಿಮಗೆ ಪ್ರಯೋಜನವನ್ನು ನೀಡುತ್ತಿವೆ. ಪಂತ್ ಅವರು ಹ್ಯಾಂಡ್ ಸ್ಪ್ರಿಂಗ್‌ಗಳನ್ನು ಅಭ್ಯಾಸ ಮಾಡುತ್ತಲೇ ಇದ್ದರು. ಅದು ಅವರ ಫಿಟ್‌ನೆಸ್‌ನಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ ಎಂದು ಹೇಳಿದ್ದಾರೆ. ಯಾವುದೇ ರೀತಿಯ ಕ್ರೀಡೆಯನ್ನು ಆಡುವಾಗ ತಮ್ಮ ದೇಶವನ್ನು ಮೊದಲು ಆಯ್ಕೆಯಾಗಿ ಇಡುವಂತೆ ಪಂತ್ ಯುವಕರಿಗೆ ಸಂದೇಶ ನೀಡಿದ್ದಾರೆ.

Story first published: Wednesday, March 12, 2025, 10:46 [IST]
Other articles published on Mar 12, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+