ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಷಭ್ ಪಂತ್ ಆಸ್ಟ್ರೇಲಿಯಾಗೆ ಕೇವಲ ಪ್ರವಾಸಿಗನಾಗಿ ಮಾತ್ರ ತೆರಳಿದ್ದಾರೆ: ಆಕಾಶ್ ಚೋಪ್ರ

Rishabh Pant has only gone as a tourist to Australia, says Aakash Chopra

ಮಾಜಿ ಕ್ರಿಕೆಟಿಗ ಕಾಮೆಂಟೇಟರ್ ಆಕಾಶ್ ಚೋಪ್ರ ಭಾರತೀಯ ವಿಕೆಟ್ ಕೀಪರ್‌ಗಳ ಸರದಿಯಲ್ಲಿ ಕೊನೆಯ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಆಸ್ಟ್ರೇಲಿಯಾ ಎ ವಿರುದ್ಧ ಭಾರತ ಎ ತಂಡದಿಂದ ಹೊರಗುಳಿದ ನಂತರ ಆಕಾಶ್ ಚೋಪ್ರ ಈ ಮಾತನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಭಾರತ ಕ್ರಿಕೆಟ್ ತಂಡದಲ್ಲಿ ರಿಷಭ್ ಪಂತ್ ಕೇವಲ ಓರ್ವ ಪ್ರವಾಸಿಗನಾಗಿ ಆಸ್ಟ್ರೇಲಿಯಾಗೆ ತೆರಳಿದ್ದಾರೆ ಎಂದು ಚೋಪ್ರ ಹೇಳಿದ್ದಾರೆ. 23ರ ಹರೆಯದ ರಿಷಭ್ ಪಂತ್ ಸೀಮಿತ ಓವರ್‌ಗಳ ಸರಣಿಯಲ್ಲಿ ಒಂದು ಪಂದ್ಯದಲ್ಲೂ ಅವಕಾಶವನ್ನು ಪಡೆದಿರಲಿಲ್ಲ. ಅದಾದ ಬಳಿಕ ಭಾರತ ಎ ಹಾಗೂ ಆಸ್ಟ್ರೇಲಿಯಾ ಎ ತಂಡಗಳ ನಡುವಿನ ಪಂದ್ಯದಿಂದಲೂ ಅವರನ್ನು ಹೊರಗಿಟ್ಟು ವೃದ್ಧಿಮಾನ್ ಸಾಹ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರು.

ಇಂಗ್ಲೆಂಡ್ ವಿರುದ್ಧ ಮೊಟೆರಾದಲ್ಲಿ ಡೇ-ನೈಟ್ ಟೆಸ್ಟ್: ಬೃಹತ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯವ ಬಗ್ಗೆ ಜಯ್ ಶಾ ಮಾಹಿತಿಇಂಗ್ಲೆಂಡ್ ವಿರುದ್ಧ ಮೊಟೆರಾದಲ್ಲಿ ಡೇ-ನೈಟ್ ಟೆಸ್ಟ್: ಬೃಹತ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯವ ಬಗ್ಗೆ ಜಯ್ ಶಾ ಮಾಹಿತಿ

"ರಿಷಭ್ ಪಂತ್ ಭಾರತೀಯ ವಿಕೆಟ್ ಕೀಪರ್‌ಗಳ ಸರದಿಯಲ್ಲಿ ಅಂತಿಮ ಸ್ಥಾನದಲ್ಲಿ ನಿಲ್ಲುತ್ತಾರೆ ಮತ್ತು ಆ ಪಟ್ಟಿಯಲ್ಲಿ ಅವರು ಅತ್ಯಂತ ಕೆಳಗೆ ಕಾಣಿಸಿಕೊಳ್ಳುತ್ತಾರೆ. ಭಾರತೀಯ ತಂಡಕ್ಕೆ ಒಂದು ಆಯ್ಕೆಯಿರುತ್ತದೆ. ಆದರೆ ಭಾರತ ಎ ಹಾಗೂ ಆಸ್ಟ್ರೇಲಿಯಾ ಎ ನಡುವಿನ ಪಂದ್ಯದಲ್ಲಿ ಐವರು ಬ್ಯಾಟ್ಸ್‌ಮನ್‌ಗಳ ಬದಲಾಗಿ ಆರು ಮಂದಿ ಬ್ಯಾಟ್ಸ್‌ಮನ್‌ಗಳೊಂದಿಗೆ ಕಣಕ್ಕಿಳಿಯಬಹುದುತ್ತು ಎಂದು ಚೋಪ್ರ ಹೇಳಿದ್ದಾರೆ.

ವೃದ್ಧಿಮಾನ್ ಸಾಹ ಅವರನ್ನು ವಿಕೆಟ್ ಕೀಪರ್ ಆಗಿ ಖಂಡಿತಾ ಖಣಕ್ಕಿಳಿಸಬೇಕಿತ್ತು. ಆದರೆ ರಿಷಭ್ ಪಂತ್ ಅವರನ್ನು ಕೂಡ ಆಡಿಸಬಹುದಾಗಿತ್ತು ಎಂದು ಆಕಾಶ್ ಚೋಪ್ರ ಅಭಿಮಾನಿಯೊಬ್ಬರು ರಿಷಭ್ ಪಂತ್ ಅವರ ಟೀಮ್ ಇಂಡಿಯಾದ ಭವಿಷ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಟೆಸ್ಟ್ ಸರಣಿಗೆ ಟೀಮ್ ಇಂಡಿಯಾಕ್ಕೆ ಹೊಸ ಜೆರ್ಸಿಭಾರತ vs ಆಸ್ಟ್ರೇಲಿಯಾ: ಟೆಸ್ಟ್ ಸರಣಿಗೆ ಟೀಮ್ ಇಂಡಿಯಾಕ್ಕೆ ಹೊಸ ಜೆರ್ಸಿ

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವುಳಿದ ನಂತರ ರಿಷಭ್ ಪಂತ್‌ಗೆ ನಿರಂತರವಾಗಿ ಸಾಕಷ್ಟು ಅವಕಾಶಗಳು ದೊರೆಯಿತು. ಆದರೆ ಈ ಅವಕಾಶಗಳನ್ನು ಸಮರ್ಥವಾಗಿ ಬಳಸಲು ಪಂತ್ ವಿಫಲತಾದರು. ಹೀಗಾಗಿ ಸೀಮಿತ ಓವರ್‌ಗಳಲ್ಲಿ ಕೆಎಲ್ ರಾಹುಲ್ ತಂಡದ ಕೀಪಿಂಗ್ ಜವಾಬ್ಧಾರಿ ಹೊತ್ತಿದ್ದಾರೆ. ಕಳೆದ ಐಪಿಎಲ್‌ನಲ್ಲೂ ಪಂತ್ ಪ್ರದರ್ಶನ ನೀರಸವಾಗಿತ್ತು. ಟೂರ್ನಿಯಲ್ಲಿ ಕೇವಲ ಒಂದು ಅರ್ಧ ಶತಕವನ್ನು ಸಿಡಿಸಲಷ್ಟೇ ಪಂತ್ ಶಕ್ತರಾಗಿದ್ದರು.

Story first published: Thursday, December 10, 2020, 20:21 [IST]
Other articles published on Dec 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X