For Quick Alerts
ALLOW NOTIFICATIONS  
For Daily Alerts
 

Rishabh Pant Health Update : ರಿಷಭ್ ಪಂತ್ ಚೇತರಿಕೆ ಬಗ್ಗೆ ಪ್ರಮುಖ ಮಾಹಿತಿ ನೀಡಿದ ಕುಟುಂಬದ ಆಪ್ತ

Rishabh Pant Health Update: Pant Close Family Aide said his Condition Has Improved Substantially

ಟೀಮ್ ಇಂಡಿಯಾದ ಯುವ ಆಟಗಾರ ರಿಷಭ್ ಪಂತ್ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಂತ್ ಅವರ ಇತ್ತೀಚಿನ ಆರೋಗ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಸಾಕಷ್ಟು ಚೇತರಿಕೆ ಕಂಡು ಬಂದಿದೆ ಎನ್ನಲಾಗಿದೆ. ಹೀಗಾಗಿ ತಕ್ಷಣಕ್ಕೆ ಅವರನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸುವ ಯೋಜನೆಯಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ಶುಕ್ರವಾರ ಡಿಸೆಂಬರ್ 30ರ ಮುಂಜಾನೆ ರಿಷಭ್ ಪಂತ್ ಕಾರು ಅಪಘಾತಕ್ಕೆ ಒಳಗಾಗಿತ್ತು. ಕುಟುಂಬಸ್ಥರಿಗೆ ಅರ್ಪ್ರೈಸ್ ನೀಡುವ ಹಿನ್ನೆಲೆಯಲ್ಲಿ ಬೆಳಗಿನ ಜಾವ ಕಾರಿನಲ್ಲಿ ಪಂತ್ ಒಂಟಿಯಾಗಿ ಪ್ರಯಾಣಿಸುತ್ತಿದ್ದರು. ಈ ಭೀಕರ ಅಪಘಾತದಲ್ಲಿ ಕಾರು ಬೆಂಕಿಗೆ ಆಹುತಿಯಾಗಿದ್ದರು ಕೂಡ ಪಂತ್ ಅದೃಷ್ಟವಶಾತ್ ದೊಡ್ಡ ಅನಾಹುತದಿಂದ ಪಾರಾಗಿದ್ದರು.

ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ

ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ

ಕಾರು ಅಪಘಾತಕ್ಕೆ ಒಳಗಾದ ಬಳಿಕ ಅವರನ್ನು ತಕ್ಷಣವೇ ಸಾಕ್ಷಮ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಅದಶದ ಬಳಿಕ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಇಲ್ಲಿಯೇ ಪಂತ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಭಾನುವಾರದ ವೇಳೆ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ ಕಂಡು ಬಂದಿದೆ ಎಂದು ಪಂತ್ ಅವರ ಕುಟುಂಬದ ಆಪ್ತರೊಬ್ಬರು ಮಾಹಿತಿ ನೀಡಿದ್ದಾರೆ.

ಮಾಹಿತಿ ನೀಡಿದ ಪಂತ್ ಕುಟುಂಬದ ಆಪ್ತ

ಮಾಹಿತಿ ನೀಡಿದ ಪಂತ್ ಕುಟುಂಬದ ಆಪ್ತ

"ನಿನ್ನೆಯಿಂದ ಪಂತ್ ಅವರ ಆರೋಗ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚೇತರಿಕೆ ಕಾಣುತ್ತಿದೆ. ತಕ್ಷಣಕ್ಕೆ ಅವರನ್ನು ಎಲ್ಲಿಗೂ ಸ್ಥಳಾಂತರಿಸುವ ಯೋಜನೆಗಳು ಇಲ್ಲ"ಎಂದು ರಿಷಭ್ ಪಂತ್ ಅವರ ಕುಟುಂಬದ ಆಪ್ರ ಉಮೇಶ್ ಕುಮಾರ್ ಪಿಟಿಐಗೆ ಮಾಹಿತಿ ನೀಡಿದ್ದಾರೆ. ಇನ್ನು ಕಳೆದ ಶುಕ್ರವಾರವೇ ಪಂತ್ ಹಣೆಗೆ ಪ್ಲಾಸ್ಟಿಕ್ ಸರ್ಜರಿ ನಡೆಸಲಾಗಿದ್ದು ಇಂದು ಅದರ ಮೊದಲ ಡ್ರೆಸ್ಸಿಂಗ್ ಕೂಡ ಮಾಡಲಾಗಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಇನ್ನು ಬಿಸಿಸಿಐ ವೈದ್ಯಕೀಯ ಸಿಬ್ಬಂದಿಗಳು ಕೂಡ ಪಂತ್ ಚಿಕಿತ್ಸೆ ಪಡೆಯುತ್ತಿರುವ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ. ಮೂಳೆಕಟ್ಟು ಗಾಯದ ಚಿಕಿತ್ಸೆಯ ಬಗ್ಗೆ ಇಬ್ಬರು ಕೂಡ ಸೇರಿ ಎಲ್ಲಿ ಚಿಕಿತ್ಸೆ ನೀಡಬೇಕು ಎಂದು ನಿರ್ಧರಿಸಲಿದ್ದಾರೆ ಎಂದು ಕೂಡ ಉಮೇಶ್ ಕುಮಾರ್ ಮಾಹಿತಿ ಹಂಚಿಕಕೊಂಡಿದ್ದಾರೆ.

ಪಂತ್ ಆರೋಗ್ಯ ವಿಚಾರಿಸಿದ ಸ್ಟಾರ್‌ಗಳು

ಪಂತ್ ಆರೋಗ್ಯ ವಿಚಾರಿಸಿದ ಸ್ಟಾರ್‌ಗಳು

ಇನ್ನು ರಿಷಭ್ ಪಂತ್ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಬಳಿಕ ಅವರ ಚೇತರಿಕೆಗಾಗಿ ವಿಶ್ವಾದ್ಯಂತ ಕ್ರಿಕೆಟ್ ಪ್ರೇಮಿಗಳು ಹಾಗೂ ಅನೇಕ ತಾರೆಯರು ಶುಭಹಾರೈಸಿದ್ದಾರೆ. ಕ್ರಿಕೆಟರ್ ನಿತೀಶ್ ರಾಣಾ, ಬಾಲಿವುಡ್ ನಟರಾದ ಅನಿಲ್ ಕಪೂರ್ ಹಾಗೂ ಅನುಪಮ್ ಖೇರ್ ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ಭಾನುವಾರ ಆಸ್ಪತ್ರೆಗೆ ಭೆಟಿ ನೀಡಿ ಪಂತ್ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿದ ಅನಿಲ್ ಕಪೂರ್, "ಪಂತ್ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆತನನ್ನು ನಾವು ಅಭಿಮಾನಿಗಳಾಗಿ ಭೇಟಿಯಾದೆವು. ಆದಷ್ಟು ಶೀಘ್ರವಾಗಿ ಆತ ಚೇತರಿಸಿಕೆ ಕಾಣಲು ಪ್ರಾರ್ಥಿಸುತ್ತೇವೆ ಆತ ಮತ್ತೆ ಆಡುವುದನ್ನು ನೋಡಲು ಬಯಸುತ್ತೇನೆ" ಎಂದಿದ್ದಾರೆ ಅನಿಲ್ ಕಪೂರ್.

ಇನ್ನು ಅನುಪಮ್ ಖೇರ್ ಮಾತನಾಡಿ "ಎಲ್ಲವೂ ಚೆನ್ನಾಗಿದೆ. ನಾವು ಪಂತ್ ಅವರನ್ನು ಅವರ ತಾಯಿ ಹಾಗೂ ಕುಟುಂಬಸ್ಥರನ್ನು ಭೇಟಿಯಾದೆವು. ಎಲ್ಲರೂ ಕೂಡ ಆರೋಗ್ಯವಾಗಿದ್ದಾರೆ. ಆತನನ್ನು ನಾವು ಬಹಳ ನಗಿಸಿದೆವು" ಎಂದು ಅನಿಲ್ ಕಪೂರ್ ಜೊತೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದ ಅನುಪಮ್ ಖೇರ್ ಪ್ರತಿಕ್ರಿಯಿಸಿದ್ದಾರೆ.

Story first published: Sunday, January 1, 2023, 13:50 [IST]
Other articles published on Jan 1, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+