Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rishabh Pant Health Update: ಇಂದು ಮೊಣಕಾಲು, ಪಾದದ ಗಾಯದ ಪರೀಕ್ಷೆಗೆ ಒಳಗಾಗಲಿರುವ ಪಂತ್

Rishabh Pant Health Update: Rishabh Pant Will Undergo Knee And Ankle Tests On December 31st

ಡಿಸೆಂಬರ್ 31ರ ಶನಿವಾರದಂದು ರಿಷಬ್ ಪಂತ್ ಮೊಣಕಾಲು ಮತ್ತು ಪಾದದ ಗಾಯದ ಪರೀಕ್ಷೆಗೆ ಒಳಗಾಗಲಿದ್ದಾರೆ. ಶುಕ್ರವಾರ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಪಂತ್‌ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಂತ್‌ಗೆ ಹೆಚ್ಚಿನ ಅಪಾಯ ಇಲ್ಲದೇ ಇದ್ದರೂ, ಅವರು ಕೆಲವು ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ.

ತಲೆ, ಬೆನ್ನು ಮತ್ತು ಪಾದಗಳಿಗೆ ಗಾಯಗಳಾಗಿದೆ. ಶನಿವಾರ ಗಾಯಗಳನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದು, ನಂತರ ಅವರಿಗೆ ಶಸ್ತ್ರಚಿಕಿತ್ಸೆ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ಮೂಲಗಳ ಪ್ರಕಾರ, ಅವರ ಮುಖ, ಬೆನ್ನಿಗೆ ಪ್ಲಾಸ್ಟಿಕ್ ಸರ್ಜರಿ ಮಾಡುವ ಸಾಧ್ಯತೆ ಇದೆ.

ಜನವರಿ ತಿಂಗಳಿನಲ್ಲಿ ನಡೆಯುವ ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಪಂತ್ ಆಯ್ಕೆಯಾಗಿರಲಿಲ್ಲ. ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ಕೂಡ ಅವರನ್ನು ಹೊರಗಿಡಲು ಬಿಸಿಸಿಐ ನಿರ್ಧರಿಸಿತ್ತು. ಫೆಬ್ರವರಿಯಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಸಿದ್ಧರಾಗಲು ಪಂತ್‌ಗೆ ಕೇಳಲಾಗಿತ್ತು.

ರಿಷಬ್ ಪಂತ್ ಮೊಣಕಾಲು ಬಲಪಡಿಸಲು ಜನವರಿ 6 ರಂದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (NCA) ಹಾಜರಾಗಬೇಕಿತ್ತು. ಅಲ್ಲಿ ಕಂಡೀಷನಿಂಗ್ ಮತ್ತು ಅಭ್ಯಾಸ ಮಾಡಲು ಸೂಚನೆ ನೀಡಲಾಗಿತ್ತು. ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮುನ್ನ ಅವರು ಫಿಟ್ ಆಗಬೇಕೆಂದು ಬಿಸಿಸಿಐ ಬಯಸಿತ್ತು.

ಮೊದಲೇ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದ ರಿಷಬ್‌ ಪಂತ್‌, ಅಪಘಾತನ ನಂತರ ಅದು ಹೆಚ್ಚಾಗಿರುವ ಸಾಧ್ಯತೆ ಇದೆ. ಅಪಘಾತದಲ್ಲಿ ಅವರಿಗೆ ಹಣೆಯ ಮೇಲೆ ಗಾಯವಾಗಿದೆ. ಬಲ ಮೊಣಕಾಲಿನ ಅಸ್ಥಿರಜ್ಜು ಕೂಡ ಗಾಯಗೊಂಡಿದ್ದು, ಬಲ ಮಣಿಕಟ್ಟು, ಪಾದ ಮತ್ತು ಬೆರಳಿಗೆ ಗಾಯವಾಗಿದೆ. ಬೆನ್ನಿನ ಮೇಲೆ ಚರ್ಮಕ್ಕೆ ಗಾಯಗಳಾಗಿದೆ.

ಪಂತ್ ಆರೋಗ್ಯದ ಬಗ್ಗೆ ಬಿಸಿಸಿಐ ಮೇಲ್ವಿಚಾರಣೆ

ಪಂತ್ ಆರೋಗ್ಯದ ಬಗ್ಗೆ ಬಿಸಿಸಿಐ ಮೇಲ್ವಿಚಾರಣೆ

ರಿಷಬ್ ಪಂತ್ ಆರೋಗ್ಯ ಸದ್ಯಕ್ಕೆ ಸ್ಥಿರವಾಗಿದೆ. ಅವರ ಗಾಯದ ಪ್ರಮಾಣ ಖಚಿತಪಡಿಸಿಕೊಳ್ಳಲು ಡಿಸೆಂಬರ್ 31 ರಂದು ಪರೀಕ್ಷೆಗಳನ್ನು ಮಾಡಲಾಗುತ್ತದೆ. ನಂತರ ಅವರಿಗೆ ಆಗಬೇಕಾಗಿರುವ ಶಸ್ತ್ರಚಿಕಿತ್ಸೆಯ ಬಗ್ಗೆ ನಿರ್ಧರಿಲಾಗುತ್ತದೆ.

"ರಿಷಬ್ ಪಂತ್ ಅಸ್ಥಿರಜ್ಜು ಚಿಕಿತ್ಸೆಯನ್ನು ಸ್ವತಃ ಬಿಸಿಸಿಐ ಮೇಲ್ವಿಚಾರಣೆ ಮಾಡುತ್ತಿದೆ. ಈ ಬಗ್ಗೆ ಡೆಹ್ರಾಡೂನ್‌ನಲ್ಲಿರುವ ಪಂತ್ ಅವರ ಕುಟುಂಬ ಸದಸ್ಯರು ಮತ್ತು ವೈದ್ಯರಿಗೆ ಮಾಹಿತಿ ನೀಡಲಾಗಿದೆ. ಗಾಯಗಳ ಪರೀಕ್ಷೆಯ ನಂತರ ಪಂತ್‌ರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ. ನಂತರ ಮುಂಬೈನಲ್ಲಿರುವ ಬಿಸಿಸಿಐನ ವೈದ್ಯರಯ ಪಂತ್‌ರನ್ನು ಪರೀಕ್ಷೆಗೆ ಒಳಪಡಿಸಲಿದ್ದಾರೆ. ನಂತರ ಅವರಿಗೆ ಚಿಕಿತ್ಸೆ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಅವಶ್ಯಕತೆ ಇದ್ದರೆ ಅವರಿಗೆ ವಿದೇಶದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Rishabh Pant: ಮಾತೃ ವಿಯೋಗದ ನಡುವೆಯೂ ರಿಷಭ್ ಪಂತ್ ಶೀಘ್ರ ಚೇತರಿಕೆಗೆ ಹಾರೈಸಿದ ಪ್ರಧಾನಿ ಮೋದಿ

ಟೆಸ್ಟ್ ಸರಣಿಯಿಂದ ಹೊರಕ್ಕೆ, ಐಪಿಎಲ್ ಆಡೋದು ಅನುಮಾನ?

ಟೆಸ್ಟ್ ಸರಣಿಯಿಂದ ಹೊರಕ್ಕೆ, ಐಪಿಎಲ್ ಆಡೋದು ಅನುಮಾನ?

ರಿಷಬ್ ಪಂತ್ ಸುಧಾರಿಸಿಕೊಳ್ಳಲು ಇನ್ನು ಎಷ್ಟು ದಿನ ಬೇಕಾಗುತ್ತದೆ ಎಂದು ಈಗಲೇ ಹೇಳುವುದು ಸಾಧ್ಯವಿಲ್ಲ. ಅವರು ಭಾರತ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. 2023 ಐಪಿಎಲ್‌ನಲ್ಲಿ ಆಡುವುದು ಕೂಡ ಅನುಮಾನ ಎಂದು ಹೇಳಲಾಗಿದೆ.

ತಾಯಿಯೊಂದಿಗೆ ಹೊಸ ವರ್ಷ ಆಚರಿಸಲು ರಿಷಬ್‌ ಪಂತ್‌ ರೂರ್ಕಿಗೆ ತೆರಳುತ್ತಿದ್ದಾಗ, ಕಾರು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು. ಸ್ಥಳೀಯರು ಪಂತ್‌ರನ್ನು ರಕ್ಷಿಸಿ ರೂರ್ಕಿಯ ಸಕ್ಷಮ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಅಪಘಾತಕ್ಕೆ ಕಾರಣ ತಿಳಿಸಿದ ಪೊಲೀಸ್ ಮಹಾನಿರ್ದೇಶಕ

ಅಪಘಾತಕ್ಕೆ ಕಾರಣ ತಿಳಿಸಿದ ಪೊಲೀಸ್ ಮಹಾನಿರ್ದೇಶಕ

ಹರಿದ್ವಾರ ಜಿಲ್ಲೆಯ ಮಂಗಳೌರ್ ಮತ್ತು ನರ್ಸನ್ ನಡುವೆ ಪಂತ್ ಕಾರು ಅಪಘಾತಕ್ಕೆ ಒಳಗಾಯಿತು. ವಾಹನ ಚಲಾಯಿಸುವ ವೇಳೆ ನಿದ್ರೆಗೆ ಜಾರಿದ್ದರಿಂದ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ ಎಂದು ಉತ್ತರಾಖಂಡ್ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಹೇಳಿದ್ದಾರೆ.

ಕಾರಿನಲ್ಲಿ ರಿಷಬ್ ಪಂತ್ ಮಾತ್ರ ಇದ್ದರು, ಅಪಘಾತವಾಗುತ್ತಿದ್ದಂತೆ ಕಾರಿಗೆ ಬೆಂಕಿ ಹತ್ತಿಕೊಂಡಿದ. ಕಾರಿನ ಕಿಟಕಿ ಗಾಜು ಹೊಡೆದು ಹೊರ ಬಂದಿದ್ದರಿಂದ ಪಂತ್‌ ಹೆಚ್ಚಿನ ಅಪಾಯದಿಂದ ಪಾರಾದರು.

Story first published: Saturday, December 31, 2022, 8:30 [IST]
Other articles published on Dec 31, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+